ಮಾತಂಡ ಸಿ. ಪೂವಯ್ಯ, ಸಹಕಾರಿಗಳು: ಬೆಳ್ಳುಮಾಡು. Bellumadu

ಮಾತಂಡ ಸಿ. ಪೂವಯ್ಯ, ಸಹಕಾರಿಗಳು: ಬೆಳ್ಳುಮಾಡು - ಕೊಡಗು.



ಮಾತಂಡ ಸಿ. ಪೂವಯ್ಯನವರು(72) ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬೆಳ್ಳುಮಾಡು ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.

ಮಾತಂಡ ಸಿ. ಪೂವಯ್ಯನವರ ಬಗ್ಗೆ ತಿಳಿಯುವ ಮೊದಲು ಅವರ ತಂದೆಯವರಾದ ದಿವಂಗತ ಮಾತಂಡ ಕೆ. ಚಂಗಪ್ಪನವರ ಬಗ್ಗೆ ತಿಳಿಯುವುದು ಅವಶ್ಯವೆನಿಸುತ್ತದೆ. ದಿವಂಗತ ಚಂಗಪ್ಪನವರು ಕುಂಜಲಗೇರಿ, ಕಡಂಗ-ಮರೂರು ಹಾಗೂ ಬೆಳ್ಳುಮಾಡು ಗ್ರಾಮಗಳಲ್ಲಿ ಸಹಕಾರ ಚಳುವಳಿಗೆ ಮೂಲ ಕಾರಣ ಪುರುಷರು. 1936 ರಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಕಾರಣೀಬೂತರಾದ ಹಿರಿಯ ಸಹಕಾರಿಗಳು.

1975 ರಲ್ಲಿ ಮಾತಂಡ ಸಿ. ಪೂವಯ್ಯನವರ ಹಿರಿಯ ಸಹೋದರರಾದ ಪ್ರಸ್ತುತ ಅಖಿಲ ಕೊಡವ ಸಮಾಜ ಅಧ್ಯಕ್ಷರಾಗಿರುವ ಮಾತಂಡ ಮೊಣ್ಣಪ್ಪನವರು ಎಂ.ಪಿ.ಸಿ.ಎಸ್ (‌Multi Purpose Cooperative Society) ಯ ಅಧ್ಯಕ್ಷರಾಗಿದ್ದರು. ತದ ನಂತರ 1977ರಲ್ಲಿ ಬೆಳ್ಳುಮಾಡು ಗ್ರಾಮದ ಸುತ್ತ-ಮತ್ತಲಿನ ಸಣ್ಣ ಸಣ್ಣ ಸಹಕಾರ ಸಂಘಗಳು ಸಂಯೋಜನೆಗೊಂಡು ಬೆಳ್ಳುಮಾಡು ವ್ಯವಸಾಯ ಸೇವಾ ಸಹಕಾರ ಸಂಘ(VSSN ಬ್ಯಾಂಕ್) ಸ್ಥಾಪನೆಯಾಯಿತು. ಆ ಸಂದರ್ಭದಲ್ಲಿ ಮಾತಂಡ ಮೊಣ್ಣಪ್ಪನವರು VSSN ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಮಾತಂಡ ಸಿ. ಪೂವಯ್ಯನವರು ತಮ್ಮ ತಂದೆ ದಿ.ಚಂಗಪ್ಪ ಹಾಗೂ ಸಹೋದರ ಮೊಣ್ಣಪ್ಪನವರು ಸಹಕಾರ  ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯಿಂದ ಪ್ರೇರಣೆಗೊಂಡು 1983 ರಿಂದ 1986ರವರಗೆ ಬೆಳ್ಳುಮಾಡು ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 

ಮಾತಂಡ ಸಿ. ಪೂವಯ್ಯನವರು ಬೆಳ್ಳುಮಾಡು ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘದಿಂದ ಹೊರಗುಳಿದ  ಅವಧಿಯಲ್ಲಿ ಸಂಘದಲ್ಲಿ ದುರಾಡಳಿತ ಅತೀರೇಕಕ್ಕೆ ಮುಟ್ಟಿದನ್ನು ಮನಗಂಡ ಸಂಘದ ಕೆಲವು ಸದಸ್ಯರು ಬಂದು ಸಮಸ್ಯೆಗಳನ್ನು ಹೇಳಿದುದರ ಮೇರೆಗೆ ಮರಳಿ ಪುನಹಃ ಸಹಕಾರ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಲು 2009 ರ ಮಹಾಸಭೆಗೆ ಹಾಜರಾಗಿ ಆಗಿನ ಆಡಳಿತ ಮಂಡಳಿಯ ಅಧ್ಯಕ್ಷರ ಅಧಿಕಾರ ದುರುಪಯೋಗದ ಬಗ್ಗೆ ಧ್ವನಿ ಎತ್ತಿದ್ದರು. ಆ ಸಂದರ್ಭದಲ್ಲಿ ಅವರಿಗೆ ಸಮರ್ಪಕ ಉತ್ತರ ದೊರೆಯದ ಕಾರಣ 2010ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾಗಿ 2015ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿಂದ 2015 ರಲ್ಲಿ ಅವಿರೋಧವಾಗಿ ಆಯ್ಕೆಯಾಗಿ 2020 ರ ತನಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮುಂದೆ 2020 ರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ  ಪ್ರಸ್ತುತ ಮುಂದಿನ ಅವಧಿಯವರೆಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

1976 ರಲ್ಲಿ ಸಹಕಾರ ಸಂಘದ ಸದಸ್ಯತ್ವವನ್ನು ಪಡೆದುಕೊಂಡ ಮಾತಂಡ ಸಿ. ಪೂವಯ್ಯನವರು ಸರಿ ಸುಮಾರು 46 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಫಲವಾಗಿ ಬೆಳ್ಳುಮಾಡು ಪ್ರಾಥಮಿಕ ಕೃಷಿ ಸಹಕಾರ ಸಂಘವು  ಲಾಭಾಂಶವನ್ನು ಹೊಂದಿ ಪ್ರಗತಿಯತ್ತ ಸಾಗುತ್ತಿದೆ ಎಂದು  ಮಾತಂಡ ಸಿ. ಪೂವಯ್ಯನವರು ಹರ್ಷ ವ್ಯಕ್ತಪಡಿಸಿದ್ದಾರೆ.

ಸದಸ್ಯರಿಗೆ ನೀಡಿದ ಸಾಲದ ಸಕಾಲದ ಮರುಪಾವತಿ, ಗೊಬ್ಬರ ಮಾರಾಟ ಮತ್ತು ಕೃಷಿ ಪರಿಕರಗಳು ಮಾರಾಟ, ಜಾಮೀನು ಸಾಲದ ಸಕಾಲದ ಮರುಪಾವತಿ, ಆಭರಣ ಸಾಲ, ಪಿಗ್ಮಿ ಸಾಲ, ಮಧ್ಯಮಾವಧಿ ಸಾಲ, ಅಲ್ಪಾವಧಿ ಸಾಲ, ವೇತನ ಆಧಾರಿತ ಸಾಲ ಹಾಗೂ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವ ಸಾಲ ಮುಂತಾದವುಗಳಿಂದ ಬೆಳ್ಳುಮಾಡು ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘವು ಲಾಭದಲ್ಲಿ ಮುನ್ನಡೆಯುತ್ತಿದ್ದು, ಸಂಘವು ಸದಸ್ಯರಿಗೆ ಶೇಕಡ 10% ರಿಂದ 20% ರವರೆಗೂ ಡಿವಿಡೆಂಟ್ ನೀಡಲಾಗಿದೆ. ಎಂದು ಅಧ್ಯಕ್ಷರಾದ ಮಾತಂಡ ಸಿ. ಪೂವಯ್ಯನವರು ತಿಳಿಸಿದರು.

ಬೆಳ್ಳುಮಾಡು ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘದ ಕಟ್ಟಡವನ್ನು ದುರಸ್ತಿಗೊಳಿಸಲಾಗಿದ್ದು, ಪಡಿತರ ವಿತರಣೆ ಸಂದರ್ಭದಲ್ಲಿ ಜನರಿಗೆ ಸಾಲಿನಲ್ಲಿ ನಿಲ್ಲುವ ಬದಲು ಕುಳಿತುಕೊಳ್ಳಲು ಆಸನ  ವ್ಯವಸ್ಥೆ, ಸಂಘದ ಬಳಿ ಬಸ್ಸು ತಂಗುದಾಣ, ಪೋಸ್ಟ್ ಆಫೀಸ್ ವ್ಯವಸ್ಥೆ,  ಕಾವಲುಗಾರರಿಗೆ ಕೊಠಡಿ, ಸಿಬ್ಬಂದಿಗಳ ವಾಹನ ನಿಲುಗಡೆಗೆ ವ್ಯವಸ್ಥೆ ಹಾಗೂ ಸಂಘದ ಆವರಣದಲ್ಲಿ ಕುಡಿಯುವ ನೀರಿನ ಘಟಕ ಮುಂತಾದವುಗಳ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಮಾತಂಡ ಸಿ. ಪೂವಯ್ಯನವರು ತೀಳಿಸಿದರು.

ಬೆಳ್ಳುಮಾಡು ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘದ ಜೊತೆಯಲ್ಲಿರುವ ಧವಸ ಭಂಡಾರದಲ್ಲಿ ನಿರ್ದೇಶಕರಾಗಿ, ಮಾರ್ಗದರ್ಶಕರಾಗಿ ಇದ್ದಂತಹ ಸಂದರ್ಭದಲ್ಲಿ ಶೇಕಡ 100% ರಷ್ಟು ಸಾಲ ಮರುಪಾವತಿಯನ್ನು ಮಾಡಿಸಿ ಸಾಲದ ಸುಳಿಯಲ್ಲಿದ್ದ ಧವಸ ಭಂಡಾರವನ್ನು ಉತ್ತಮ ಸ್ಥಿತಿಯಲ್ಲಿ ಸಾಗಲು ಸಹಕರಿಸಿದ ಕೀರ್ತಿ ಮಾತಂಡ ಸಿ. ಪೂವಯ್ಯನವರದ್ದು. ತಮ್ಮ ಅವಧಿಯಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಉತ್ತಮ್ಮ ಸಂಘವೆಂದು ಪ್ರಶಸ್ತಿ ಕೂಡ ಲಭಿಸಿರುತ್ತದೆ.

ಬೆಳ್ಳುಮಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ತಮ್ಮ ಅಧ್ಯಕ್ಷಾವಧಿಯಲ್ಲಿ ಮುಂದಿನ ಕ್ರಿಯಾ ಯೋಜನೆಗಳ ಬಗ್ಗೆ ವಿವರಿಸಿದ ಮಾತಂಡ ಸಿ. ಪೂವಯ್ಯನವರು, ಸಂಘಕ್ಕೆ ಸುಸಜ್ಜಿತವಾದ ಆಡಳಿತ ಕಛೇರಿ, ಸಭಾಂಗಣ, ಗೋದಾಮು ಹಾಗೂ ಕೃಷಿ ಪರಿಕರಗಳ ಮಾರಾಟಕ್ಕೆ ಸ್ವಂತ ಜಾಗ ಖರೀದಿಗೆ ಪ್ರಯತ್ನ ಸಾಗುತ್ತಿದೆ ಎಂದು ತಿಳಿಸಿದರು. ಹಾಗೆ ಮೃತಪಟ್ಟ ಸದಸ್ಯರ ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದೆ ಎಂದು ಮಾತಂಡ ಸಿ. ಪೂವಯ್ಯನವರು  ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಬೆಳ್ಳುಮಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರ ಸಹಕಾರ ಉತ್ತಮವಾಗಿ ದೊರಕುತ್ತಿದೆ ಎಂದು ತಿಳಿಸಿದ ಮಾತಂಡ ಸಿ ಪೂವಯ್ಯನವರು, ಇವರೆಲ್ಲರ ಸಹಕಾರ ಇದೇ ರೀತಿ ಮುಂದೆಯು ದೊರೆಯುತ್ತಿರಲಿ ಎಂದು ಈ ಮೂಲಕ ತಮ್ಮ ಕೃತಜ್ಞತಾಪೂರ್ವಕ ನುಡಿಗಳನ್ನುಆಡಿದರು.

"ತಾನು ಪರರಿಗೆ; ಪರರು ತನಗೆ"-ಇದು ಸಹಕಾರ ತತ್ವದ ಮುಖ್ಯ ಸಂದೇಶ. ಈ ಸಹಕಾರ ತತ್ವದಡಿಯಲ್ಲಿ ಸರ್ವರೂ ಅದಕ್ಕನುಗುಣವಾಗಿ ಸಹಕಾರ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಮುಂದಡಿ ಇಡಬೇಕು, ಸಹಕಾರ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಯುವಜನರು ಪಾಲ್ಗೊಳ್ಳುವಂತಾಗಬೇಕು ಎಂದು ತಿಳಿಸಿದ ಮಾತಂಡ ಸಿ. ಪೂವಯ್ಯನವರು, ನಿಸ್ವಾರ್ಥ ಸೇವೆ, ಮುಖ್ಯವಾಗಿ ಪಾರದರ್ಶಕ ಆಡಳಿತ ಸಹಕಾರ ಕ್ಷೇತ್ರದಲ್ಲಿ ಇರಬೇಕು ಎಂದರು. ಹಾಗೆ ಸರ್ಕಾರದ ಹಸ್ತಕ್ಷೇಪ ಸಹಕಾರ ಕ್ಷೇತ್ರದಲ್ಲಿ ಇರಬಾರದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಬಿ.ಕಾಂ. ವ್ಯಾಸಾಂಗ ನಿರತರಾಗಿರುವ ಮಾತಂಡ ಸಿ. ಪೂವಯ್ಯನವರು ಮೂಲತಃ ಕೃಷಿಕರಾಗಿದ್ದು, ದಿವಂಗತ ಮಾತಂಡ ಚಂಗಪ್ಪ ಹಾಗೂ ದಿವಂಗತ ಲಿಲ್ಲಿ ಚಂಗಪ್ಪನವರ ಕೊನೆಯ ಪುತ್ರರಾಗಿದ್ದಾರೆ. ಪತ್ನಿ ಅಳಮೇಗಂಡ ಮೀನಾಕ್ಷಿ ಗೃಹಿಣಿಯಾಗಿದ್ದಾರೆ. ಹಿರಿಯ ಮಗ ಮಾತಂಡ ಚಂಗಪ್ಪ ಕೃಷಿಕರಾಗಿದ್ದು,  ಮಗಳು ದೀಪ್ತಿ ಮುತ್ತಮ್ಮ ವಿವಾಹಿತರಾಗಿ ದುಬೈಯಲ್ಲಿ ನೆಲೆಸಿದ್ದಾರೆ. ಶ್ರೀಯುತ ಮಾತಂಡ ಸಿ. ಪೂವಯ್ಯನವರು ಪ್ರಸ್ತುತ ಬೆಳ್ಳುಮಾಡುವಿನ ಪೆಗ್‌ವೇ ಬಳಿಯ ತಮ್ಮ ತೋಟದ ಮನೆಯಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. 

ಮಾತಂಡ ಸಿ. ಪೂವಯ್ಯನವರ ಸಾರ್ವಜನಿಕ ಸೇವೆಯ ಹಿನ್ನೋಟ:

ಸಾರ್ವಜನಿಕ ಸೇವೆಯಲ್ಲಿ ಬಾಲ್ಯದಿಂದಲೂ ತಮ್ಮನ್ನು ತೊಡಗಿಸಿಕೊಂಡಿರುವ ಮಾತಂಡ ಸಿ. ಪೂವಯ್ಯನವರು ತಮ್ಮ ತಂದೆಯವರಾದ ದಿವಂಗತ ಮಾತಂಡ.ಕೆ ಚಂಗಪ್ಪನವರು ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಸಾಮಾಜಿಕ ಕಾಳಜಿಯಿಂದ ಪ್ರೇರಣೆಗೊಂಡು ದೀನ ದಲಿತರ ಬಗ್ಗೆ ಜಾಸ್ತಿ ಒಲವನ್ನು ಮೂಡಿಸಿ ಅವರ ಸೇವೆಗೆ ಸದಾ ಮುನ್ನೆಲೆಯಾಗಿ ಸ್ಪಂದಿಸುತ್ತಿದ್ದರು. ತಮ್ಮ ಶಾಲಾ-ಕಾಲೇಜು ದಿನ ಮಾನಗಳಲ್ಲಿ ಸಾರ್ವಜನಿಕ ಸೇವೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಮಾತಂಡ ಸಿ. ಪೂವಯ್ಯನವರು ತಮ್ಮನ್ನು ತೊಡಗಿಸಿಕೊಂಡಿದ್ದರು.

# 1975ರಲ್ಲಿ ಬೆಳ್ಳುಮಾಡು ಸಹಕಾರ ಧವಸ ಭಂಡಾರದ ಅಧ್ಯಕ್ಷರಾಗಿ ಸೇವೆ.

# 1976-80ರವರಗೆ APMC(RMC) ಗೋಣಿಕೊಪ್ಪಲು ಇದರ ನಿರ್ದೇಶಕರಾಗಿ ಸೇವೆ.

# 1983 ರಿಂದ 1986 ರವರಗೆ, 2010 ರಿಂದ 2015ರವರಗೆ, 2015 ರಿಂದ 2020 ರವರಗೆ ಹಾಗೂ 2020 ರಿಂದ         ಪ್ರಸ್ತುತ ಬೆಳ್ಳುಮಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ.

# 1983-1992ರವರಗೆ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (KDCC Bank) ನಿರ್ದೇಶಕರಾಗಿ ಸೇವೆ.

# 1983-1992ರವರಗೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕರಾಗಿ ಸೇವೆ.

# ಕೊಡಗು ಜಿಲ್ಲಾ ಏಲಕ್ಕಿ ಬೆಳೆಗಾರರ ಸಹಕಾರ ಸಂಘದ ಉಪಾಧ್ಯಕ್ಷರಾಗಿ 

# ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ನಿರ್ದೇಶಕರಾಗಿ 

# ಕೊಡಗು ಮಾರ್ಕೆಟಿಂಗ್ ಫೆಡರೇಷನ್  ನಿರ್ದೇಶಕರಾಗಿ 

# ಇತರ ಸಂಘ ಸಂಸ್ಥೆಗಳ ನಿರ್ದೇಶಕರಾಗಿ 

# ನೇಟಿವ್ ಕ್ಲಬ್‌ ಕಡಂಗ-ಮರೂರು ಇದರ ಉಪಾಧ್ಯಕ್ಷರಾಗಿ 

# ಬೆಳ್ಳುಮಾಡು ಯೂತ್‌ ಕ್ಲಬ್‌ ಇದರ ಅಧ್ಯಕ್ಷರಾಗಿ 

# ಬೆಳ್ಳುಮಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ 

# ಪಂಚಾಯಿತಿ ಮಟ್ಟದ ಮೊಟ್ಟಮೊದಲ ಸ್ಪೋರ್ಟ್ಸ್ ಕೌನ್ಸಿಲ್‌ನ ಕನ್‌ವೀನರ್‌ ಆಗಿ ಸೇವೆ.

# ಕುಂಜಲಗೇರಿ, ಕಡಂಗ-ಮರೂರು. ಕೆದಮುಳ್ಳೂರು, ಪಾಲಂಗಾಲ. ಕೊಟ್ಟೋಳಿ, ಬೆಳ್ಳುಮಾಡು ವ್ಯಾಪ್ತಿಯನ್ನು ಹೊಂದಿದ್ದ

   ಕಡಂಗ-ಮರೂರು ಮಂಡಲ ಪಂಚಾಯಿತಿಯ ಮಂಡಲ ಪ್ರಧಾನರಾಗಿ  ಸೇವೆ. 

# ಬೆಳ್ಳುಮಾಡು ಗ್ರಾಮದ ವ್ಯಾಪ್ತಿಯಲ್ಲಿ ಟೆಲಿಫೋನ್ , ಪೋಸ್ಟ್ ಆಫೀಸ್ ವಿದ್ಯಚ್ಚಕ್ತಿ                ಸಾರ್ವಜನಿಕ ಸೇವೆಗಳನ್ನು ಪ್ರಾರಂಭಿಸಲು ಸ್ವತಃ ಏಕಾಂಗಿಯಾಗಿ ಶ್ರಮಿಸಿದ್ದಾರೆ.

ಸಂತರ ಸೇವೆ, ಸಮಾಜ ಸೇವೆ, ದಾನ ಮಾಡುವುದು. ಯಾವುದೇ ಫಲಾಪೇಕ್ಷೆ ಹಾಗೂ ಪ್ರಚಾರವಿಲ್ಲದ ಸೇವೆ ಇವರ ಮುಖ್ಯ ಗುಣವಾಗಿರುತ್ತದೆ.

ಮಾತಂಡ ಸಿ. ಪೂವಯ್ಯನವರ ಹವ್ಯಾಸಗಳು:

# ಬಾಲ್ಯದಿಂದಲೂ ಸ್ಟ್ಯಾಂಪ್ ಕಲೆಕ್ಷನ್

# ಪೆನ್‌ ಪ್ರೆಂಡ್‌ಶಿಪ್

# ಹೂ ತೋಟ 

# ಪತ್ರ ಬರೆಯುವ ಹವ್ಯಾಸ.

# ಸಂಗೀತ ಕೇಳುವ ಹವ್ಯಾಸ.‌

# ಕಾರ್ಡ್‌ ಗೇಮ್‌ 28

# ಟ್ರಾವಲಿಂಗ್

# ನಾಯಿಗಳನ್ನು ಅತ್ಯಂತ ಪ್ರೀತಿಯಿಂದ ಸಾಕುವ ಹವ್ಯಾಸ.

ಅಪ್ಪಟವಾಗಿ ನರೇಂದ್ರ ಮೋದಿಯವರ ಅಭಿಮಾನಿ, ಮಿತಭಾಷಿಯಾಗಿರುವ ಮಾತಂಡ ಸಿ. ಪೂವಯ್ಯನವರು, “ಅಪೇಕ್ಷೆಯಿಲ್ಲದೆ ಇತರರಿಗೆ ಮಾಡಿದ ಉಪಾಕಾರವು ಯಾವುದಾದರೂ ರೀತಿಯಲ್ಲಿ ನಮಗೆ ತಿರುಗಿ ಬರುತ್ತದೆ” ಎಂಬ ಲೋಕ ರೂಢಿಯಂತೆ ಇವರಿಗೆ ಹಲವು ಸಂದರ್ಭಗಳಲ್ಲಿ ಸತ್ಯವಾಗಿ ಪರಿಣಮಿಸಿದೆ.

ಮಾತಂಡ ಸಿ. ಪೂವಯ್ಯನವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

 

ಸಂದರ್ಶನ ದಿನಾಂಕ: 22-06-2021


Search Coorg Media

Coorg's Largest Online Media Network 



Previous Post Next Post