Header Ads Widget

Responsive Advertisement

ಕೆಚ್ಚೆಟಿರ .ಬಿ. ಬಿದ್ದಯ್ಯ, ಸಹಕಾರಿಗಳು: ಕಡಗದಾಳು - KADAGADALU

  ಕೆಚ್ಚೆಟಿರ .ಬಿ. ಬಿದ್ದಯ್ಯ, ಸಹಕಾರಿಗಳು: ಕಡಗದಾಳು - KADAGADALU


ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ  ಮಡಿಕೇರಿ-ಸಿದ್ದಾಪುರ ಮುಖ್ಯ ರಸ್ತೆಯ ಮಡಿಕೇರಿಯಿಂದ 6.ಕಿ.ಮೀ. ಅಂತರದಲ್ಲಿರುವ ಕಡಗದಾಳು ಗ್ರಾಮದ ಕಡಗದಾಳು-ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆಚ್ಚೆಟಿರ .ಬಿ. ಬಿದ್ದಯ್ಯನವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ.

1970 ರಲ್ಲಿ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಕೆಚ್ಚೆಟಿರ .ಬಿ. ಬಿದ್ದಯ್ಯನವರು ಹಿರಿಯ ಸಹಕಾರಿಗಳಾದ ಎಂ.ಬಿ.ದೇವಯ್ಯ ಹಾಗೂ ಶಾಸಕರಾದ ಕೆ.ಜಿ.ಬೋಪ್ಪಯ್ಯನವರ ಒತ್ತಾಸೆಯ ಮೇರೆಗೆ 1997-1999ರ ಅವಧಿಯಲ್ಲಿ ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾದರು.

ಕಡಗದಾಳು ಮತ್ತು ಇಬ್ನಿವಳವಾಡಿ ಗ್ರಾಮಸ್ಥರು ಸಾಲ ಇನ್ನಿತ್ತರ ಕೃಷಿ ಸೌಲಭ್ಯವನ್ನು ಪಡೆಯಲು ಮಡಿಕೇರಿ ನಗರದ ಕರವಲೆ ಭಗವತಿ ನಗರದ ಧವಸ ಭಂಡಾರದಲ್ಲಿ ಕಾರ್ಯಾಚರಿಸುತ್ತಿದ್ದ ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸರಿ ಸುಮಾರು ಹತ್ತು ಕಿಲೋ ಮೀಟರ್‌ ದೂರ ಕ್ರಮಿಸಬಾಕಾಗಿತ್ತು. ಹೊದ ದಿನವೆ ಕೆಲಸ ಸುಗಮವಾಗಿ ಸಾಗದೆ ಕನಿಷ್ಠ ಒಂದು ವಾರ ಅಲೆಯ ಬೇಕಾಗಿತ್ತು. ಗ್ರಾಮಸ್ಥರ ಈ ಕಷ್ಟ-ಕಾರ್ಪಣ್ಯಗಳನ್ನು ಮನಗಂಡು ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿದ್ದ ಕಡಗದಾಳು ಗ್ರಾಮದವರಾದ ಕೆಚ್ಚೆಟ್ಟಿರ ಬಿ. ಬಿದ್ದಯ್ಯನವರು ಕಡಗದಾಳು-ಇಬ್ನಿವಳವಾಡಿ ಗ್ರಾಮಸ್ಥೃ ಅನುಕೂಲಕ್ಕಾಗಿ ಪ್ರತ್ಯೇಕ ಸಹಕಾರ ಸಂಘದ ಬೇಡಿಕೆಯನ್ನು ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇಟ್ಟರು.

ಹಲವಾರು ಅಡೆತಡೆಗಳ ನಂತರ ಸಹಕಾರ ಸಂಘದ ರಿಜಿಸ್ಟ್ರಾರ್‌ರವರ ಸಲಹೆಯಂತೆ ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯಲ್ಲಿ ಅಹವಾಲನ್ನು ಮಂಡಿಸಿ 3/1 ನೇ ಬಹುಮತದೊಂದಿಗೆ ಪ್ರತ್ಯೇಕವಾದ  ಸಹಕಾರ ಸಂಘವನ್ನು ಪ್ರಾರಂಭಿಸಲು ದಾರಿ ಸುಗಮವಾಯಿತು.

ತದ ನಂತರ 2001 ರಲ್ಲಿ ಕಡಗದಾಳು-ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಕೆಚ್ಚೆಟಿರ .ಬಿ. ಬಿದ್ದಯ್ಯನವರು ಕಾರ್ಯ ನಿರ್ವಹಿಸಿದ್ದರು. 2001 ರಿಂದ 2006 ರವರಗೆ, 2006 ರಿಂದ 2011 ರವರಗೆ, 2011 ರಿಂದ 2017 ರವರಗೆ  ಕಡಗದಾಳು-ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆಚ್ಚೆಟಿರ .ಬಿ. ಬಿದ್ದಯ್ಯನವರು ಕಾರ್ಯ ನಿರ್ವಹಿಸಿದ್ದಾರೆ. 2017 ರಿಂದ ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

21 ವರ್ಷಗಳಿಂದ ಕಡಗದಾಳು-ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ  ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕೆಚ್ಚೆಟಿರ .ಬಿ. ಬಿದ್ದಯ್ಯನವರು ಸರಿ ಸುಮಾರು 50 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೋಡಗಿಸಿಕೊಂಡು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಕಡಗದಾಳು-ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಾರಂಭದಿಂದ ನಷ್ಟದಲ್ಲೇ ಕಾರ್ಯ ನಿರ್ವಹಿಸುತ್ತಾ ಬಂದಿದ್ದು, 2019-20 ರಲ್ಲಿ 3 ಲಕ್ಷದ 80 ಸಾವಿರ ಲಾಭವನ್ನು ಗಳಿಸಿದೆ ಎಂದ ಕೆಚ್ಚೆಟ್ಟಿರ ಬಿ. ಬಿದ್ದಯ್ಯನವರು, ಸದಸ್ಯರಿಗೆ ನೀಡಿದಂತಹ ಸಾಲಗಳ ಸಕಾಲದ ಮರು ಪಾವತಿ, ಗೊಬ್ಬರ ಸಾಲ, ಕೃಷಿ ಪರಿಕರಗಳ ಮಾರಾಟದಿಂದ,  ಆಭರಣ ಸಾಲ, ಜಾಮೀನು ಸಾಲ,  ಮನೆ ನಿರ್ಮಾಣ ಸಾಲ, ವಾಹನ ಸಾಲ, ಪಿಗ್ಮಿ ಸಾಲ ಹಾಗೂ ಸ್ವಸಹಾಯ ಸಂಘಗಳಿಗೆ ನೀಡಿದ ಸಾಲಗಳಿಂದ ಸಂಘವು ಲಾಭವನ್ನು ಗಳಿಸಿದೆ ಎಂದರು.

ಕಡಗದಾಳು-ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಗತಿಯತ್ತ ಸಾಗಲು ಆಡಳಿತ ಮಂಡಳಿ, ಸದಸ್ಯರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯನೊಳಗೊಂಡು ಸಿಬ್ಬಂದಿ ವರ್ಗ ಹಾಗೂ ಗ್ರಾಹಕರ ಸಹಕಾರ ಉತ್ತಮವಾಗಿ ದೊರಕುತ್ತಿದೆ ಎಂದ  ಕೆಚ್ಚೆಟಿರ .ಬಿ. ಬಿದ್ದಯ್ಯನವರು, ಇಲ್ಲಿಯವರಗೆ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಿಕೊಂಡು ಬಂದ ಸಂಘವು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯ ನಿರ್ವಹಿಸುತ್ತಿದೆ ಎಂದರು.

20 ವರ್ಷಗಳ ಹಿಂದೆ 17 ಜನ ಸದಸ್ಯರಿಂದ ಒಟ್ಟು 3,240 ರೂಪಾಯಿಗಳ ಬಂಡವಾಳದಿಂದ ಹೊಸದಾಗಿ ಕಡಗದಾಳು ಗ್ರಾಮದಲ್ಲಿ ಸಹಕಾರ ಸಂಘವನ್ನು ಪ್ರಾರಂಭಿಸಿಲಾಯಿತು ಎಂದ ಕೆಚ್ಚೆಟ್ಟಿರ ಬಿ. ಬಿದ್ದಯ್ಯನವರು, ಇದೀಗ 600 ಜನ ಸದಸ್ಯರಿದ್ದಾರೆ ಎಂದು ತಿಳಿಸಿದರು.

ಕಡಗದಾಳು ಗ್ರಾಮದ ಕುರುಳಿ ಪರಂಬು ಅಂಬಲ ಪಕ್ಕದಲ್ಲಿರುವ ಸರ್ಕಾರಿ ಜಾಗದ 25 ಸೆಂಟ್‌ ವಿಸ್ತೀರ್ಣದ ಸ್ಥಳವನ್ನು ಶುದ್ಧ ಕ್ರಯಕ್ಕೆ ಕೊಂಡುಕೊಂಡು ಅಂದಾಜು 1.50 ಕೋಟಿ ವೆಚ್ಚದಲ್ಲಿ ಕಡಗದಾಳು-ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಕಛೇರಿ, ಗೊಬ್ಬರ ಗೋದಾಮು, ಸಭಾಂಗಣ, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ ಎಂದ ಕೆಚ್ಚೆಟಿರ ಬಿ.ಬಿದ್ದಯ್ಯನವರು, ಚರ ಹಾಗೂ ಸ್ಥಿರಾಸ್ತಿಗಳು ಸೇರಿ ಅಂದಾಜು 10 ಕೋಟಿಗೂ ಮಿಕ್ಕಿ ಆಸ್ತಿಯನ್ನು ಸಂಘ ಹೊಂದಿದೆ ಎಂದು ತಿಳಿಸಿದರು.

ಕಡಗದಾಳು-ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉತ್ತಮ ಆಡಳಿತ ನಿರ್ವಹಣೆಗಾಗಿ ಕರ್ನಾಟಕ ರಾಜ್ಯ ಅಪೆಕ್ಸ್‌ ಬ್ಯಾಂಕ್‌ನಿಂದ, ಕೊಡಗು ಡಿಸಿಸಿ ಬ್ಯಾಂಕ್‌ನಿಂದ ಹಾಗೂ ನಬಾರ್ಡ್‌ನಿಂದ ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದು ಈ ಸಂದರ್ಭದಲ್ಲಿ ಕೆಚ್ಚೆಟ್ಟಿರ ಬಿದ್ದಯ್ಯನವರು ತಿಳಿಸಿದರು. 

ಕಡಗದಾಳು ಗ್ರಾಮದ ಸರ್ವ ಜನರಿಗೂ ಅನುಕೂಲವಾಗಲೆಂದು ಸಭೆ-ಸಮಾರಂಭಗಳನ್ನು ನಡೆಸಲು ಯೋಗ್ಯವಾದಂತಹ ಸಮುದಾಯ ಭವನವೊಂದು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯವು ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ ಎಂದ ಕೆಚ್ಚೆಟ್ಟಿರ ಬಿ.ಬಿದ್ದಯ್ಯನವರು, ಸಂಘದ ಕಟ್ಟಡದಲ್ಲಿ ಪ್ರಾವಿಸನ್‌ ಸ್ಟೋರ್‌, ಮೋದಿಕೇರ್‌ ಸೆಂಟರ್‌ ಪ್ರಾರಂಬಿಸಲಾಗಿದೆ ಎಂದರು.

ಕಡಗದಾಳು-ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಒಂದು ಉತ್ತಮವಾದ ಸುಸಜ್ಜಿತವಾದ ಗೋದಾವು ನಿರ್ಮಿಸಲು ಜಾಗ ಖರೀದಿಯ ಪ್ರಯತ್ನ ಸಾಗುತ್ತಿದೆ ಎಂದ ಕೆಚ್ಚೆಟ್ಟಿರ ಬಿ. ಬಿದ್ದಯ್ಯನವರು, ಸಂಘದ ಪಕ್ಕದಲ್ಲಿರುವ ಧವಸ ಭಂಡಾರವು  ಅದರ ಆಡಳಿತ ಮಂಡಳಿಯ ಬೇಜವಾಬ್ಧಾರಿತನದಿಂದ ನಷ್ಟವೊಂದಿದ ಕಾರಣ ಸರಕಾರವು ವಹಿಸಿಕೊಂಡಿತ್ತು, ಈಗ  ಆ ಧವಸ ಭಂಡಾರವನ್ನು ಸರಕಾರದಿಂದ ಮರಳಿ ನಮ್ಮ ಕಡಗದಾಳು-ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶುದ್ಧ ಕ್ರಯ ಕೊಟ್ಟು ಪಡೆದುಕೊಂಡೆವು ಎಂದು ಈ ಸಂದರ್ಭದಲ್ಲಿತಿಳಿಸಿದರು.

ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಇರಬಾರದು ಎಂದ ಬಿದ್ದಯ್ಯನವರು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು. ಸಹಕಾರ ಕ್ಷೇತ್ರದಲ್ಲಿ ಹೆಚ್ಚೆಚು ಯವಕರು ಪಾಲ್ಗೊಂಡು ಸ್ವಾರ್ಥರಹಿತರಾಗಿ ಸೇವೆ ಸಲ್ಲಿಸುತ್ತಾ ಸಹಕಾರ ಕ್ಷೇತ್ರವನ್ನು ಉತ್ತುಂಗಕ್ಕೆ ಕೊಂಡೊಯ್ಯುವಂತಾಗಬೇಕೆಂದು ತಿಳಿಸಿದರು.

ರಾಜಕೀಯವಾಗಿ ಬಿ.ಜೆ.ಪಿ.ಯ ಸಕ್ರೀಯ ಕಾರ್ಯಕರ್ತರಾಗಿರುವ ಕೆಚ್ಚೆಟ್ಟಿರ ಬಿ.ಬಿದ್ದಯ್ಯನವರು, ಕಡಗದಾಳು ಶ್ರೀ ಭಗವತಿ ದೇವಾಲಯದ ಆಡಳಿತ ಮಂಡಳಿ ಸದಸ್ಯರಾಗಿ, ಜೀರ್ಣೋದ್ಧಾರ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿದ್ದಾರೆ.

ಮೂಲತಃ ಕೃಷಿಕರಾಗಿರುವ ಹಾಗೂ ಉದ್ಯಮಿಯಾಗಿರುವ ಕೆಚ್ಚೆಟ್ಟಿರ ಬಿ.ಬಿದ್ದಯ್ಯನವರು, ದಿ. ಕೆಚ್ಚೆಟಿರ ಭೀಮಯ್ಯ ಹಾಗೂ ದಿ. ಅಕ್ಕವ್ವ ದಂಪತಿಗಳ ಹಿರಿಯ ಮಗನಾಗಿದ್ದಾರೆ. ಪತ್ನಿ ಸೀತಮ್ಮ, ಮಗಂದಿರಾದ ಚಂಗಪ್ಪ, ಮದನ್‌ ಮಾದಯ್ಯ, ಮಗಳು ಮೋನಿಷ್‌ ಕಾವೇರಮ್ಮ ಕುಟುಂಬದೊಂದಿಗೆ ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತ್ತಲೆ ಕಾಡು ಗ್ರಾಮದಲ್ಲಿ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ”  ಹಾರೈಸುತ್ತದೆ.


ಸಂದರ್ಶನ ದಿನಾಂಕ: 10-04-2021


Search Coorg Media

Coorg's Largest Online Media Network