This is a premium alert message you can set from Layout! Get Now!

ಕೊಕ್ಕಲೇರ ಸುಜು ತಿಮ್ಮಯ್ಯ, ಸಹಕಾರಿಗಳು: ಮಕ್ಕಂದೂರು - Makkandur

0

ಕೊಕ್ಕಲೇರ ಸುಜು ತಿಮ್ಮಯ್ಯ, ಸಹಕಾರಿಗಳು: ಮಕ್ಕಂದೂರು - Makkandur 




ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೆಘತಾಳುವಿನ ಹೊದಕಾನ ಗ್ರಾಮದವರಾದ  ಕೊಕ್ಕಲೇರ ಸುಜು ತಿಮ್ಮಯ್ಯನವರು ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೊಕ್ಕಲೇರ ಸುಜು ತಿಮ್ಮಯ್ಯನವರು ತಮ್ಮ ಅಜ್ಜ ತಿಮ್ಮಯ್ಯನವರು ಸಹಕಾರಿ ಕ್ಷೇತ್ರದಲ್ಲಿ ಮಾಡಿದಂತಹ ಸಾಧನೆಯನ್ನು ನೋಡಿ  ‌ಪ್ರೇರಣೆಗೊಂಡು ಸಹಕಾರಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇವರ ಅಜ್ಜ ದಿ.ಕೊಕ್ಕೆಲೇರ ತಿಮ್ಮಯ್ಯನವರು ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರು.


ಕೊಕ್ಕಲೇರ ಸುಜುತಿಮ್ಮಯ್ಯನವರು 1999 ರಿಂದ 2004ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2004ರಿಂದ 2018 ವರೆಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದು, 2008 ರಿಂದ2013ರವರೆಗೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ನಂತರ 2013ರಿಂದ 18ರ ವರೆಗೆ ಮತ್ತೊಮ್ಮೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ 2018ರಿಂದ 2023ರವರೆಗಿನ ಅವಧಿಯ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 22 ವರ್ಷದಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಇವರ ಅಧ್ಯಕ್ಷ ಅವಧಿಯ 2018 -19 ರ ಸಾಲಿನಲ್ಲಿ 29 ಲಕ್ಷ ರೂಪಾಯಿಯ ಲಾಭವನ್ನು ಗಳಿಸಿದ್ದ ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2019 - 20 ರಲ್ಲಿ 25.93 ಲಕ್ಷ ಲಾಭವನ್ನು ಗಳಿಸಿದೆ ಎಂದು ಅಧ್ಯಕ್ಷರಾದ ಶ್ರೀ ಕೊಕ್ಕಲೇರ ಸುಜುತಿಮ್ಮಯ್ಯ ಮಾಹಿತಿ ನೀಡಿದರು.


ಮಕ್ಕಂದೂರು ಪ್ರಾಥಮಿಕ ಕೃಷಿ ಸಹಕಾರ ಸಂಘವು ಲಾಭದಲ್ಲಿರಲು ಸದಸ್ಯರು ಸರಿಯಾಗಿ ಸಾಲವನ್ನು 99.7%ಮರುಪಾವತಿ ಮಾಡುವುದಾಗಿದೆ ಎಂದು ಮಾಹಿತಿ ಇತ್ತರು.


ಸುಜು ತಿಮ್ಮಯ್ಯನವರ ಅಧ್ಯಕ್ಷರಾಗಿರುವ ಅವಧಿಯಲ್ಲಿ 55 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ, 30 ಲಕ್ಷವೆಚ್ಚದಲ್ಲಿ ಸಂಘದ ಆಡಳಿತ ಕಛೇರಿಯ ಹೊಸ ಕಟ್ಟಡ, ಹಟ್ಟಿಹೊಳೆಯಲ್ಲಿ ಸಂಘದ ಮತ್ತೊಂದು ಶಾಖೆಯನ್ನು ಪ್ರಾರಂಭಿಸಲಾಗಿದೆ ಎಂದರು.


ಅಪೆಕ್ಸ್ ಬ್ಯಾಂಕಿನಿಂದ 2017-18 ರ ಅವಧಿಯಲ್ಲಿ ಮತ್ತು ಡಿಸಿಸಿ ಬ್ಯಾಂಕಿನಿಂದ 2016-17 ರ ಅವಧಿಯಲ್ಲಿ ಉತ್ತಮ ಸಹಕಾರ ಸಂಘದ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದು ತನ್ನ ಅಧ್ಯಕ್ಷತೆಯಲ್ಲಿ ತೃಪ್ತಿಯನ್ನು ತಂದುಕೊಟ್ಟಿದೆ ಎಂದು ತಿಳಿಸಿದರು.


ಕೃಷಿ ಸಾಲವನ್ನು ಹೊರತುಪಡಿಸಿ ರಾಷ್ಟ್ರೀಯ ಬ್ಯಾಂಕುಗಳು ಸಾಲ ನೀಡುವಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲೂ ಸಾಲ ನೀಡುವಂತೆ ಆಗಬೇಕಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.


ಮುಂದಿನ ವರ್ಷಕ್ಕೆ ಕ್ರಿಯಾಯೋಜನೆ ಯಾಗಿ ಎಂ.ಎಸ್.ಸಿ. ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಹಾಗೆ ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ತಿಳಿಸಿದರು.


ಸರಕಾರವು ಸಹಕಾರ ಸಂಘಗಳಲ್ಲಿನ ಒಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬುದು ತಮ್ಮ ನಿಲುವಾಗಿದೆ  ಎಂದ ಕೊಕ್ಕೆಲೇರ ಸುಜು ತಿಮ್ಮಯ್ಯ,ಸಿಬ್ಬಂದಿ  ನೇಮಕಾತಿಯ ಬಗ್ಗೆ ಆಡಳಿತ ಮಂಡಳಿಯವರಿಗೆ ಸಂಪೂರ್ಣ ಅಧಿಕಾರ ಇರಬೇಕೆಂದು ಹೇಳಿದರು. ಸಹಕಾರ ಸಂಘವು ಸರಳ ರೀತಿಯಲ್ಲಿ ಸಾಲ ದೊರೆಯುವಂತಾಗಲು ಕಡಿಮೆ ದಾಖಲಾತಿಗಳನ್ನು ಒದಗಿಸುವಂತಾಗುವಂತಾದಲ್ಲಿ ಸದಸ್ಯರಿಗೆ ಅನುಕೂಲವಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. 


ಕೊಕ್ಕಲೇರ ಸುಜು ತಿಮ್ಮಯ್ಯನವರು  1999 ರಿಂದ 2004ರವರೆಗೆ ಕೊಡಗು ಜಿಲ್ಲಾ ಪಂಚಾಯತ್‌ ಸದಸ್ಯರಾಗಿಯೂ 2002ರಿಂದ2004ರವರೆಗೆ ಕೊಡಗು ಜಿಲ್ಲಾ ಪಂಚಾಯತ್‌ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ.


ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕರಾಗಿ, ಮಡಿಕೇರಿ ತಾಲೂಕು ಕಾಂಗ್ರೆಸ್‌ ಸದಸ್ಯರಾಗಿ,  2001ರಲ್ಲಿ ಮಕ್ಕಂದೂರು ಪಂಚಾಯಿತಿ ಜಲಾನಯನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 


ಕ್ರಿಡಾ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಕೊಕ್ಕಲೇರ ಸುಜು ತಿಮ್ಮಯ್ಯನವರು  1979 ರಲ್ಲಿ ರಾಷ್ಟ್ರೀಯ ಅಥ್ಲೇಟ್ 400 ಮೀಟರ್ ನ ಹರ್ಡಲ್ಸ್ ಮೊದಲಿದ್ದ ರೆಕಾರ್ಡನ್ನು ಬ್ರೇಕ್ ಮಾಡಿದರು. ಕ್ರೀಡೆ ಮೆಕ್ಸಿಕೋದಲ್ಲಿ ನಡೆದ ಜಾಗತಿಕ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಭಾರತದ ಮೂವರಲ್ಲಿ ಒಬ್ಬರಾಗಿದ್ದರು.


ಹಿರಿಯ ಸಹಕಾರಿಗಳಾಗಿದ್ದ ತಂದೆ ದಿವಂಗತ ಕೆ.ಟಿ. ಬೋಪಯ್ಯ ಮತ್ತು ಶ್ರೀಮತಿ ಸೀತಮ್ಮನವರ ಮಗನಾಗಿ 1960 ರಲ್ಲಿ ಜನನ. ಪತ್ನಿ ಪೂಜಾ ತಿಮ್ಮಯ್ಯ ಗೃಹಣಿ ಆಗಿದ್ದು, ಮಗ ಅಭಿಷೇಕ್ ಬೋಪಯ್ಯ ಇಂಜಿನಿಯರಿಂಗ್ ಪದವೀಧರರು. ಮಗಳು ಬಿ.ಕಾಮ್ ಪದವೀಧರರು ಮತ್ತು ಭಾರತೀಯ ಮಹಿಳಾ ಬಾಸ್ಕೆಟ್ ಬಾಲ್ ಆಟಗಾರರಾಗಿರುವ ಲೋಪಮುದ್ರ ತಿಮ್ಮಯ್ಯನವರು 2019ರ ನೇಪಾಳದಲ್ಲಿ ನಡೆದ ಸೌತ್ ಏಷ್ಯಾದ ಮೀಟ್ನಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ.


ಬಿ.ಎಸ್ಸಿ ಆರ್ಟಿಕಲ್ಚರ್ ಪದವೀಧರರಾದ, ಕೃಷಿಕರಾಗಿರುವ ಕೊಕ್ಕಲೇರ ಸುಜು ತಿಮ್ಮಯ್ಯನವರು ಸಹಕಾರ, ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು “ಸರ್ಚ್‌ ಕೂರ್ಗ್‌ ಮೀಡಿಯಾ” ಹಾರೈಸುತ್ತದೆ.




ಸಂದರ್ಶನದ ದಿನಾಂಕ: 14-12-2020


Search Coorg Media

Coorg's Largest Online Media Network 



Post a Comment

0 Comments
Post a Comment
To Top