ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ - ನಂಜರಾಯಪಟ್ಟಣ. Nanjarayapatna Primary Agricultural Credit bCo-operative Society LTD., (PACCS-Nanjarayapatna)

ನಂ. 2763ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ - ನಂಜರಾಯಪಟ್ಟಣ.


1928 ರಲ್ಲಿ ನಂಜರಾಯಪಟ್ಟಣ ಗ್ರಾಮದ ಹಿರಿಯರಾದ ದಿವಂಗತ ಗುಡಹಟ್ಟಿ ವೀರಪ್ಪ ರವರ ಅಧ್ಯಕ್ಷತೆಯಲ್ಲಿ ನಂಜರಾಯಪಟ್ಟಣ ಸೇವಾ ಸಹಕಾರ ಸಂಘವೆಂದು, ವಾಲ್ನೂರು ಗ್ರಾಮದಲ್ಲಿ ದಿವಂಗತ ವೀರಪ್ಪನವರ ಅಧ್ಯಕ್ಷತೆಯಲ್ಲಿ ವಾಲ್ನೂರು ಸೇವಾ ಸಹಕಾರ ಸಂಘವೆಂದು ಪ್ರಾರಂಭಗೊಂಡಿದ್ದು, ರೈತ ಸದಸ್ಯರುಗಳಿಗೆ ಸೇವಾ ವ್ಯವಹಾರವನ್ನು ನಡೆಸುತ್ತಿದ್ದ ಸಂಘಗಳನ್ನು ಸರಕಾರದ ಆಧೇಶದಂತೆ ದಿನಾಂಕ 15-09-1976ರಲ್ಲಿ ಸಂಯೋಜನೆಗೊಳಿಸಿ ನಂಜರಾಯಪಟ್ಟಣ ವ್ಯವಸಾಯ ಸೇವಾ ಸಹಕಾರ ಸಂಘ ಎಂಬುದಾಗಿ ನೋಂದಾಯಿಸಲ್ಪಟ್ಟಿತ್ತು.


ಸಂಘದ ಕಾರ್ಯವ್ಯಾಪ್ತಿ:- 

ಸಂಘದ ಕಾರ್ಯವ್ಯಾಪ್ತಿಯು ಈ ಕೆಳಗಿನ ಗ್ರಾಮಗಳಿಗೆ ಒಳಪಟ್ಟಿರುತ್ತದೆ.

1.ನಂಜರಾಯಪಟ್ಟಣ 2) ರಂಗಸಮುದ್ರ 3) ವಾಲ್ನೂರು ತ್ಯಾಗತ್ತೂರು 4) ರಸಲ್‌ಪುರ ಬೆಟ್ಟಗೇರಿ 5) ಬೊಳ್ಳುರು 6) ಗುಡ್ಡೆಹೊಸೂರು 7) ಮಾದಪಟ್ಟಣ 8) ಅತ್ತೂರು 9) ಬಸವನಹಳ್ಳಿ, ಈ ಗ್ರಾಮಗಳು ಮುಖ್ಯ ಕಚೇರಿಯಿಂದ 15 ರಿಂದ 22 ಕಿ.ಮೀ. ವ್ಯಾಪ್ತಿಯಲ್ಲಿ ಹೊಂದಿರುತ್ತದೆ.


ಸಂಘದ ಕಾರ್ಯಚಟುವಟಿಕೆಗಳು:-

ಸದಸ್ಯರುಗಳಿಂದ ಪಾಲುಹಣ ಸಂಗ್ರಹಿಸುವುದು.

ಸದಸ್ಯರು ಮತ್ತು ಸದಸ್ಯೇತರರಿಂದ ಠೇವಣ ಯನ್ನು ಸಂಗ್ರಹಿಸುವುದು.

ಸದಸ್ಯರು ಮತ್ತು ಸದಸ್ಯೇತರರಿಗೆ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುವುದು.

ಸದಸ್ಯರಿಗೆ ಎಲ್ಲಾ ವಿಧದ ಸಾಲವನ್ನು ಒದಗಿಸುವುದು.

ಸರಕಾರದ ನಿಯಂತ್ರಿತ ವಸ್ತುಗಳನ್ನು ಮಾರಾಟ ಮಾಡುವುದು.

ಸಂಘದ ಶಾಖೆಗಳ ಮೂಲಕ ಗೊಬ್ಬರ ಕ್ರಿಮಿನಾಶಕ, ವ್ಯವಸಾಯ ಉಪಕರಣ, ಸೀಮೆಂಟ್, ದಿನವಶ್ಯಕ ವಸ್ತುಗಳು, ಮದ್ದುಗುಂಡುಗಳನ್ನು ಮಾರಾಟ ಮಾಡುವುದು.

ಸಂಘದಲ್ಲಿ ಒಂದು ಲಾರಿ ಮತ್ತು 2 ಟ್ರಾಕ್ಟರ್‌ಗಳಿದ್ದು ಸದಸ್ಯರು ಮತ್ತು ಸದಸ್ಯೇತರರಿಗೆ ಸಾಗಾಣಿಕೆ, ಉಳುಮೆ, ಜೋಳ ಸೆಲ್ಲಿಂಗ್ ಸೌಲಭ್ಯವನ್ನು ಒದಗಿಸುವುದು. ಮತ್ತು ಮಿನಿ ಲಾರಿ ಇದ್ದು ಗೊಬ್ಬರ ಸರಬರಾಜು ಮಾಡಲು ಉಪಯೋಗಿಸಲಾಗುತ್ತಿದೆ.

ಆಭರಣ ಮತ್ತು ಕೃಷಿ ಉತ್ಪನ್ನಗಳ ಮೇಲೆ ಸಾಲ ನೀಡುವುದು.


ಅಭಿವೃದ್ಧಿಯ ಮುನ್ನೋಟ:-

ನಂಜರಾಯಪಟ್ಟಣ ಮತ್ತು ವಾಲ್ನೂರು ಸೇವಾ ಸಹಕಾರ ಸಂಘಗಳು 1976 ರಲ್ಲಿ ಸಂಯೋಜನೆಗೊಂಡ ನಂತರ ಸಂಘವು ಅಭಿವೃದ್ದಿಯಲ್ಲಿ ಹಿಂದೆ ನೋಡಲೇ ಇಲ್ಲ.

ಸಂಘವು 1983ರಲ್ಲಿ ಸದಸ್ಯರ ಅನುಕೂಲಕ್ಕಾಗಿ ಬ್ಯಾಂಕಿಂಗ್ ವ್ಯವಹಾರವನ್ನು ಪ್ರಾರಂಭಿಸಿತು.

ಸಂಘದ ವ್ಯಾಪ್ತಿಯ ವಾಲ್ನೂರು ಗ್ರಾಮದಲ್ಲಿ ವ್ಯಾಪಾರ ಮಳಿಗೆ ಮತ್ತು ಗೋದಾಮುನ್ನು 1984ರಲ್ಲಿ ನಿರ್ಮಿಸಲಾಯಿತು.  ಅಲ್ಲದೇ 1984ರಲ್ಲಿ ಕಾರ್ಯದರ್ಶಿಯವರ ವಸತಿ ಗೃಹವನ್ನು ನಂಜರಾಯಪಟ್ಟಣದಲ್ಲಿ ನಿರ್ಮಿಸಲಾಯಿತು.

ವಾಲ್ನೂರು ತ್ಯಾಗತ್ತೂರು ಗ್ರಾಮದ ಜನರಿಗೆ ಅನುಕೂಲವಾಗುವಂತೆ 1985ರಲ್ಲಿ ವಾಲ್ನೂರು ಶಾಖೆಯಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಪ್ರಾರಂಭಿಸಲಾಯಿತು.

ರೈತ ಸದಸ್ಯರು ಗದ್ದೆ ಉಳುಮೆ ಮತ್ತು ಸಾಗಾಣಿಕೆಗೆ ಅನುಕೂಲವಾಗುವಂತೆ 1985ರಲ್ಲಿ ಟ್ರಾಕ್ಟರ್‌ನ್ನು ಖರೀದಿಸಲಾಯಿತು.

ಸಂಘವು ತನ್ನ ವ್ಯವಹಾರವನ್ನು ಹೆಚ್ಚಿಸಿ ಕೊಂಡಂತೆ ಅಲ್ಲದೆ ರೈತ ಸದಸ್ಯರುಗಳಿಗೆ ಹೆಚ್ಚಿನ ಸೇವೆಗಾಗಿ 1988ರಲ್ಲಿ ಕಛೇರಿ ಕಟ್ಟಡವನ್ನು ನಿರ್ಮಿಸಲಾಯಿತು.  

1989ರಲ್ಲಿ ರೈತ ಸದಸ್ಯರಿಗೆ ಹೆಚ್ಚಿನ ಅನುಕೂಲಕ್ಕಾಗಿ ಆಭರಣ ಸಾಲವನ್ನು ಕೊಡಲು ಪ್ರಾರಂಭಿಸಲಾಯಿತು.

1993ರಲ್ಲಿ ಕೇಂದ್ರ ಕಛೇರಿಯ ಪಕ್ಕ ಅತಿಥಿ ಗೃಹ ಕಟ್ಟಡವನ್ನು ನಿರ್ಮಿಸಲಾಯಿತು.

ರೈತ ಸದಸ್ಯರಿಗೆ ಕೃಷಿ ಸಾಲ ಅಲ್ಲದೇ ಇತರೆ ಸಾಲದ ಸೌಲಭ್ಯವನ್ನು ಕಲ್ಪಿಸಲು ನಿರ್ಧರಿಸಿ 1994ರಲ್ಲಿ ವಾಹನ ಮತ್ತು ಗೃಹೋಪಯೋಗಿ ಸಾಲವನ್ನು ಹಾಗೂ ವ್ಯಾಪಾರ ಸಾಲವನ್ನು ಕೊಡಲು ಪ್ರಾರಂಭಿಸಲಾಯಿತು.

ನಂಜರಾಯಪಟ್ಟಣದಲ್ಲಿ ದಿನಸಿ ವ್ಯವಹಾರವನ್ನು ಹೆಚ್ಚಿಸಲು 1995ರಲ್ಲಿ ವ್ಯಾಪಾರ ಮಳಿಗೆಗಳನ್ನು ನಿರ್ಮಿಸಲಾಯಿತು.

ಭದ್ರತಾ ದೃಷ್ಟಿಯಿಂದ ನಂಜರಾಯಪಟ್ಟಣ ಕಛೇರಿ ಮುಂಭಾಗ 1995ರಲ್ಲಿ ಕಾಪೌಂಡ್ ಮತ್ತು ಪಹರೆ ಕೊಠಡಿಯನ್ನು ನಿರ್ಮಿಸಲಾಯಿತು.

ವಾಲ್ನೂರು ಗ್ರಾಮದ ಜನರಿಗೆ ಅನುಕೂಲವಾಗುವಂತೆ ವ್ಯಾಪಾರದ ದೃಷ್ಟಿಯಿಂದ 1995ರಲ್ಲಿ ಗೋದಾಮು ಮತ್ತು ವ್ಯಾಪಾರ ಮಳಿಗೆಗಳನ್ನು ನಿರ್ಮಿಸಲಾಯಿತು.

ಗುಡ್ಡೆಹೊಸೂರು ವಿಭಾಗದ ಸದಸ್ಯ ಭಾಂಧವರಿಗೆ ಅನುಕೂಲವಾಗುವಂತೆ 1995ರಲ್ಲಿ ವ್ಯಾಪಾರ ಮಳಿಗೆ ಮತ್ತು ಗೋದಾಮುನ್ನು ನಿರ್ಮಿಸಲಾಯಿತು.

ಸಂಘದ ವ್ಯವಹಾರವು 130 ಕೋಟಿಗಿಂತ ಅಧಿಕವಾಗಿರುವುದರಿಂದ 2000ರಲ್ಲಿ ಸಂಘದ ಎಲ್ಲಾ ಲೆಕ್ಕ ಪತ್ರಗಳನ್ನು ಕಂಪ್ಯೂಟರೀಕರಣ ಗೊಳಿಸಲಾಯಿತು.

2005ರಲ್ಲಿ ವಾಲ್ನೂರು ಶಾಖೆಯ ಮೇಲ್ಭಾಗದಲ್ಲಿ ರೂ.7.25ಲಕ್ಷಗಳ ವೆಚ್ಚದಲ್ಲಿ ಸಹಕಾರ ಸಂಭಾಗಣವನ್ನು ನಿರ್ಮಿಸಲಾಯಿತು. ಸಂಘದ ರೈತ ಸದಸ್ಯರಿಗೆ ಅನುಕೂಲವಾಗುವಂತೆ, ನಿಯಂತ್ರಿತ ವಸ್ತುಗಳನ್ನು ತರಲು 2007ರಲ್ಲಿ ಮಿನಿ ಲಾರಿಯನ್ನು ಖರೀದಿಸಲಾಯಿತು.  

ಕೇಂದ್ರ ಕಛೇರಿಯಲ್ಲಿ ಬ್ಯಾಂಕಿಂಗ್ ಕೌಂಟರ್ ಕಿರಿದಾಗಿದ್ದು ಗ್ರಾಹಕರಿಗೆ ಅನುಕೂಲವಾಗುವಂತೆ 2011ರಲ್ಲಿ ಬ್ಯಾಂಕಿಂಗ್ ಕೌಂಟರ್‌ನ್ನು ನವೀಕರಿಸಲಾಯಿತು.

ಕೇಂದ್ರ  ಕಚೇರಿಯಲ್ಲಿ 2015 ರಲ್ಲಿ ಹೊಸ ಭದ್ರತಾ ಕೊಠಡಿ ಮತ್ತು ಬ್ಯಾಂಕಿಂಗ್  ಕೌಂಟರ್‌ನ್ನು  ವಿಸ್ತರಿಸಲಾಯಿತು. ಸಂಘದ ಗುಡ್ಡೆಹೊಸೂರು ಶಾಖೆಯ ಮೇಲ್ಬಾಗ  26 ಲಕ್ಷಗಳ ವೆಚ್ಚದಲ್ಲಿ ಅಂಗಡಿ ಮಳಿಗೆಗಳು ಮತ್ತು ಗೋದಾಮುನ್ನು 2016 ರಲ್ಲಿನಿರ್ಮಿಸಲಾಯಿತು

ಸಂಘದ ರೈತ ಸದಸ್ಯರ ಅನುಕೂಲಕ್ಕಾಗಿ 2020 ರಲ್ಲಿ ಗದ್ದೆ ಹೊಲ ಉಳುಮೆಗೆ 58 ಹೆಚ್ ಪಿ ಸಾಮಾರ್ಥ್ಯದ ಟ್ರಾಕ್ಟರ್‌ನ್ನು & ರೋಟವೇಟರ್‌ನ್ನು ಖರೀದಿಸಲಾಗಿದೆ.

ಸಂಘದ ಮೂರು ಶಾಖೆಗಳ ಮುಂಭಾಗ ಸದಸ್ಯರ & ಸಾರ್ವಜನಿಕರ ಅನುಕೂಲಕ್ಕಾಗಿ ಶೀಟ್‌ನ್ನು ಹಾಕಿಸಲಾಗಿದೆ. ಗುಡ್ಡೆಹೊಸೂರು ಶಾಖೆಯ ಮೇಲ್ಭಾಗ ರೂ.9.52 ಲಕ್ಷಗಳ ವೆಚ್ಚದಲ್ಲಿ ಬಾಡಿಗೆ ಮನೆಗಳನ್ನು  ನಿರ್ಮಿಸಿ ಬಾಡಿಗೆಗೆ ನೀಡಿರುತ್ತೇವೆ.

ನಂಜರಾಯಪಟ್ಟಣ ಟ್ರಾಕ್ಟರ್ ಸೆಡ್ ಮುಂಬಾಗ ಮತ್ತು ಗೋದಾಮಿನ ಮುಂಬಾಗ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶೀಟ್‌ನ್ನು ಹಾಕಿಸಲಾಗಿದೆ.

ಗುಡ್ಡೆಹೊಸೂರು ಶಾಖೆಯಲ್ಲಿ ಮನೆಗಳನ್ನು ಬಾಡಿಗೆಗೆ ನೀಡಿದ್ದು ನೀರಿನ ಅಭಾವವಿದ್ದರಿಂದ 2020 ರಲ್ಲಿ ಬೋರ್‌ವೆಲ್‌ನ್ನು ತೆಗೆಸಿ ನೀರಿನ ಅನುಕೂಲತೆಯನ್ನು ಒದಗಿಸಲಾಗಿದೆ.


ಸಂಘದ ಸದಸ್ಯತ್ವ:- 

ಸಂಘ ಪ್ರಾರಂಭಿಸಿದ 1976 ರಲ್ಲಿ 300 ಸದಸ್ಯರಿದ್ದರು. 2019-20ರಲ್ಲಿ ಒಟ್ಟು 2500 ಸದಸ್ಯರನ್ನು ಹೊಂದಿರುತ್ತದೆ.


ಪಾಲು ಬಂಡವಾಳ:-

ಪ್ರಾರಂಭದಲ್ಲಿ ರೂ.1.15ಲಕ್ಷಗಳ ಪಾಲು ಬಂಡವಾಳವಿದ್ದು, 2019-20ರಲ್ಲಿ ಇಂದು ರೂ 197.86 ಲಕ್ಷಗಳ ಪಾಲು ಬಂಡವಾಳವನ್ನು ಹೊಂದಿರುತ್ತದೆ.


ಠೇವಣಿಗಳು:-

ಸಂಘದಲ್ಲಿ ಸದಸ್ಯರು ಮತ್ತು ಸದಸ್ಯರೇತರರಿಂದ ಠೇವಣ ಯನ್ನು ಸಂಗ್ರಹಿಸುತ್ತಿದ್ದು ಒಟ್ಟು ರೂ.1646.12 ಲಕ್ಷಗಳ ಠೇವಣಿಯನ್ನು ಹೊಂದಿರುತ್ತದೆ.


ನಿಧಿಗಳು :- 

ಸಂಘವು ಕಳೆದ ಹತ್ತಾರು ವರ್ಷಗಳಿಂದ ಸತತ ಲಾಭವನ್ನು ಗಳಿಸುತ್ತಿದ್ದು ಲಾಭದಲ್ಲಿ ಹಂಚಿದ ವಿವಿಧ ನಿಧಿಗಳಿದ್ದು ಇಂದಿಗೆ ರೂ.276.65 ಲಕ್ಷಗಳ ನಿಧಿಗಳಿರುತ್ತದೆ.


ಧನವಿನಿಯೋಗಗಳು:- 

ಸಂಘವು ವಿವಿಧ ಸಂಘ ಸಂಸ್ಥೆಗಳಲ್ಲಿ ಇಂದಿಗೆ ರೂ.645.59 ಲಕ್ಷಗಳ ಧನವಿನಿಯೋಗಗಳನ್ನು ಮಾಡಿರುತ್ತೇವೆ.


ಸದಸ್ಯರಿಗೆ ವಿತರಿಸಿದ ಸಾಲ:- 

ಸಂಘವು ಸದಸ್ಯರಿಗೆ ಎಲ್ಲಾ ವಿದಧ ಸಾಲವನ್ನು ವಿತರಿಸುತ್ತಿದ್ದು ಇಂದಿಗೆ ರೂ.1967.96 ಲಕ್ಷಗಳ ಸಾಲವನ್ನು ವಿತರಿಸಿದ್ದು ಇದರಲ್ಲಿ1221.25 ಗಳನ್ನು ಸ್ವಂತ ಬಂಡವಾಳದಿಂದ ವಿತರಿಸಿರುತ್ತೇವೆ.


ಬ್ಯಾಂಕಿನ ವಹಿವಾಟು:- 

ಸಂಘವು ರೂ.658.66 ಲಕ್ಷಗಳ ವ್ಯಾಪಾರ ವಹಿವಾಟನ್ನು ಮತ್ತು 13034.78 ಲಕ್ಷಗಳ ಒಟ್ಟು ವಹಿವಾಟನ್ನು ನಡೆಸುತ್ತಿದ್ದೇವೆ.


ಸಂಘವು ಸದಸ್ಯರ ಅನುಕೂಲಕ್ಕಾಗಿ 2 ಟ್ರಾಕ್ಟರ್‌ನ್ನು ಮತ್ತು 1 ಮಿನಿ ಲಾರಿಯನ್ನು ಹೊಂದಿದ್ದು ಸದಸ್ಯರ ಗದ್ದೆ ಮತ್ತು ಹೊಲಗಳ ಉಳುಮೆಗಾಗಿ, ಸರಕುಗಳ ಸಾಗಾಣೆಗಾಗಿ ಟ್ರಾಕ್ಟರ್‌ನ್ನು ಉಪಯೋಗಿಸುತ್ತಿದ್ದು, ಮಿನಿ ಲಾರಿಯನ್ನು ನಿಯಂತ್ರಿತ ವಸ್ತುಗಳು ಮತ್ತು ಗೊಬ್ಬರ ಸಾಗಾಣೆಗಾಗಿ ಉಪಯೋಗಿಸುತ್ತಿದ್ದೇವೆ.


ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:- 

ಸಂಘ ಆರಂಭ ವರ್ಷದಿಂದ ಲಾಭದಲ್ಲಿಯೀ ಮುನ್ನಡೆದು ಬರುತ್ತಿದ್ದು ಪ್ರತಿ ವರ್ಷವು ಲಾಭ ಗಳಿಕೆಯಲ್ಲಿ ದಾಪುಗಾಲು ಹಾಕಿದೆ.  ಸೇವಾ ದೃಷ್ಟಿಯಲ್ಲಿ ವ್ಯವಹಾರಗಳನ್ನು ಮಾಡಿದ್ದು 2019-20 ರ ಅಂತ್ಯಕ್ಕೆ 33.10 ಲಕ್ಷಗಳ ಲಾಭವನ್ನು ಪಡೆದಿದ್ದು  ಸದರಿ ವರ್ಷ  ಶೇ.10 ರ ಡಿವಿಡೆಂಡ್ ವಿತರಣೆ ಮಾಡಿರುತ್ತೇವೆ.


ಗೌರವ ಮತ್ತು ಪ್ರಶಸ್ತಿ:- 

ಸಂಘ ಪ್ರಾರಂಭದಿಂದ ಕಳೆದ ಸಾಲಿನವರೆಗೂ  ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಮತ್ತು ಅಪೆಕ್ಸ್ ಬ್ಯಾಂಕು ಬೆಂಗಳೂರಿನಿಂದ ಸತತವಾಗಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಸಾಲ ಮರುಪಾವತಿಯ ಬಗ್ಗೆ ಬಹುಮಾನಗಳು ಬಂದಿರುತ್ತದೆ.


ಸ್ವ ಸಹಾಯ ಗುಂಪುಗಳ ರಚನೆ:- 

ಸಂಘದ ವತಿಯಿಂದ 106 ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದ್ದು ರೂ 100.15 ಲಕ್ಷ ಸಾಲ ನೀಡಿದ್ದು ಯಾವುದೇ ಸುಸ್ತಿದಾರರಾಗಿರುವುದಿಲ್ಲ 2 ಜೆ.ಯಲ್.ಜಿ. ಗುಂಪುಗಳನ್ನು, 2 ರೈತಕೂಟಗಳನ್ನು ರಚಿಸಲಾಗಿದೆ. ವರದಿ  ಸಾಲಿನಲ್ಲಿ 934 ಮಂದಿ ಸದಸ್ಯರುಗಳನ್ನು ಯಶಸ್ವಿನಿ ವಿಮಾ ಯೋಜನೆಗೆ ಸೇರ್ಪಡೆಗೊಳಿಸಲಾಗಿದೆ.


ಸಾಲ ಮರುಪಾವತಿ:- 

ಸದಸ್ಯರಿಂದ ಸಂಘಕ್ಕೆ ಪ್ರತಿ ವರ್ಷವೂ ಶೇಕಡ 100 ರಂತೆ ಸಾಲ ಮರುಪಾವತಿಯಾಗಿರುತ್ತದೆ.


ಆಡಿಟ್ ವರ್ಗ:- 

ಸಂಘವು ಪ್ರತಿ ವರ್ಷ ; ಎ ; ತರಗತಿಯಲ್ಲಿ   

ಮುಂದುವರಿಯುತ್ತಿದೆ.


ಸಂಘದ ಸ್ಥಿರಾಸ್ತಿಗಳು:- 

ಸಂಘವು ನಂಜರಾಯಪಟ್ಟಣದಲ್ಲಿ ಮುಖ್ಯ ಕಛೇರಿ ಹೊಂದಿದ್ದು, ಶಾಖೆ, ಗೋದಾಮು, ಪಹರೆ ಕೊಠಡಿ, ಬೋರ್‌ವೆಲ್ ಸೇರಿ ರೂ.15.94 ಲಕ್ಷಗಳ ಕಟ್ಟಡವನ್ನು ಹೊಂದಿರುತ್ತದೆ. 

ಸಂಘದ ಶಾಖೆಯು ವಾಲ್ನೂರು ಗ್ರಾಮದಲ್ಲಿದ್ದು ಶಾಖೆ ಗೋದಾಮು ಸಹಕಾರ ಸಭಾಂಗಣವಿದ್ದು ರೂ.15.41 ಲಕ್ಷಗಳ ಕಟ್ಟಡವನ್ನು ಹೊಂದಿರುತ್ತದೆ. 

ಹಾಗೆಯೇ ಸಂಘದ ಶಾಖೆಯು ಗುಡ್ಡೆಹೊಸೂರು ಗ್ರಾಮದಲ್ಲಿದ್ದು ಶಾಖೆ ಗೋದಾಮು ಸೇರಿ ರೂ.48.95 ಲಕ್ಷಗಳ ಕಟ್ಟಡವನ್ನು ಹೊಂದಿರುತ್ತದೆ.  

ಹೀಗೆ ಗ್ರಾಮಾಂತರ ಪ್ರದೇಶದಲ್ಲಿ ಬೆಳೆದ ಸಹಕಾರ ಸಂಘವು ಪ್ರಾಮಾಣಿಕ ಸದಸ್ಯರ ಪ್ರಯತ್ನದಿಂದ ಮತ್ತು ಉತ್ತಮ ಆಡಳಿತ ಮಂಡಳಿ, ನೌಕರ ವರ್ಗದಿಂದ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಲು ಸಾಧ್ಯವಾಗಿದೆ. 


Search Coorg Media

Coorg's Largest Online Media Network 

Previous Post Next Post