ಬಲ್ಲಡಿಚಂಡ ಮುರಳಿ ಮಾದಯ್ಯ, ಸಹಕಾರಿಗಳು: ನಂಜರಾಯಪಟ್ಟಣ - Nanjarayapatna

ಬಲ್ಲಡಿಚಂಡ ಮುರಳಿ ಮಾದಯ್ಯ, ಸಹಕಾರಿಗಳು: ನಂಜರಾಯಪಟ್ಟಣ - Nanjarayapatna


ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮದವರಾದ  ಬಲ್ಲಡಿಚಂಡ ಮುರಳಿ ಮಾದಯ್ಯನವರು ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಸಹಕಾರಿ ಕ್ಷೇತ್ರದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಿ.ಕಾಂ. ಪದವೀಧರರಾದ ಬಲ್ಲಡಿಚಂಡ ಮುರಳಿ ಮಾದಯ್ಯನವರು 2018ರಲ್ಲಿ ಮೊದಲ ಬಾರಿಗೆ  ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾಯಿತರಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡು ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭದಲ್ಲಿದ್ದು 2017 - 18 ರಲ್ಲಿ 28 ಲಕ್ಷ ಲಾಭ ಗಳಿಸಿದ್ದು 2018 -19 ರಲ್ಲಿ 33 ಲಕ್ಷವನ್ನು 2019 - 20 ರಲ್ಲಿ 34 ಲಕ್ಷದಷ್ಟು ಲಾಭದಲ್ಲಿ ಇದೆ ಎಂದು ಮುರಳಿ ಮಾದಯ್ಯನವರು ಮಾಹಿತಿ ನೀಡಿದರು.


ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿ ವರ್ಗದವರ ಪಾರದರ್ಶಕ ಕಾರ್ಯನಿರ್ವಹಣೆ ಮತ್ತು ಉತ್ತಮ ಸಹಕಾರದಿಂದ ಸಂಘವು ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಮುರುಳಿ ಮಾದಯ್ಯ ತಿಳಿಸಿದರು.


ಸಂಘದಿಂದ ಶೇಕಡ 10%ರಲ್ಲಿ ಗ್ರಾಹಕರಿಗೆ ಕೃಷಿ ಮತ್ತು ಇನ್ನಿತರ ಪರಿಕರಗಳನ್ನು ನೀಡಲಾಗಿ ಸಂಘವು ಪ್ರಗತಿಯನ್ನು ಕಾಣುತ್ತಿದೆ ಎಂದರು. ಕೀಟನಾಶಕ, ಕಳೆನಾಶಕ, ನಾಟಿ ಮಾಡುವ ಯಂತ್ರವನ್ನು ಬಾಡಿಗೆ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಮುರುಳಿ ಮಾದಯ್ಯ ತಿಳಿಸಿದರು.

.

ಪಾರದರ್ಶಕ ಆಡಳಿತದಿಂದ ಸಹಕಾರಿ ಕ್ಷೇತ್ರ ಯಾವ ರೀತಿಯಲ್ಲಿ ಪ್ರಗತಿ ಸಾಧಿಸಬಹುದು ಎಂಬುದನ್ನು ನಾವು ಪ್ರಯತ್ನಿಸುತ್ತಿದ್ದೇವೆ. ಕೃಷಿಯನ್ನು ಜನರು ಪ್ರೀತಿಸಬೇಕು ಆಗ ಕೃಷಿ ಲಾಭದಾಯಕವಾಗುತ್ತದೆ ಎಂದು ತಿಳಿಸಿದರು. ಗ್ರಾಹಕರಿಗೆ ಗರಿಷ್ಠ ಮೊತ್ತದ ಸೇವೆಯನ್ನು ಒದಗಿಸುವಲ್ಲಿ ಪ್ರಯತ್ನಿಸುತ್ತಿದ್ದೇವೆ ಎಂದು ಈ ಸಂದರ್ಬದಲ್ಲಿ ಮಾಹಿತಿ ನೀಡಿದರು.


ಮುಂದಿನ ಕ್ರಿಯಾಯೋಜನೆಯಲ್ಲಿ ಆಡಳಿತ ಮಂಡಳಿಯ ನೂತನ ಕಚೇರಿ, ಸಭಾಂಗಣ, ಗೋದಾಮ ಮತ್ತು ಶೈತ್ಯಾಗಾರ ಮಾಡುವ ಆಲೋಚನೆಗಳನ್ನು ಇಟ್ಟುಕೊಂಡಿದ್ದೇವೆ ಎಂದು ಮುರುಳಿ ಮಾದಯ್ಯ ತಿಳಿಸಿದರು. 


ಬ್ಯಾಂಕಿನ ವ್ಯವಹಾರಗಳನ್ನು ಕಂಪ್ಯೂಟರೀಕೃತಗೊಳಿಸಿ ಡಿಜಿಟಲಿಕರಣಗೊಳಿಸಲಾಗಿದ್ದು,  ಬ್ಯಾಂಕ್ ಆಫ್ ಬರೋಡ ಸಿಟಿ ಬ್ಯಾಂಕ್ ಜೊತೆಗೂಡಿ ಡಿಜಿಟಲ್‌ ಬ್ಯಾಂಕಿಂಗ್ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದರು. 


ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು‌ ಮೂರು ಶಾಖೆಗಳನ್ನು ಹೊಂದಿದ್ದು ನಂಜರಾಯಪಟ್ಟಣ, ವಾಲ್ನೂರು, ಗುಡ್ಡೆಹೊಸೂರು ಶಾಖೆಗಳನ್ನು ಅಂತರ್ಜಾಲದಲ್ಲಿ  ಸರ್ವರನ್ನು ಅಳವಡಿಸುವ  ಮುಖಾಂತರ ಬ್ಯಾಂಕಿನ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದರು.


ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ಪಾರದರ್ಶಕ ಆಡಳಿತವನ್ನು ನಡೆಸಿದಲ್ಲಿ ಸಹಕಾರ ಕ್ಷೇತ್ರ ಉತ್ತಮಗೊಳ್ಳುತ್ತದೆ ಹಾಗೂ ದೀರ್ಘಕಾಲದವರಗೆ ಸಹಕಾರ ಕ್ಷೇತ್ರ ಉಳಿಯುತ್ತದೆ ಎಂದು ಮುರುಳಿ ಮಾದಯ್ಯ ತಿಳಿಸಿದರು. 


ಸಹಕಾರಿ ಕ್ಷೇತ್ರವು ಕೃಷಿ ಪ್ರಧಾನವಾಗಿದ್ದು, ಸ್ವಾರ್ಥ ಮನೋಭಾವನೆಯನ್ನು ಬಿಟ್ಟು ನಿಸ್ವಾರ್ಥದಿಂದ ಸೇವೆ ಮಾಡಬೇಕು ಅದಕ್ಕೆ ಸಹಕಾರವು ದಕ್ಷ ವೇದಿಕೆಯಾಗಿದೆ ಎಂದು ಮುರುಳಿ ಮಾದಯ್ಯ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ರಾಜಕೀಯವಾಗಿ ಬಿಜೆಪಿ ಕಾರ್ಯಕರ್ತರಾಗಿ, ಸ್ಥಾನೀಯ ಸಮಿತಿ ಅಧ್ಯಕ್ಷರಾಗಿ, ತಾಲೂಕು ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ನಂಜರಾಯಪಟ್ಟಣ ದೇವಾಲಯ ಸಮಿತಿಯ ಖಜಾಂಚಿ, ನಂಜರಾಯಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರಾಗಿ, ದುಬಾರೆ ರಿವರ್ ರ‍್ಯಾಪ್ಟಿಂಗ್ ಅಸೋಷಿಯೇಶನ್‌ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.



ಪೂರ್ಣಕಾಲಿಕ ಕೃಷಿಕರಾಗಿದ್ದು ತೆಂಗು, ಅಡಿಕೆ, ಬಾಳೆ, ಕಾಳುಮೆಣಸು ಮುಂತಾದವುಗಳನ್ನು ಬೆಳೆಸುತ್ತಿದ್ದಾರೆ. ತಂದೆ ದಿವಂಗತ ಬಲ್ಲಡಿಚಂಡ .ಕೆ. ಕಾರ್ಯಪ್ಪ (ಮಾಜಿ ಸೈನಿಕರು) ಮತ್ತು ತಾಯಿ ಚೊಂದಮ್ಮ ದಂಪತಿಯ ಪುತ್ರರಾಗಿದ್ದಾರೆ. ಸಹಕಾರ, ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿರುವ. ಬಲ್ಲಡಿಚಂಡ ಮುರಳಿ ಮಾದಯ್ಯನವರ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು “ಸರ್ಚ್‌ ಕೂರ್ಗ್‌ ಮೀಡಿಯಾ” ಹಾರೈಸುತ್ತದೆ.



ಸಂದರ್ಶನದ ದಿನಾಂಕ: 20-01-2021


Search Coorg Media

Coorg's Largest Online Media Network 


Previous Post Next Post