This is a premium alert message you can set from Layout! Get Now!

ಪೆಬ್ಬಾಟಂಡ ಎ. ಪೆಮ್ಮಯ್ಯ , ಸಹಕಾರಿಗಳು: ಪಾರಾಣೆ. Parane

0

 ಪೆಬ್ಬಾಟಂಡ ಎ. ಪೆಮ್ಮಯ್ಯ , ಸಹಕಾರಿಗಳು: ಪಾರಾಣೆ. Parane



ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಪೆಬ್ಬಾಟಂಡ ಎ. ಪೆಮ್ಮಯ್ಯ ಅವರು ಪ್ರಸ್ತುತ ಮೂರ್ನಾಡುವಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಮಡಿಕೇರಿ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಮತ್ತು ಪರಿವರ್ತನಾ ಸಂಘ ನಿಯಮಿತ(ಎ.ಪಿ.ಸಿ.ಎಂ.ಎಸ್‌) ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಪೆಬ್ಬಾಟಂಡ ಎ. ಪೆಮ್ಮಯ್ಯನವರು ಮಡಿಕೇರಿ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಮತ್ತು ಪರಿವರ್ತನಾ ಸಂಘ ನಿಯಮಿತದಲ್ಲಿ ಇಪ್ಪತ್ತೇಳು ವರ್ಷಗಳ ಕಾಲ ಗುಮಾಸ್ತರಾಗಿ ಸೇವೆ ಸಲ್ಲಿಸಿದ್ದರು. ನಂತರ ಸ್ವಯಂ ನಿವೃತ್ತಿ ಹೊಂದಿ ರೈತರು ಹಾಗೂ ಸಂಘದ ಸದಸ್ಯರ ಏಳಿಗೆಗೆ ಮಡಿಕೇರಿ ತಾಲ್ಲೂಕು ಎ.ಪಿ.ಸಿ.ಎಂ.ಎಸ್‌. ಯನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಜನ ಸೇವೆ ಮಾಡುವ ಉದ್ದೇಶದಿಂದ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. 


ಪೆಬ್ಬಾಟಂಡ ಎ. ಪೆಮ್ಮಯ್ಯನವರು ಸಹಕಾರ ಕ್ಷೇತ್ರದಲ್ಲಿ ಇಪ್ಪತ್ತೇಳು ವರ್ಷಗಳ ಕಾಲ ಉದ್ಯೋಗಿಯಾಗಿ ದುಡಿದು ಅನುಭವ ಹಾಗೂ ಸಹಕಾರ ಕ್ಷೇತ್ರದ ಬಗ್ಗೆ ಪರಿಜ್ಞಾನ ವಿರುವುದರಿಂದ ಹಾಗೆ ಸಂಘದ ಅಭಿವೃದ್ಧಿಗೆ ಪೂರಕವಾದ ಜ್ಞಾನವಿರುವದರಿಂದಲೂ ಅದರ ಉಪಯೋಗವನ್ನು ಸದಸ್ಯರಿಗೆ ಇನ್ನಷ್ಟು ಹೆಚ್ಚಿಗೆ ನೀಡುವ ನಿಟ್ಟಿನಲ್ಲಿ ಸಂಘದ ಆಡಳಿತ ಮಂಡಳಿಯ ಚುನಾವಣೆಗೆ ಸ್ಪರ್ಧಿಸಿದರು. ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡ ಪೆಮ್ಮಯ್ಯನವರು, 2009ರಿಂದ 2013ರವರೆಗೆ, ನಿರ್ದೇಶಕರಾಗಿ ಮತ್ತು 2013ರಿಂದ 18ರ ವರೆಗೆ ಅಧ್ಯಕ್ಷರಾಗಿ 2018ರಿಂದ ಮತ್ತೊಮ್ಮೆ 2023ರವರೆಗೆ ಅಧ್ಯಕ್ಷರಾಗಿ ಪುನರಾಯ್ಕೆ ಗೊಂಡು ಪ್ರಸ್ತುತ ಮಡಿಕೇರಿ ತಾಲ್ಲೂಕು ಎ.ಪಿ.ಸಿ.ಎಂ.ಎಸ್‌. ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಉದ್ಯೋಗದಲ್ಲಿ ಇರುವಾಗಲೇ ಬಲಮುರಿ ಸಹಕಾರ ದವಸ ಭಂಡಾರದ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ದವಸ ಭಂಡಾರದ ಆರ್ಥಿಕ ಪರಿಸ್ಥಿತಿ ತೀರ ಶೊಚನಿಯವಾಗಿದ್ದ ಸಂದರ್ಭ ಸಮಾನ ಮನಸ್ಕ ದವಸ ಭಂಡಾರದ ಸದಸ್ಯ ಮಿತ್ರರೊಡಗೂಡಿ ಪೂರಕವಾದ ವ್ಯಾಪಾರ ವಹಿವಾಟನ್ನು ಮಾಡುವದರೊಂದಿಗೆ ದವಸ ಭಂಡಾರದವು 10 ವರ್ಷಗಳ ಅವಧಿಯಲ್ಲಿ ಲಾಭವನ್ನು ಹೊಂದಿ ಈಗ  ಪ್ರಗತಿಯಲ್ಲಿಸಾಗುತ್ತಿದೆ ಎಂದು ಪೆಬ್ಬಾಟಂಡ ಎ. ಪೆಮ್ಮಯ್ಯನವರು ತಿಳಿಸಿದರು. ಇವರು ಪ್ರಸ್ತುತ ಬಲಮುರಿ ಸಹಕಾರ ದವಸ ಭಂಡಾರದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆ ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿಯೂ 2013ರಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. 


2013ರವರೆಗೆ ನಮ್ಮ ಮಡಿಕೇರಿ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಮತ್ತು ಪರಿವರ್ತನಾ ಸಂಘ ಪ್ರಗತಿಯಲ್ಲಿದ್ದು, ಆ ಪ್ರಗತಿಗಿಂತ ಎರಡು ಪಟ್ಟು ಹೆಚ್ಚಿನ ಪ್ರಗತಿಯನ್ನು ಸಾಧಿಸಲು ನಮ್ಮ ಪ್ರಯತ್ನ ಕಾರಣ ಎಂದ ಪೆಬ್ಬಾಟಂಡ ಎ. ಪೆಮ್ಮಯ್ಯನವರು, ಕೃಷಿ ಪರಿಕರಗಳ ಮಾರಾಟ ವ್ಯಾಪಾರ-ವಹಿವಾಟು ನಿರೀಕ್ಷೆ ಮಟ್ಟಕ್ಕಿಂತ  ಜಾಸ್ತಿಯಾಗಿದ್ದು, ಸದಸ್ಯರು ಹಾಗೂ ರೈತರಿಗೆ ಬಹಳ ಪ್ರಯೋಜನವಾಗಿದೆ ಎಂದರು. 2020-21 ರಲ್ಲಿ 35 ಲಕ್ಷದಷ್ಟು ಲಾಭಾಂಶವನ್ನು ಸಂಘವು ಹೊಂದಿದ್ದು, ಸದಸ್ಯರು ಹಾಗೂ ರೈತರಿಗೆ ಕೃಷಿ ಪರಿಕರಗಳು, ಗೊಬ್ಬರ, ಕ್ರಿಮಿನಾಶಕಗಳು ಹಾಗೂ ಇನ್ನಿತ್ತರ ಕೃಷಿ ಸಂಭಂದಿತ ಉತ್ಪನ್ನಗಳನ್ನು ನ್ಯಾಯಯುತ ಬೆಲೆಯಲ್ಲಿ ನೀಡುವುದು ನಮ್ಮ ಉದ್ದೇಶ ಹಾಗೆ ಸದಸ್ಯರಿಗೆ ಲಾಭಾಂಶ ದೊರೆಯಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದು  ಈ ಸಂದರ್ಭದಲ್ಲಿ ಪೆಮ್ಮಯ್ಯನವರು ತಿಳಿಸಿದರು.


ಸಂಘದ ವತಿಯಿಂದ ಗೊಬ್ಬರ ಹಾಗೂ ಕೀಟನಾಶಕ ಸಾಗಿಸಲು ಪಿಕ್‌ ಅಪ್‌ ಜೀಪ್‌ ವ್ಯವಸ್ಥೆಯನ್ನು ಮಾಡಲಾಗಿದೆ. ಜಮೀನು ಉಳುಮೆ ಮಾಡಲು ಟ್ಯಾಕ್ಟರ್‌ನ್ನು ಬಾಡಿಗೆ ರೂಪದಲ್ಲಿ ನೀಡಲಾಗುತ್ತಿದೆ.  ಗೊಬ್ಬರ ಮಾರಾಟ, ಕ್ರಿಮಿನಾಶಕಗಳ ಮಾರಾಟ, ತ್ತ ಮತ್ತು ಕಾಫಿ ಕರಿಮೆಣಸು ಅಡಮಾನ ಸಾಲವನ್ನು ನೀಡಲಾಗುತ್ತದೆ. ಕೃಷಿಪರಿಕರಗಳ ಮಾರಾಟ ವ್ಯವಸ್ಥೆಯನ್ನು ಸಂಘದಲ್ಲಿ ಮಾಡಲಾಗಿದೆ ಎಂದ ಪೆಬ್ಬಾಟಂಡ ಎ. ಪೆಮ್ಮಯ್ಯನವರು, 2015-16ರಲ್ಲಿ ಸರಿ ಸುಮಾರು 80 ಲಕ್ಷ ವೆಚ್ಚದಲ್ಲಿ ಮಡಿಕೇರಿ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಮತ್ತು ಪರಿವರ್ತನಾ ಸಂಘ ನಿಯಮಿತ(ಎ.ಪಿ.ಸಿ.ಎಂ.ಎಸ್‌) ದ ಆಡಳಿತ ಕಛೇರಿಯನ್ನು ಪುನರ್‌ ನಿರ್ಮಾಣ ಮಾಡಲಾಗಿದೆ. 30ಲಕ್ಷ ವೆಚ್ಚದಲ್ಲಿ ಗೋದಾಮು ನಿರ್ಮಾಣ, ಹಳೆಯ ಮಾರಾಟ ವಿಭಾಗದ ಕಟ್ಟಡವನ್ನು 5ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ ಹಾಗೂ ಆಡಳಿತ ಮತ್ತು ಮಾರಾಟ ವ್ಯವಸ್ಥೆಯನ್ನು ಸಂಪೂರ್ಣವಾಗಿ ಗಣಕೀಕೃತಗೊಳಿಸಲಾಗಿದೆ. 40ಲಕ್ಷ ವೆಚ್ಚದಲ್ಲಿ ಮಾರಾಟ ವಿಭಾಗದ ಕಟ್ಟಡ ಕೆಲಸ ಪ್ರಗತಿಯಲ್ಲಿದೆ. ಹಾಗೆ ಸಮುದಾಯ ಭವನದ ನಿರ್ಮಾಣ ಕಾಮಗಾರಿಯ ಕ್ರಿಯಾಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಸದಸ್ಯರಿಗೆ ಇನ್ನಷ್ಟು ಸೌಲಭ್ಯವನ್ನು ನೀಡುವಲ್ಲಿ ಪ್ರಯತ್ನ ಸಾಗಿದೆ. ಎಂದು ಈ ಸಂದರ್ಭದಲ್ಲಿ ಪೆಮ್ಮಯ್ಯನವರು ತಿಳಿಸಿದರು. 


ಮಡಿಕೇರಿ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಮತ್ತು ಪರಿವರ್ತನಾ ಸಂಘ ನಿಯಮಿತ(ಎ.ಪಿ.ಸಿ.ಎಂ.ಎಸ್‌) ಗೆ ಕೊಡಗು ಡಿಸಿಸಿ ಬ್ಯಾಂಕ್ ನಿಂದ ಉತ್ತಮ ಕಾರ್ಯ ನಿರ್ವಹಣೆಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದ ಪೆಬ್ಬಾಟಂಡ ಎ. ಪೆಮ್ಮಯ್ಯನವರು, ಲೆಕ್ಕಪತ್ರದ ಪರಿಶೋಧನೆಯ ಪರಿಜ್ಞಾನವಿರುವವರು  ಸಹಕಾರ ಕ್ಷೇತ್ರದ  ಆಡಳಿತ ಮಂಡಳಿಯಲ್ಲಿರಬೇಕು. ಸಹಕಾರ ಸಂಘ ಉಳಿಯಲು ಪಾರದರ್ಶಕ ಪ್ರಾಮಾಣಿಕತೆ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿಯವರು ಪ್ರಾಮಾಣಿಕ ಪ್ರಯತ್ನದಿಂದ ಮುಂದೆ ಸಾಗಲು ಹಾಗೆ ಅಧ್ಯಕ್ಷರು ನಿರ್ದೇಶಕರುಗಳಿಗೆ ಲೆಕ್ಕಪತ್ರದ ಪರಿಜ್ಞಾನವಿರಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.


ಮಡಿಕೇರಿ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಮತ್ತು ಪರಿವರ್ತನಾ ಸಂಘ ನಿಯಮಿತ(ಎ.ಪಿ.ಸಿ.ಎಂ.ಎಸ್‌) ವು  ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ಪೆಬ್ಬಾಟಂಡ ಎ. ಪೆಮ್ಮಯ್ಯನವರು, ತಿಳಿಸಿದರು.


ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದ ಪೆಬ್ಬಾಟಂಡ ಎ. ಪೆಮ್ಮಯ್ಯನವರು, ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಇರಬಾರದು ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.  


ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ  ಭಾವಿ ಯುವಶಕ್ತಿಗೆ ಪೆಬ್ಬಾಟಂಡ ಎ. ಪೆಮ್ಮಯ್ಯನವರು, ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.


ರಾಜಕೀಯವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಪೆಬ್ಬಾಟಂಡ ಎ. ಪೆಮ್ಮಯ್ಯನವರು, ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಸಾಮಾಜಿಕವಾಗಿ ಬಲಮುರಿಯ ಮಹಾವಿಷ್ಣು ದೇವಾಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೈಕ್ಷಣಿಕವಾಗಿ ಪಾರಾಣೆ ಫ್ರೌಡ ಶಾಲೆಯ ಅಧ್ಯಕ್ಷರಾಗಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.


ಪೆಬ್ಬಾಟಂಡ ಎ. ಪೆಮ್ಮಯ್ಯನವರು, ಎರಡನೆಯ ಮಹಾಯುದ್ಧದಲ್ಲಿ ಸೈನಿಕರಾಗಿ ಸೇವೆಸಲ್ಲಿಸಿದ್ದ ದಿವಂಗತ ಪೆಬ್ಬಾಟಂಡ ಅಪ್ಪಯ್ಯ ಹಾಗೂ ದಿವಂಗತ ಚೋಂದವ್ವ ದಂಪತಿಗಳ ಪತ್ರರಾಗಿದ್ದಾರೆ. ಪತ್ನಿ, ಪುಷ್ಪಾ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ನಿವೃತ್ತಿ ಹೊಂದಿದ್ದಾರೆ. ಮಗ ಮುತ್ತಣ್ಣ ಉದ್ಯಮಿಯಾಗಿದ್ದಾರೆ. ಮಗಳು ಅಂಜಲಿ ವಿವಾಹಿತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮತ್ತೋರ್ವ ಮಗಳು ಜನನಿ ವಿವಾಹಿತರಾಗಿ ಅಮೆರಿಕದಲ್ಲಿ ನೆಲೆಸಿದ್ದಾರೆ.


ಮೂಲತಃ ಕೃಷಿಕರಾಗಿರುವ ಹಾಗೂ ಉದ್ಯಮಿಯಾಗಿರುವ ಪೆಬ್ಬಾಟಂಡ ಎ. ಪೆಮ್ಮಯ್ಯನವರು,  ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲಮುರಿ ಗ್ರಾಮದಲ್ಲಿ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

ಸಂದರ್ಶನದ ದಿನಾಂಕ: 20-11-2021


Search Coorg Media

Coorg's Largest Online Media Network 

Post a Comment

0 Comments
Post a Comment
To Top