Type Here to Get Search Results !

ಪೂಳಂಡ ಪಿ. ವಿನು ಪೆಮ್ಮಯ್ಯ, ಸಹಕಾರಿಗಳು: ಕಾಕೋಟುಪರಂಬು. Kakotuparambu

ಪೂಳಂಡ ಪಿ. ವಿನು ಪೆಮ್ಮಯ್ಯ, ಸಹಕಾರಿಗಳು: ಕಾಕೋಟುಪರಂಬು. Kakotuparambu
ಪೂಳಂಡ ಪಿ. ವಿನು ಪೆಮ್ಮಯ್ಯನವರು ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕಾಕೋಟುಪರಂಬು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.


ಅಂದಿನ ದಿನಮಾನಗಳಲ್ಲಿ ಆಮೆಗತಿಯಲ್ಲಿ ಸಾಗುತ್ತಿದ್ದ ಕಾಕೋಟುಪರಂಬು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿತ್ತು. ಆ ಸಂದರ್ಭದಲ್ಲಿ  FD ಯನ್ನು ಸಂಗ್ರಹಿಸಿ ಸದಸ್ಯರಿಗೆ ಸಾಲವನ್ನು ವಿತರಿಸುವ ಮೂಲಕ  ಕಾಕೋಟುಪರಂಬು ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘವನ್ನು ಅಭಿವೃದ್ದಿಗೊಳಿಸಿ ಮತ್ತಷ್ಟು ಬಲ ತುಂಬವ ನಿಟ್ಟಿನಲ್ಲಿ ಪೂಳಂಡ ಪಿ. ವಿನು ಪೆಮ್ಮಯ್ಯನವರು ತಮ್ಮ ಸಹಕಾರ ಕ್ಷೇತ್ರಕ್ಕೆ ಪೂರ್ಣ ಮಟ್ಟದಲ್ಲಿ ಪಾದಾರ್ಪಣೆಗೈದರು.


2013-2018 ನೇ ಸಾಲಿನ ಕೋಟುಪರಂಬು ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ನಿರ್ದೇಶಕರಾಗಿ ಆಯ್ಕೆಗೊಂಡ ಪೂಳಂಡ ಪಿ. ವಿನು ಪೆಮ್ಮಯ್ಯನವರು, 2016 ರಿಂದ 2018ರವರಗೆ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ತದ ನಂತರ 2018ರಲ್ಲಿ ನಡೆದ ಸಂಘದ ಚುನಾವಾಣೆಯಲ್ಲಿ ಮರಳಿ ಸ್ಪರ್ಧಿಸಿ ಆಯ್ಕೆಗೊಂಡು ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರಿ ಸುಮಾರು ಕಳೆದ 15 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


2019-20ರ ಸಾಲಿನಲ್ಲಿ ಕಾಕೋಟುಪರಂಬು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 9 ಲಕ್ಷದ 60 ಸಾವಿರದ 233 ರೂಪಾಯಿಗಳು ಲಾಭವನ್ನು ಹೊಂದಿದೆ ಎಂದ  ಪೂಳಂಡ ಪಿ. ವಿನು ಪೆಮ್ಮಯ್ಯನವರು, ಸಂಘದಿಂದ ಸದಸ್ಯರು ಪಡೆದ ಸಾಲದ ಸಕಾಲದ ಮರುಪಾವತಿ, ಗೊಬ್ಬರ ಮಾರಾಟ, ಕೃಷಿ ಪರಿಕರಗಳ ಮಾರಾಟ, ಮಧ್ಯಮಾವಧಿ ಸಾಲ, ಗೊಬ್ಬರ ಸಾಲ, ಜಾಮೀನು ಸಾಲ, ಮನೆ ಸಾಲ, ಗೃಹೋಪಯೋಗಿ ಬಳಕೆ ಸಾಲ,  ಸ್ವಸಹಾಯ ಸಂಘಗಳಿಗೆ ನೀಡಲ್ಪಟ್ಟ ಸಾಲ, ಕೃಷಿ ಸಾಲ, ವೇತನ ಆಧಾರಿತ ಸಾಲ, ಪಿಗ್ಮಿ ಸಾಲ ಹಾಗೂ ನಗದು ಸಾಲ ಮುಂತಾದವುಗಳಿಂದ ಸಂಘವು ಲಾಭವನ್ನು ಪಡೆದಿದೆ ಎಂದು ತಿಳಿಸಿದರು.


ಕಾಕೋಟುಪರಂಬು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ವಿನು ಪೆಮ್ಮಯ್ಯನವರು ತಿಳಿಸಿದರು.


ಕಾಕೋಟುಪರಂಬು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹೊಸ ಆಡಳಿತ ಮಂಡಳಿ ಕಛೇರಿ, ಸಭಾಂಗಣ ನಿರ್ಮಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಎಂದ ವಿನು ಪೆಮ್ಮಯ್ಯನವರು, ಅತ್ಯಾಧುನಿಕ ವಿನ್ಯಾಸದಲ್ಲಿ ಡಿಜಿಟಲಿಕರಣ ಯುಕ್ತ ಸುಸಜ್ಜಿತವಾದ  ಕಟ್ಟಡವು   ರೂಪಾಯಿ 40 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಳ್ಳುತ್ತಿದೆ ಎಂದರು. ಈ ಕಾಮಗಾರಿಯು ಇನ್ನು ಆರು ತಿಂಗಳಿನೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ವಾಹನ ಸಾಲ ಹಾಗೂ ಆಭರಣ ಸಾಲ ನೀಡುವಲ್ಲಿ ಪ್ರಯತ್ನ ಸಾಗಿದೆ. ಎಂದು ತಮ್ಮ ಮುಂದಿನ ಕ್ರಿಯಾ ಯೋಜನೆಗಳ ಬಗ್ಗೆ ವಿನು ಪೆಮ್ಮಯ್ಯನವರು ವಿವರಿಸಿದರು.


ನಬಾರ್ಡ್‌ ಅಧೀನದಲ್ಲಿ ಕಾರ್ಯಾಚರಿಸುತ್ತಿದ್ದ ಕಾವೇರಿ ಜಲಾನಯನ ಸಂಸ್ಥೆಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪೂಳಂಡ ವಿನು ಪೆಮ್ಮಯ್ಯನವರು, ಕಡಂಗ ಮರೂರು, ಅರಮೇರಿ, ಕೆದಮುಳ್ಳೂರು, ಕದನೂರು ಹಾಗೂ ಬೆಲ್ಲುಮಾಡು ಗ್ರಾಮಗಳಲ್ಲಿ ಸುಮಾರು 5 ಕೋಟಿಗೂ ಹೆಚ್ಚಿನ ಮಳೆ ನೀರು ಕೊಯ್ಲು ಕಾಮಗಾರಿಯನ್ನು ನಿರ್ವಹಿಸಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.


ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಇರಬಾರದು ಎಂದ ವಿನು ಪೆಮ್ಮಯ್ಯನವರು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು. 


ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಿರುವ ಯುವಶಕ್ತಿಗೆ ತಮ್ಮ ಸಂದೇಶವನ್ನು ನೀಡಿದರು.


ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಪೂಳಂಡ ವಿನು ಪೆಮ್ಮಯ್ಯನವರು ಬಿ.ಜೆ.ಪಿಯ ಜಿಲ್ಲಾ ಸಮಿತಿಯ ಸದಸ್ಯರಾಗಿದ್ದಾರೆ. ಹಾಗೆ ಬಿ.ಜೆ.ಪಿ. ಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಅರಮೇರಿ ಭಗವತಿ ದೇವಾಲಯ ಸಮಿತಿ ಸದಸ್ಯರಾಗಿದ್ದಾರೆ.


ಮೂಲತಃ ಕೃಷಿಕರಾಗಿರುವ ಪೂಳಂಡ ವಿನು ಪೆಮ್ಮಯ್ಯನವರು ವೃತ್ತಿಯಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿವಂಗತ ಪೂಳಂಡ ಪೂವಯ್ಯ ಹಾಗೂ ಗಂಗಮ್ಮ ದಂಪತಿಯ ಕಿರಿಯ ಪುತ್ರರಾಗಿದ್ದಾರೆ. ಪತ್ನಿ ಬಿ.ಡಿ. ಹೇಮಾರವರು ವಾಣಿಜ್ಯ ವಿಭಾಗದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರು ಮಕ್ಕಳಾದ ನಮನ್‌ ಪೂವಯ್ಯ ಹಾಗೂ ತಮನ್‌ ಮೊಣ್ಣಪ್ಪ ವ್ಯಾಸಂಗ ನಿರತರಾಗಿದ್ದಾರೆ. ಪ್ರಸ್ತುತ ಪೂಳಂಡ ವಿನು ಪೆಮ್ಮಯ್ಯನವರು,ಕದನೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಅರಮೇರಿ ಗ್ರಾದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಪೂಳಂಡ ವಿನು ಪೆಮ್ಮಯ್ಯನವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.


ಸಂದರ್ಶನ ದಿನಾಂಕ: 23-06-2021


Search Coorg Media

Coorg's Largest Online Media Network