ಕಡಗದಾಳು ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಕಡಗದಾಳು. Kadagadalu Ibnivalavadi Primary Agricultural Credit Co-operative Society LTD., (PACCS-KADAGADALU IBNIVALAVADI)

ನಂ. 11266 ನೇ ಕಡಗದಾಳು ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ - ಕಡಗದಾಳು




# 1. ಪ್ರಾಸ್ತವಿಕ:-

ಈ ಮೊದಲು ಅಂದರೆ ದಿನಾಂಕ 24-8-1976ರಲ್ಲಿ ಗಾಳಿಬೀಡು, ಕಡಗದಾಳು, ಕಾಲೂರು, ಮತ್ತು ಕರವಾಲೆ ಭಗವತಿ ಗ್ರಾಮಗಳ ಸೇವಾ ಸಹಕಾರ  ಸಂಘಗಳನ್ನು ಆಗಿನ ಸಹಕಾರ ಸಂಘಗಳ ಡೆಪ್ಯೂಟಿ ರಿಜಿಸ್ಟಾçರರು ಒಂದುಗೂಡಿಸಿ ಮಡಿಕೇರಿ ವ್ಯವಸಾಯ ಸೇವಾ ಸಹಕಾರ  ಸಂಘವೆಂದು ನೋಂದಾಯಿಸಿದ್ದು,ಇದು ಮಡಿಕೇರಿ ಪಟ್ಟಣದ ಭಗವತಿ ನಗರದಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿರುತ್ತದೆ.

ಮಡಿಕೇರಿ ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯ ವ್ಯಾಪ್ತಿಗೆ ಸೇರಿದ ಕಡಗದಾಳು ಮತ್ತು ಇಬ್ನಿವಳವಾಡಿ ಗ್ರಾಮದ ಸದಸ್ಯರು ತುಂಬಾ ದೂರದಿಂದ ಮಡಿಕೇರಿಗೆ ಬಂದು ಮತ್ತು ಆಟೋ ಇಲ್ಲದೆ ಕಾಲ್ನಡಿಗೆಯಿಂದ ಮಡಿಕೇರಿ ಭಗವತಿ ನಗರಕ್ಕೆ ಬಂದು ವ್ಯವಹಾರ ಮಡುತ್ತಿದ್ದು, ಸಾಲವನ್ನು ಪಡೆದುಕೊಳ್ಳಲು ಮತ್ತು ಮರುಪಾವತಿಸಲು ತುಂಬಾ ಕಷ್ಟಪಡುತ್ತಿದ್ದರು.

ಕಡಗದಾಳು ಗ್ರಾಮದ ಶ್ರೀ ಕೆಚ್ಚಿಟ್ಟೀರ .ಬಿ. ಬಿದ್ದಯ್ಯನವರು 1996ನೇ ಇಸವಿಯಲ್ಲಿ ಮಡಿಕೇರಿ ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ಧೇಶಕರಾಗಿದ್ದು ಅವರು ಕಡಗದಾಳು ಮತ್ತು ಇಬ್ನಿವಳವಾಡಿ ಗ್ರಾಮದ ಸದಸ್ಯರು ಸಾಲ ಸೌಲಭ್ಯವನ್ನು ಪಡೆಯಲು ದೂರದ ಮಡಿಕೇರಿಗೆ ಬಂದು ತೊಂದರೆಪಡುತ್ತಿರುವುದನ್ನು ಗಮನಿಸಿ ಆಗಿನ ಅಧ್ಯಕ್ಷರು ಮತ್ತು ನಿರ್ಧಶಕರೊಂದಿಗೆ ಚರ್ಚಿಸಿ,  ಈ ವಿಷಯದ ಬಗ್ಗೆ ಅನುಮೋದನೆಗಾಗಿ ವಿಶೇಷ ಮಹಾಸಭೆ ಕರೆಯಲು ತಿರ್ಮಾನಿಸಿ, ಈ ಸಭೆಯಲ್ಲಿ  1/3 ಮೆಜಾರಿಟಿಯನ್ನು ಪಡೆದು ಮಡಿಕೇರಿ ವ್ಯವಸಾಯ ಸಹಕಾರ ಸಂಘದಿಂದ ಬೇರ್ಪಡಿಸಿ ಕಡಗದಾಳು ಮತ್ತು ಇಬ್ನವಳವಾಡಿ ಗ್ರಾಮಗಳಿಗೆ ಪ್ರತ್ಯೇಕವಾಗಿ ಒಂದು ಸಂಘವನ್ನು ಸ್ಥಾಪಿಸಲು ಅನುಮೋದನೆ ಪಡೆಯಲಾಯಿತು. 
 
ನಂತರ ಕಡಗದಾಳು ಮತ್ತು ಇಬ್ನಿವಳವಾಡಿ ಗ್ರಾಮದ ಕೆಲ ಸದಸ್ಯರೊಂದಿಗೆ ನಿರ್ಧೆಶಕರಾದ ಶ್ರೀ ಕೆಚ್ಚೆಟ್ಟೀರ ಬಿದ್ದಯ್ಯನವರು ಈ ಒಂದು ಕೆಲಸಕ್ಕೆ ಹೆಚ್ಚಿನ ಒತ್ತಾಸೆ ನೀಡಿ ವಿಶೇಷ ಮಹಸಭೆಯ ನಡುವಳಿಕೆಗಳೊಂದಿಗೆ ಅಂದಿನ ಕೊಡಗು ಜಿಲ್ಲೆಯ ಡ್ಯೆಪ್ಯೂಟಿ ರಿಜಿಸ್ಟ್ರಾರ್‌ರಾದ ಶ್ರೀ ಕೆ.ಪಿ.ಅಪ್ಪಣ್ಣರವರಿಗೆ ಈ ಮೇಲ್ಕಂಡ ಎರಡು ಗ್ರಾಮಗಳಿಗೆ ಪ್ರತ್ಯೇಕವಾಗಿ ಒಂದು ಸಂಘವನ್ನು ಸ್ಥಾಪಿಸಿಕೊಡಬೇಕೆಂದು ಮನವಿಯನ್ನು ಸಲ್ಲಿಸಿದ್ದು,  ಇದನ್ನು ಪರಿಗಣಿಸಿದ ಅಂದಿನ ಡ್ಯೆಪ್ಯೂಟಿ ರಿಜಿಸ್ಟ್ರಾರ್‌ರರು ದಿನಾಂಕ     26-02-2001 ರಂದು ಮಡಿಕೇರಿ ವ್ಯವಸಾಯ ಸೇವಾ ಸಹಕಾರ ಸಂಘವನ್ನು ವಿಭಜಿಸಿ ಕಡಗದಾಳು ಮತ್ತು ಇಬ್ನಿವಳವಾಡಿ ಗ್ರಾಮಗಳಿಗೆ ಪ್ರತ್ಯೇಕವಾಗಿ ಒಂದು ಸಂಘವನ್ನು ಕಡಗದಾಳು ಗ್ರಾಮದಲ್ಲಿ ಸ್ಥಾಪಿಸಲು ಆದೇಶಿಸಿ ಸಂಘಕ್ಕೆ 11266ನೇ ಕಡಗದಾಳು ವ್ಯವಸಾಯ ಸಹಕಾರ ಸಂಘವೆಂದು ಹೆಸರನ್ನು ಇಡಲು ಆಧೇಶಿಸಿದರು.

ಈ  ಸಂಘಕ್ಕೆ ಸ್ಥಾಪಕ ಅಧ್ಯಕ್ಷರಾಗಿ  1) ಶ್ರೀ  ಕೆಚ್ಚೆಟ್ಟೀರ ಬಿ.ಬಿದ್ದಯ್ಯನವರು, ನಿರ್ಧೇಶಕರಾಗಿ 2) ಶ್ರೀ ಕೊರವಂಡ ಕೆ.ಬೋಪಯ್ಯ , 3) ಶ್ರೀ ಮುಕ್ಕಾಟಿರ ಸಿ.ಸೋಮಯ್ಯ, 4)ಶ್ರೀಮತಿ ನುಚ್ಚಿಮಣಿಯಂಡ ಬೆಳ್ಳಿಯವ್ವ , 5)ಶ್ರೀ ಚೆಟ್ರಂಡ ಶ್ರೀಪತಿ, 6) ಶ್ರೀ ಪೊನ್ನಚೇಟ್ಟಿರ ಚೆಟ್ಯಚ್ಚ, 7)ಶ್ರೀ ನಂದಿನೆರವಂಡ ಕೆ.ಬಸಪ್ಪ, 8) ಶ್ರೀ ಹೆಚ್.ಎಸ್ ಕಾರ್ಯಪ್ಪನವರು ಸರಕಾರದಿಂದ ನಾಮ ನಿರ್ದೇಶನಗೊಂಡು ಆಡಳಿತ ಮಂಡಳಿಯನ್ನು ರಚಿಸಿಕೊಂಡು, ಕಡಗದಾಳು ಗ್ರಾಮದಲ್ಲಿ ಬಾಡಿಗೆ ಕಟ್ಟಡದಲ್ಲಿ ಕೇವಲ 17 ಜನ ಸದಸ್ಯರೊಂದಿಗೆ  ರೂ. 3,240-00 ಷೇರು ಬಂಡವಾಳದೊಂದಿಗೆ ವ್ಯವಹಾರವನ್ನು ಪ್ರಾರಂಭಿಸಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಸಾಲವನ್ನು ಪಡೆದು ಸದಸ್ಯರ ಸಾಮರ್ಥ್ಯಕ್ಕೆ ತಕ್ಕಂತೆ ಸಾಲ ವಿತರಿಸಿ ಅದರಲ್ಲಿ ಬಂದ ಲಾಭದಲ್ಲಿ ಕಾರ್ಯದರ್ಶಿ ಮತ್ತು ವ್ಯವಹಾರದ ಖರ್ಚನ್ನು ನಿಭಾಯಿಸಿಕೊಂಡು , ವರ್ಷಂಪ್ರತೀ ಸದಸ್ಯತ್ವ ಹೆಚ್ಚಿಸಿ,  ಸಂಘದ ಸದಸ್ಯರ ಮತ್ತು ಗ್ರಾಮದ ಜನರಿಗೆ  ಸಾಲ ಸೌಲಭ್ಯವನ್ನು ನೀಡಿ ಇವರ ಸಹಕಾರ ಮತ್ತು  ಕೆ.ಡಿ.ಸಿ.ಸಿ. ಬ್ಯಾಂಕ್‌ನವರ ಸಹಕಾರದಿಂದ ಸಂಘದ ಹೆಸರು ಮತ್ತು  ನಂಬಿಕೆಯನ್ನು ಉಳಿಸಿಕೊಂಡಿದ್ದೆ.

# 2. ಸಂಘದ ಕಾರ್ಯವ್ಯಾಪ್ತಿ:- 

ಕಡಗದಾಳು ಮತ್ತು ಇಬ್ನಿವಳವಾಡಿ ಗ್ರಾಮಗಳು

# 3. ಸಂಘದ ಕಾರ್ಯಚಟುವಟಿಕೆಗಳು:-

1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.

2. ಸಾಲ ಸೌಲಭ್ಯಗಳನ್ನು ಪೂರೈಸುವುದು.

3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.

# 4. ಅಭಿವೃದ್ಧಿಯ ಮುನ್ನೋಟ:-

ಸಂಘವು ಅಭಿವೃಧ್ದಿ ಹೊಂದಿದ ಹಾಗೆ, ಇಬ್ನಿವಳವಾಡಿ ಗ್ರಾಮದ ಜನರಿಗೆ ಕಡಗದಾಳು ಗ್ರಾಮಕ್ಕೆ ಬಂದು ಸಾಲ ಸೌಲಭ್ಯವನ್ನು ಪಡೆಯಲು ಸಮಯದ ಅಭಾವವಿದ್ದದರಿಂದ ಅಲ್ಲಿಯ ಜನರಿಗೆ ಶೀಘ್ರದಲ್ಲಿ ಸೌಲಭ್ಯವನ್ನು ಒದಗಿಸಲು ಸಂಘದ ಆಡಳಿತ ಮಂಡಳಿ ಸದಸ್ಯರು ಚರ್ಚಿಸಿ ಮಹಾಸಭೆಯಲ್ಲಿ ಒಪ್ಪಿಗೆ ಪಡೆದು ಇಬ್ನಿವಳವಾಡಿ ಗ್ರಾಮದ ಬೋಯಿಕೇರಿಯಲ್ಲಿ 2015ನೇ ಇಸವಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಶಾಖೆಯನ್ನು ಪ್ರಾರಂಭಿಸಿ ಇಂದಿಗೆ ಸುಮಾರು 1.00 ಕೋಟಿ ವ್ಯವಹಾರವನ್ನು ನಡೆಸಿರುತ್ತಾರೆ.

# 5 ಸಂಘದ ಸದಸ್ಯತ್ವ:- 

ವರ್ಷಾರಂಭದಲ್ಲಿ 553 ಜನ ಸದಸ್ಯರಿದ್ದು ವರದಿ ಸಾಲಿನಲ್ಲಿ ಹೊಸದಾಗಿ 25 ಜನ ಸದಸ್ಯತ್ವ ಪಡೆದು 5 ಜನ ಸದಸ್ಯತ್ವ ಹಿಂಪಡೆದಿದ್ದು ವರ್ಷಾಂತ್ಯಕ್ಕೆ 573 ಜನ ಸದಸ್ಯರಿದ್ದಾರೆ.

# 6. ಪಾಲು ಬಂಡವಾಳ:-

ವರ್ಷಾರಂಭದಲ್ಲಿ 553 ಜನ ಸದಸ್ಯರಿದ್ದು, ವರದಿ ಸಾಲಿನಲ್ಲಿ ಹೊಸದಾಗಿ 25 ಜನ ಸದಸ್ಯತ್ವ ಪಡೆದು 5 ಜನ ಸದಸ್ಯತ್ವ ಹಿಂಪಡೆದಿದ್ದು ವರ್ಷಾಂತ್ಯಕ್ಕೆ 573 ಜನ ಸದಸ್ಯರಿಂದ  ರೂ. 33,95,330, ‘ಬಿ’ ತರಗತಿ ಸರಕಾರದ ಪಾಲು ರೂ. 1,45,000-00 ‘ ಸಿ ‘ ತರಗತಿ ಪಾಲು ಹಣ ರೂ. 67,880-00 ಹೀಗೆ ಒಟ್ಟು ರೂ. 35,06,210-00 ಪಾಲು ಭಂಡವಾಳ ಇರುತ್ತದೆ.

# 7. ಠೇವಣಿಗಳು:-

ವರ್ಷಾರಂಭದಲ್ಲಿ ಒಟ್ಟು ರೂ. 2,10,22,970-00 ಠೇವಣಿಗಳಿದ್ದು ವರ್ಷಾಂತ್ಯಕ್ಕೆ              ಒಟ್ಟು  ರೂ. 2,22,77,978-00 ಇರುತ್ತದೆ. 

# 8. ನಿಧಿಗಳು:- 


# 9. ಧನವಿನಿಯೋಗಗಳು:- 


# 10. ಸದಸ್ಯರಿಗೆ ವಿತರಿಸಿದ ಸಾಲ:- 

ವರ್ಷಾರಂಭದಲ್ಲಿ ಒಟ್ಟು ರೂ. 4,19,87,875-00 ಸಾಲ ಹೊರಬಾಕಿಯಿದ್ದು ವರದಿ ಸಾಲಿನಲ್ಲಿ    ರೂ. 3,78,75,450 ಸಾಲ ವಿತರಿಸಿ ರೂ. 3,87,72,749-00 ವಸೂಲಾತಿ ಆಗಿದ್ದು ವರ್ಷಾಂತ್ಯಕ್ಕೆ ಒಟ್ಟು ರೂ. 4,10,90,576-00 ಈ ಕೆಳಕಂಡಂತೆ ಹೊರ ಬಾಕಿ ಇರುತ್ತದೆ. 

# 11. ಬ್ಯಾಂಕಿನ ವಹಿವಾಟು:- 


# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:- 


# 13. ಗೌರವ ಮತ್ತು ಪ್ರಶಸ್ತಿ:- 


# 14. ಸ್ವ-ಸಹಾಯ ಗುಂಪುಗಳ ರಚನೆ:- 


# 15. ಸಾಲ ಮರುಪಾವತಿ:- 


# 16. ಆಡಿಟ್ ವರ್ಗ:- 


# 17. ಸಂಘದ ಸ್ಥಿರಾಸ್ತಿಗಳು:- 


ವಿತರಿಸಿದ ಸಾಲಗಳು:

ವರ್ಷಾರಂಭದಲ್ಲಿ ಒಟ್ಟು ರೂ. 4,19,87,875-00 ಸಾಲ ಹೊರಬಾಕಿಯಿದ್ದು ವರದಿ ಸಾಲಿನಲ್ಲಿ    ರೂ. 3,78,75,450 ಸಾಲ ವಿತರಿಸಿ ರೂ. 3,87,72,749-00 ವಸೂಲಾತಿ ಆಗಿದ್ದು ವರ್ಷಾಂತ್ಯಕ್ಕೆ ಒಟ್ಟು ರೂ. 4,10,90,576-00 ಈ ಕೆಳಕಂಡಂತೆ ಹೊರ ಬಾಕಿ ಇರುತ್ತದೆ. 

ಸುಸ್ಥಿ ಸಾಲಗಳು:

ದಿನಾಂಕ 31-03-2020ಕ್ಕೆ ಜಾಮೀನು ಸಾಲ 46 ಜನರಿಂದ 4,41,974-00, ಚಿನ್ನಾಭರಣ ಸಾಲ 27 ಜನರಿಂದ 6,64,311-00, ಸ್ಥಿರಾಸ್ತಿ ಆಧಾರ ಸಾಲ 4 ಜನರಿಂದ 2,91,388-00 , ಪಿಗ್ಮಿ ಓಡಿ ಸಾಲ 53 ಜನರಿಂದ 13,91,255-00, ಮನೆನಿರ್ಮಾಣ ಸಾಲ 10 ಜನರಿಂದ 14,66,356-00 ವಾಹನ ಸಾಲ 1 ಜನರಿಂದ 20,000-00, ಮಧ್ಯಮಾವಧಿ ಸಾಲ 2 ಜನರಿಂದ 4,45,000-00 ಸಾಲ ಸುಸ್ಥಿ ಯಾಗಿರುತ್ತದೆ. ಸುಸ್ಧಿ ಸಾಲಗಾರರಿಗೆ ಮತ್ತು ಜಾಮೀನುದಾರರಿಗೆ ಸಾಲ ಮರುಪಾವತಿಸಲು ತಿಳುವಳಿಕೆ ಪತ್ರ ಕಳುಹಿಸಲಾಗಿದ್ದು ಕೆಲವು ಸದಸ್ಯರು ಸಾಲ ಮರುಪಾವತಿ ಮಾಡಿರುತ್ತಾರೆ. ಸಾಲ ವಿತರಿಸುವಾಗ ಸೂಕ್ತ ಭದ್ರತೆ ಪಡೆಯಲು ಚೆಕ್‌ನ ಅವಶ್ಯಕತೆ ಇರುವುದರಿಂದ ಕೆಲವು ಸದಸ್ಯರು ಭದ್ರತೆಯನ್ನು ನೀಡದ ಕಾರಣ ಸಾಲ ಮರುಪಾವತಿಸಿರುವುದಿಲ್ಲ.

ಸಾಲ ಮರುಪಾವತಿಸದೆ ಇರುವ ಸದಸ್ಯರು  ಕಾನೂನು ಕ್ರಮ ಕೈಗೊಳ್ಳಲು ಆಸ್ಪದ ನೀಡದಂತೆ ಸಾಲವನ್ನು ಮರುಪಾವತಿಸಲು ಕೋರುತ್ತೇವೆ.
 
ಪಡೆದ ಸಾಲಗಳು:

ವರದಿ ಸಾಲಿನ ಅಂತ್ಯಕ್ಕೆ ಸಂಘವು ಕೆ.ಡಿ.ಸಿ.ಸಿ. ಬ್ಯಾಂಕ್ ಮಡಿಕೇರಿಯಿಂದ  ಕೆ.ಸಿ.ಸಿ.ಸಾಲ ರೂ. 2,67,59,250,  ಚಿನ್ನಾಭರಣ ಸಾಲ ರೂ. 14,883.00,  ಸಂಘದ ಕಟ್ಟಡ ನಿರ್ಮಾಣ ಸಾಲ 26,68,015.00, ನಬಾರ್ಡ್‌ನಿಂದ ರೂ.8,40,628.96 ಸಾಲ ಪಾವತಿಸಲು ಹೊರಬಾಕಿಯಿರುತ್ತದೆ. 
             
ವ್ಯಾಪಾರ:

ವರದಿ ಸಾಲಿನಲ್ಲಿ ಸಂಘವು  ರೂ. 22,12,842.33 ರಸ ಗೊಬ್ಬರ ಹಾಗೂ ಕಬ್ಬಿಣ ಹತ್ಯಾರುಗಳನ್ನು  ಖರೀದಿಸಿದ್ದು,   ರೂ. 21,58,487.82 ಗಳಷ್ಟು ರಸಗೊಬ್ಬರ ಹಾಗೂ ಕಬ್ಬಿಣ ಹತ್ಯಾರುಗಳನ್ನು ಮಾರಾಟಗೊಳಿಸಿ ರೂ.12410.48 ಗಳ ವ್ಯಾಪಾರ ಲಾಭ ಗಳಿಸಲಾಗಿದೆ.

ಲಾಭಾಂಶ:

2019-20 ನೇ ಸಾಲಿಗೆ ಸಂಘವು ಅಂದಾಜು ರೂ. 3,84,645-48 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ.

ಮರಣ ನಿಧಿ:

ಸಂಘದ ಸದಸ್ಯರಿಗೆ ಮರಣ ನಿಧಿಗೆ ವಂತಿಗೆ ಸಂಗ್ರಹಿಸುತ್ತಿದ್ದು 60 ವರ್ಷ ಒಳಪಟ್ಟ ಸದಸ್ಯರು ರೂ. 1,000-00 ಮತ್ತು 60 ವರ್ಷ ಮೇಲ್ಪಟ್ಟು 75 ವರ್ಷದೊಳಗಿನ ಸದಸ್ಯರು ರೂ. 1,500-00 ವಂತಿಗೆಯನ್ನು ನೀಡಿದ್ದಲ್ಲಿ ಮರಣಾನಂತರ ನಾಮಿನಿಗೆ ರೂ.7,000-00 ವನ್ನು ಸಂಘದ ವತಿಯಿಂದ ನೀಡಲಾಗುವುದು.

ಮೃತಪಟ್ಟ ಸದಸ್ಯರ ನಾಮಿನಿಗೆ ನೀಡಿದ ಮೊತ್ತವನ್ನು ಮರಣ ನಿಧಿಗೆ ಸೇರಿದ ಸದಸ್ಯರು ವರ್ಷವಾರು ಭರಿಸತಕ್ಕದೆಂದು ಬೈಲಾ ಅನುಮೋದನೆಗೊಂಡಿರುತ್ತದೆ. ಅರ್ಹ ಸದಸ್ಯರೆಲ್ಲರೂ ಈ ನಿಧಿಗೆ ಸದಸ್ಯರಾಗಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಕೋರುತ್ತೇವೆ. ವರದಿ ಸಾಲಿನಾಂತ್ಯಕ್ಕೆ 115 ಜನ ಸದಸ್ಯರಿಂದ ರೂ.  1,37,000-00 ಮರಣನಿಧಿ ವಂತಿಗೆ ಸಂಗ್ರಹವಾಗಿರುತ್ತದೆ.  ವರದಿ ಸಾಲಿನ ಅಂತ್ಯಕ್ಕೆ 5 ಜನ ಸದಸ್ಯರಿಗೆ ರೂ.35,000-00ಗಳನ್ನು ಮರಣನಿಧಿ ವಂತಿಕೆಯಿಂದ ನೀಡಲಾಗಿರುತ್ತದೆ.

ಸಂಘದ ಕಛೇರಿ ಕಟ್ಟಡ ಹಾಗೂ ಗೋದಾಮು ಕಟ್ಟಡ ನಿರ್ಮಾಣದ ಬಗ್ಗೆ:



ಸಂಘದ ಕಟ್ಟಡ ನಿರ್ಮಾಣವು ಮುಕ್ತಾಯವಾಗಿ ಉದ್ಘಾಟನೆಗೊಂಡು ಕಾರ್ಯಾಚರಿಸುತ್ತಿದ್ದು, ವರದಿ ಸಾಲಿನ ಅಂತ್ಯಕ್ಕೆ ಗೋದಾಮು ನಿರ್ಮಾಣಕ್ಕೆ ರೂ.19,97,677.00, ಸಭಾಂಗಣಕ್ಕೆ 23,27,749.00 ಕಛೇರಿ ಮತ್ತು ವ್ಯಾಪಾರ ಮಳಿಗೆಕಟ್ಟಡ ನಿರ್ಮಾಣಕ್ಕಾಗಿ ರೂ.27,68,526.00 ವೆಚ್ಚವಾಗಿರುತ್ತದೆ.



ಸಂಘದ ಕಟ್ಟಡ ನಿರ್ಮಾಣವನ್ನು ಸಂಘದ ಸದಸ್ಯರು ಹಾಗೂ ಸದಸ್ಯೇತರರ ತನುಮನಧನ ಸಹಾಯ , ಹಾಗೂ ನಬಾರ್ಡ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಸಾಲ ಪಡೆಯುವುದರ ಮೂಲಕ, ಜನಪ್ರತಿನಿಧಿಗಳ ಸಹಾಯದಿಂದ ಪೂರೈಸಿದ್ದು, ದಿನಾಂಕ 30-10-2020 ರಂದು ಉದ್ಘಾಟನೆಯನ್ನು ಕೈಗೊಂಡು ಕಾರ್ಯಾರಂಭ ಮಾಡಿರುತ್ತಾರೆ.
 


ಸಂಘವು ಕಟ್ಟಡ ನಿರ್ಮಾಣಕ್ಕಾಗಿ ಮಾಡಿರುವ ಸಾಲವನ್ನು ಪಾವತಿಸಲು ವರಮಾನದ ಅಗತ್ಯತೆ ಇರುವುದರಿಂದ ಸಂಘದ ಸಭಾಂಗಣವನ್ನು ಮದುವೆ, ಸಭೆಸಮಾರಂಭಗಳಿಗೆ ಬಾಡಿಗೆಗೆ ನೀಡಲು ಮತ್ತು ಸಂಘದ ವತಿಯಿಂದ ವ್ಯಾಪಾರ ಮಳಿಗೆಗಳಲ್ಲಿ ರಸಗೊಬ್ಬರ, ದಿನಸಿ, ಕೃಷಿ ಸಲಕರಣೆಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಸಮಾರಂಭ ನಡೆಸಲು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಲವಾರು ಕೆಲಸಗಳು ಬಾಕಿಯಿದ್ದು ಪೂರ್ಣಗೊಳಿಸಲು ಸಹಕಾರ ನೀಡಬೇಕಾಗಿ ಸದಸ್ಯರಲ್ಲಿ ಆಡಳಿತ ಮಂಡಳಿ ವಿನಂತಿಸಿಕೊಳ್ಳುತ್ತಿದ್ದಾರೆ.




# 18. ಸಂಘದ ಆಡಳಿತ ಮಂಡಳಿ:-

1. ಶ್ರೀ ಕೆಚ್ಚೆಟ್ಟೀರ ಬಿ. ಬಿದ್ದಯ್ಯರವರು: ಅಧ್ಯಕ್ಷರು

2. ಶ್ರೀ ಪೊನ್ನಚೆಟ್ಟೀರ ಎಸ್. ಅಪ್ಪಚ್ಚರಂವರು: ಉಪಾಧ್ಯಕ್ಷರು

3. ಶ್ರೀ ನಂದಿನೆರವಂಡ .ಬಿ. ಗಣಪತಿರವರು: ನಿರ್ಧೇಶಕರು

4. ಶ್ರೀ ಕೊರವಂಡ ಕೆ. ಬೋಪಯ್ಯರವರು: ನಿರ್ಧೇಶಕರು

5. ಶ್ರೀ ಪೊನ್ನಚೆಟ್ಟೀರ ಸಿ. ರಮೇಶ್‌ರವರು: ನಿರ್ಧೇಶಕರು

6. ಶ್ರೀ ಮಾದೇಟಿರ .ಜಿ. ಸುರೇಶ್‌ರವರು: ನಿರ್ಧೇಶಕರು
     
7. ಶ್ರೀ ಹೆಚ್. ಎಸ್. ಪಾಪುರವರು: ನಿರ್ಧೇಶಕರು
8. ಶ್ರೀಮತಿ ಕೊರವಂಡ ರಾಣಿ ನಂಜಪ್ಪರವರು: ನಿರ್ಧೇಶಕರು
    
9. ಶ್ರೀಮತಿ ನಂದಿನೆರವಂಡ .ಬಿ. ವಿಲಿನವರವರು: ನಿರ್ಧೇಶಕರು
  
10. ಶ್ರೀ ಅಂಜಪರವಂಡ .ಎಸ್. ದೇವಯ್ಯರವರು: ನಿರ್ಧೇಶಕರು
 
11. ಶ್ರೀ ಎಂ.ಎಸ್. ಶಂಭಯ್ಯರವರು: ನಿರ್ಧೇಶಕರು
   
12. ಶ್ರೀ ನಂದಿನೆರವಂಡ ಕೆ. ನಂದರವರು: ನಿರ್ಧೇಶಕರು

13. ಶ್ರೀ ಕೆ. ಪಿ. ಲೋಕೇಶ್‌ರವರು: ಮುಖ್ಯಕಾರ್ಯನಿರ್ವಹಣಾಧಿಕಾರಿ

14. ಶ್ರೀ ವಿ. ಸಿ. ಅಜಿತ್:  ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕರು

# 19. ಸಂಘದ ಸಿಬ್ಬಂದಿ ವರ್ಗ:-

1. ಶ್ರೀ ಕೆ. ಪಿ. ಲೋಕೇಶ್‌ರವರು: ಮುಖ್ಯಕಾರ್ಯನಿರ್ವಹಣಾಧಿಕಾರಿ

2. ಶ್ರೀಮತಿ ಪಿ.ಎನ್. ಕವಿತಾರವರು: ಗುಮಾಸ್ತರು

3. ಕುಮಾರಿ ಕೆ.ಡಿ. ಸಂಗೀತ: ಗುಮಾಸ್ತರು

4. ಶ್ರೀ ಪಿ.ಕೆ. ಮಹೇಶ್‌ರವರು (ಬೋಯಿಕೇರಿ ಶಾಖೆ): ಗುಮಾಸ್ತರು

5. ಶ್ರೀಮತಿ ಎಲ್ಸಿ: ಪಿಗ್ಮಿ ಸಂಗ್ರಹಗಾರರು

6. ಶ್ರೀ ಎಸ್. ನವೀನ್‌ರವರು(ಬೋಯಿಕೇರಿ ಶಾಖೆ): ಪಿಗ್ಮಿ ಸಂಗ್ರಹಗಾರರು


# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

11266ನೇ ಕಡಗದಾಳು ಇಬ್ನಿವಳವಾಡಿ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.,
ಕಡಗದಾಳು, ಮಡಿಕೇರಿ ತಾಲ್ಲೂಕು, ಕೊಡಗು.

KADAGADALU IBNIVALAVADI PRIMARY AGRICULTURAL Credit CO-OPERATIVE SOCIETY LTD., 

Kadagadalu Ibnivalavadi Paccs Ltd

Via Chettalli, Madikeri-Chettalli Road,

KADAGADALU, MADIKERI TALUK, KODAGU.

GST Number: 29AABAK6444Q1ZY

Email:   kadagadalupacs@gmail.com

Phone: 9483414413


Search Coorg Media

Coorg's Largest Online Media Network 


Previous Post Next Post