ಶುಭ ಸಂದೇಶ

 ಶುಭ ಸಂದೇಶ

( ಶ್ರೀ ಕೊಡಂದೇರ ಪಿ. ಗಣಪತಿ )

ದಿನಾಂಕ: 17-11-2020

“ಒಟ್ಟಿಗೆ ಬರುವುದು ಪ್ರಾರಂಭ, ಒಟ್ಟಿಗೆ ಇರುವುದು ಪ್ರಗತಿ, ಒಟ್ಟಿಗೆ ಕೆಲಸ ಮಾಡುವುದು ವಿಜಯ” ಎಂಬಂತಹ ಶ್ರೇಷ್ಟ ಸಹಕಾರ ತತ್ವಗಳ ಅಡಿಪಾಯದ ಮೇಲೆ, ಸತ್ಯ, ನಿಷ್ಠೆ ಪ್ರಾಮಾಣಿಕತೆಯೊಂದಿಗೆ 1921ನೇ ಇಸವಿಯಲ್ಲಿ ಜಿಲ್ಲಾ ಸಹಕಾರ ಬ್ಯಾಂಕನ್ನು ಪ್ರಾರಂಭಿಸಿರುವ ಕೊಡಗಿನ ಹಿರಿಯ ಮಹಾನ್ ಸಹಕಾರಿ ಚಿಂತಕ ಚೇತನಗಳನ್ನು ನೆನೆಯುತ್ತಾ, ಅಂದಿನಿಂದ ಇಂದಿನ ವರೆಗೆ ಹಲವಾರು ಹಿರಿಯ ಸಹಕಾರಿ ಚಿಂತಕರು ನಡೆಸಿದ ಧಕ್ಷ ಆಡಳಿತ, ಪ್ರಜ್ಞಾವಂತ ಸದಸ್ಯ ಗ್ರಾಹಕರು ಬ್ಯಾಂಕಿನ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸ, ನಿಷ್ಠಾವಂತ ಸಿಬ್ಬಂದಿಗಳು ಸಲ್ಲಿಸಿರುವ ಸೇವೆಯಿಂದ ಇಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ತನ್ನ ಪಾರದರ್ಶಕ ಸೇವೆಯೊಂದಿಗೆ ಕೊಡಗು ಜಿಲ್ಲೆಯ ಸಹಕಾರ ರಂಗದಲ್ಲಿ ದೃತಿಗೆಡದೆ ಕೃಷಿ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿದ್ದು, 99 ವರ್ಷಗಳ ಯಶಸ್ವಿ ಮುನ್ನಡೆಯೊಂದಿಗೆ, ಹೆಮ್ಮರವಾಗಿ ಬೆಳೆದು ಶತಮಾನದ ಹೊಸ್ತಿಲಲ್ಲಿ ಬಂದು ನಿಂತಿರುತ್ತದೆ. “ತಾನು ಪರರಿಗೆ-ಪರರಿಂದ ತನಗೆ” ಎಂಬ ಧ್ಯೇಯವಾಕ್ಯದೊಂದಿಗೆ ಭದ್ರವಾದ ಸಹಕಾರ ತತ್ವಗಳ ಅಡಿಪಾಯದ ಮೇಲೆ ಕಟ್ಟಿರುವ ಸಹಕಾರ ಕ್ಷೇತ್ರವು ಪರಸ್ಪರ ಸಹಕಾರದಿಂದ ಪಾರದರ್ಶಕ ಹಾಗೂ ನಿಸ್ವಾರ್ಥ ಸೇವೆಯಿಂದ ಸಹಕಾರ ಸಂಸ್ಥೆಗಳ ಪ್ರಗತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತದೆ. 

ಕಳೆದ ಹತ್ತು ವರ್ಷಗಳಿಂದ ಕೊಡಗಿನ ಸಮಗ್ರ ಸುದ್ದಿ-ಮಾಹಿತಿಯನ್ನು ಕೊಡಗಿನ ಜನತೆಯನ್ನೊಳಗೊಂಡು ರಾಜ್ಯ, ರಾಷ್ಟ್ರ ಹಾಗೂ ಜಗತ್ತಿನಾದ್ಯಾಂತ ಪ್ರಸಾರಪಡಿಸುತ್ತಿರುವ “ಸರ್ಚ್‌ ಕೂರ್ಗ್‌ ಮೀಡಿಯಾ” ವು ಗ್ರಾಮೀಣ ಪತ್ರಿಕೋದ್ಯಮದಲ್ಲಿ‌ ಕೃಷಿ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಕೊಡಗಿನ ಜನಪ್ರಿಯ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೊಡಗಿನ ಜನಮನದ ಮಾಧ್ಯಮವಾಗಿ ಇದೀಗ ದಶಮಾನೋತ್ಸವದ ಹೊಸ್ತಿಲಲ್ಲಿರುವ “ಸರ್ಚ್‌ ಕೂರ್ಗ್‌ ಮೀಡಿಯಾ” ವು ಕೊಡಗಿನ ಸಹಕಾರಿ ರಂಗದ ಸಮಗ್ರ ಮಾಹಿತಿಯನ್ನು “ಕೊಡಗು ಸಹಕಾರ ದರ್ಶನ” ಎಂಬ ಆನ್‌ಲೈನ್ ಡಿಜಿಟಲ್‌ ಡೈರೆಕ್ಟರಿಯನ್ನು ಪ್ರಕಟಪಡಿಸುತ್ತಿದ್ದು, ಇದು ನಾಡಿನ ಜನತೆಗೆ ಕೊಡಗಿನ ಸಹಕಾರ ಕ್ಷೇತ್ರದ ಉಪಯುಕ್ತವಾದ ಮಾಹಿತಿಯನ್ನು ಒದಗಿಸುವಲ್ಲಿ ಸಹಕಾರಿಯಾಗಲಿ ಎಂದು ನನ್ನ ತುಂಬು ಹೃದಯದ ಶುಭ ಹಾರೈಕೆಗಳು.


“ಜೈ-ಸಹಕಾರ”


✍️.... ಶ್ರೀ ಕೊಡಂದೇರ ಪಿ. ಗಣಪತಿ

           ಅಧ್ಯಕ್ಷರು,

           ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ,

            ಮಡಿಕೇರಿ – ಕೊಡಗು.