ನಂ. 38189 ನೇ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಪೆರಾಜೆ.
# 1. ಪ್ರಾಸ್ತವಿಕ:-
ಇತಿಹಾಸ : ಸಹಕಾರ ಚಳುವಳಿಯು ಪರಿಣಾಮಕಾರಿಯಾಗಿ ಮಹತ್ವಪಡೆದುಕೊಳ್ಳುತ್ತಿದ್ದಂತೇ ನಮ್ಮ ಪೆರಾಜೆ ಗ್ರಾಮದ ಕೃಷಿಕರ ಸಮಸ್ಯೆಗಳನ್ನು ಮನಗಂಡು ಗ್ರಾಮದ ರೈತ ಸದಸ್ಯರು ಸೇರಿಕೊಂಡು ಜೈಹಿಂದ್ ಮರಾಟ ಸಹಕಾರ ಸಂಘವನ್ನು ಸ್ಥಾಪಿಸಿಕೊಂಡರು. ತದನಂತರದಲ್ಲಿ ಪೆರಾಜೆ ಸೇವಾ ಸಹಕಾರಿ ಸಂಘವನ್ನು 27/01/1960 ರಂದು ಮಡಿಕೇರಿ ಸಹಕಾರ ಸಂಘಗಳ ರಿಜಿಸ್ಟಾರ್ ರವರ ಮಂಜೂರಾತಿ ನಂ.357ರ ಪ್ರಕಾರ ನೋಂದಣಿ ಮಾಡಿಕೊಳ್ಳಲಾಯ್ತು. ದಿನಾಂಕ 30/09/1961 ರಲ್ಲಿ ನಡೆದ ಜೈಹಿಂದ್ ಮಾರಾಟ ಸಹಕಾರ ಸಂಘದ ಮಹಾಸಭೆಯಲ್ಲಿ ಹಾಗೂ 1960-61ನೇ ಸಾಲಿನ ಪೆರಾಜೆ ಸೇವಾ ಸಹಕಾರಿ ಸಂಘದ ಮಹಾಸಭೆಯಲ್ಲಿ ಕಾರ್ಯಪ್ರವೃತದಲ್ಲಿರುವ ಜೈಹಿಂದ್ ಮಾರಾಟ ಸಹಕಾರ ಸಂಘವನ್ನು ಪೆರಾಜೆ ಸೇವಾ ಸಹಕಾರ ಸಂಘದ ಜೊತೆಯಲ್ಲಿ ವಿಲೀನಗೊಳಿಸುವುದರ ಬಗ್ಗೆ ನಿರ್ಣಯಿಸಲಾಯ್ತು.
ದಿನಾಂಕ 18/09/1976 ರಲ್ಲಿ ಕರ್ನಾಟಕ ಸರಕಾರವು ರಾಜ್ಯದಾದ್ಯಂತ ಇರುವ ಚಿಕ್ಕ ಪುಟ್ಟ ಸಹಕಾರ ಸಂಘಗಳನ್ನು ಒಂದುಗೂಡಿಸಿ ದೊಡ್ಡ ಪ್ರಮಾಣದ ಸಹಕಾರ ಸಂಘಗಳನ್ನು ರಚಿಸುವ ನಿಟ್ಟಿನಲ್ಲಿ ನಿರ್ದೇಶಿಸಿದ ಪ್ರಕಾರ ಸಂಪಾಜೆ, ಪೆರಾಜೆ, ಚೆಂಬು ಗ್ರಾಮದ ಸಹಕಾರ ಸಂಘಗಳನ್ನು ಒಂದುಗೂಡಿಸಿ “ಸಂಪಾಜೆ ವ್ಯವಸಾಯ ಸೇವಾ ಸಹಕಾರ ಸಂಘ” ವನ್ನು ನಂ.2778 ರಲ್ಲಿ ನೋಂದಾಯಿಸಿ ರಚಿಸಲ್ಪಟ್ಟಿತ್ತು, ಆದರೆ ಪೆರಾಜೆ ಗ್ರಾಮದ ಸದಸ್ಯರಿಂದ ಇದಕ್ಕೆ ವಿರೋದವಿತ್ತು. ಪೆರಾಜೆ ಸೇವಾ ಸಹಕಾರ ಸಂಘದಲ್ಲಿ ಅಧ್ಯಕ್ಷರಾಗಿ ಶ್ರೀ ಪಿ.ಎಂ ಬೋಜಪ್ಪ ರವರು ಮತ್ತು ಕಾರ್ಯದರ್ಶಿಯಾಗಿ ಹೆಚ್.ಬಿ ತೀರ್ಥರಾಮರವರು ಕಾರ್ಯನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಪೆರಾಜೆ ಸಹಕಾರ ಸಂಘದಲ್ಲಿ 450 ಜನ ಸದಸ್ಯರಿದ್ದರು, ಸಂಘದ ವ್ಯವಹಾರಕ್ಕೆ ಸಂಪಾಜೆಗೆ ಹೋಗುವು ವಿಚಾರ ಬಂದಾಗ ಆಗಿನ ಸಹಕಾರಿ ಸಚಿವರಿಗೆ ಸದಸ್ಯರೆಲ್ಲರೂ ಸೇರಿ ಮನವಿಯೊಂದನ್ನು ನೀಡಿ ಸಂಘವನ್ನು ಪೆರಾಜೆಯಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಸರ್ಕಾರದ ನಿಯಮವು ಆ ಸಂದರ್ಭದಲ್ಲಿ ಕಾರ್ಯಗತವಾಗುವುದು ಸ್ಪಷ್ಟವಾಗಿತ್ತು. ಹೊಸದಾಗಿ 3 ಗ್ರಾಮಗಳನ್ನೊಳಗೊಂಡು ರಚನೆಗೊಂಡ ಸಂಘಕ್ಕೆ 11 ಜನ ಸದಸ್ಯರಿರುವ ಆಡಳಿ ಮಂಡಳಿಯನ್ನು 3 ವರ್ಷದ ಅವದಿಗೆ ಸರಕಾರವು ನಾಮ ನಿರ್ಧೇಶನ ಮಾಡಿತು. ಈ ಮಂಡಳಿಯಲ್ಲಿ ಹೆಚ್.ಎಸ್ ವೆಂಕಪ್ಪರವರು ಅಧ್ಯಕ್ಷರಾಗಿದ್ದರು. ದಿನಾಂಕ 14-11-1991 ರಲ್ಲಿ “ಸಂಪಾಜೆ ವ್ಯವಸಾಯ ಸೇವಾ ಸಹಕಾರ ಸಂಘವನ್ನು “ ಪಯಸ್ವಿನಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್” ಎಂಬುದಾಗಿ ಪುನರ್ ನಾಮಕರಣ ಮಾಡಲಾಯಿತು.
ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಭಂದಕರು ಬೆಂಗಳೂರು ಇವರ ಸುತ್ತೋಲೆ ಪ್ರಕಾರ 8 ಕಿ.ಮೀ ಪರೀದಿಗೆ ಕಡಿಮೆ ಇರದಂತೆ, ಕನಿಷ್ಟ 600 ಕುಟುಂಬಗಳಿಗೆ, ಕನಿಷ್ಟ 5000 ಎಕ್ರೆ ಕೃಷಿ ಭೂಮಿ ಹೊಂದಿರುವ, ಕನಿಷ್ಟ 20 ಲಕ್ಷ ಸಾಲ ನೀಡಲು ಶಕ್ತವಾಗಿರುವ ಪ್ರದೇಶಗಳಲ್ಲಿ ಪ್ರತ್ಯೇಕ ಕೃಷಿ ಪತ್ತಿನ ಸಹಕಾರ ಸಂಘವನ್ನು ರಚನೆಗೊಳಿಸುವ ಸುತ್ತೋಲೆಯ ಅನ್ವಯ 2016-17 ನೇ ಸಾಲಿನ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸ¨ ಲ್ಲಿ ಈ ವಿಚಾರದ ಚರ್ಚೆಗೆ ವಿಷಯವನ್ನು ಮಂಡಿಸಲಾಗಿ, ಸುಮಾರು 41 ವರ್ಷದಿಂದ ಒಟ್ಟಿಗೆ ಇದ್ದ ಪೆರಾಜೆ ಶಾಖೆ ಪ್ರಸ್ತುತ ವ್ಯವಹಾರ ಜಾಸ್ತಿ ಇದ್ದು, ಸಾಲ ವಿತರಣೆ, ಠೇವಣಿ ಎಲ್ಲವೂ ಒಂದು ಸ್ವತಂತ್ರ ಸಂಘಕ್ಕೆ ಬೇಕಾದ ಸಧೃಡತೆ ಇರುವ ಕಾರಣ ಸರ್ಕಾರದ ಸುತ್ತೋಲೆ ಪ್ರಕಾರ ಪೆರಾಜೆ ಶಾಖೆಯನ್ನು ವಿಭಜಿಸಿ, ಪೆರಾಜೆಯಲ್ಲಿ ಹೊಸ ಸಂಘವನ್ನು ಸರಕಾರದ ಆದೇಶದ ಮೇರೆಗೆ ರಚಿಸಬೇಕೆಂದು ಸದಸ್ಯರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ದಿನಾಂಕ 23/02/2018 ರಂದು ಪೆರಾಜೆ ಗ್ರಾಮದಲ್ಲಿ ಹೊಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ರಚಿಸುವ ಬಗ್ಗೆ ಗ್ರಾಮದ ಸರ್ವ ಸದಸ್ಯರ ಸಭೆಯನ್ನು ಕರೆಯಲಾಯಿತು. ಆ ಸಭೆಯಲ್ಲಿ 13 ಜನ ಪ್ರವರ್ತಕರನ್ನು ಆಯ್ಕೆ ಮಾಡಲಾಯ್ತು, ಮುಖ್ಯ ಪ್ರವರ್ತಕರಾಗಿ ಶ್ರೀ ನಾಗೇಶ ಕುಂದಲ್ಪಾಡಿಯವರು, ಪ್ರವರ್ತಕರುಗಳಾಗಿ, ಶ್ರೀ ನಂಜಪ್ಪ ನಿಡ್ಯಮಲೆ, ಶ್ರೀ ಬಾಲಕೃಷ್ಣ ಡಿ.ಬಿ, ಶ್ರೀ ಬೋಜಪ್ಪ ಪಿ.ಎಂ, ಶ್ರೀ ಚಂದ್ರಶೇಖರ ಕೆ.ಬಿ, ಶ್ರೀ ಜಿತೇಂದ್ರ ನಿಡ್ಯಮಲೆ, ಶ್ರೀಮತಿ ಪೂರ್ಣಿಮ ಕುದ್ಕುಳಿ, ಶ್ರೀಮತಿ ರೇಣುಕಾ ಕುಂದಲ್ಪಾಡಿ, ಶ್ರೀಮತಿ ಮೀನಾಕ್ಷಿ ಬಾಲಚಂದ್ರ, ಶ್ರೀ ಶೇಷಪ್ಪ ನಾಯ್ಕ ಎನ್.ವಿ, ಶ್ರೀ ಅಬೂಬಕರ್ ಪಿ.ಎನ್, ಶ್ರೀ ಮಹಮ್ಮದ್ ಪಿ.ಬಿ, ಶ್ರೀ ಬಾಬು.ಪಿ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯ್ತು. ಈ ಸಮಿತಿಯಿಂದ ಸಂಘವನ್ನು ಸಹಕಾರ ಸಂಘಗಳ ಸಹಾಯಕ ನಿಭಂದಕರ ಕಛೇರಿ ಮಡಿಕೇರಿಯಲ್ಲಿ ನೋಂದಾಯಿಸಿಕೊಂಡು“ ನಂ38189 ನೇ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಪೆರಾಜೆ-ಕೊಡಗು” ಹೆಸರಿನಲ್ಲಿ ಸಂಘದ ಉಪನಿಯಮಗಳನ್ನು ರಚಿಸಿ ಸಹಕಾರ ಸಂಘಗಳ ಸಹಾಯಕ ನಿಭಂದಕರಿಂದ ಅಂಗೀಕರಿಸಿಕೊಂಡು ಆ ಮೂಲಕ ಕಾರ್ಯಾರಂಭ ಮಾಡಲಾಯ್ತು.
10/07/2018 ರಂದು ಮುಂದಿನ 5 ವರ್ಷಗಳ ಅವದಿಗೆ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಶ್ರೀ ನಾಗೇಶ ಕುಂದಲ್ಪಾಡಿ, ಶ್ರೀ ಮೋನಪ್ಪ ಎನ್.ಬಿ ,ಶ್ರೀ ಅಶೋಕ ಪಿ.ಎಂ ಶ್ರೀ ಪ್ರಸನ್ನ ನೆಕ್ಕಿಲ, ಶ್ರೀ ಗಾಂಧೀಪ್ರಸಾದ್ ಬಂಗಾರಕೋಡಿ , ಶ್ರೀ ದೀನರಾಜ ದೊಡ್ಡಡ್ಕ, ಶ್ರೀ ಜಯರಾಮ ಪಿ., ಶ್ರೀ ಶೇಷಪ್ಪ ನಾಯ್ಕ ನಿಡ್ಯಮಲೆ, ಶ್ರೀಮತಿ ಪ್ರಮಿಳಾ ಎನ್. ಬಂಗಾರಕೋಡಿ, ಶ್ರೀಮತಿ ರೇಣುಕಾ ಕುಂದಲ್ಪಾಡಿ, ಶ್ರೀ ಉದಯಕುಮಾರ ಪಿ.ಎ, ಶ್ರೀ ದಾಸಪ್ಪ ಮಡಿವಾಳ, ಶ್ರೀ ಕಿರಣ ಬಂಗಾರಕೋಡಿ ಇವರು ನಿರ್ಧೇಶಕರಾಗಿ ಆಯ್ಕೆಯಾದರು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಶ್ರೀ ನಾಗೇಶ್ ಕುಂದಲ್ಪಾಡಿಯವರು ಹಾಗೂ ಉಪಾಧ್ಯಕ್ಷರಾಗಿ ಶ್ರೀ ಮೋನಪ್ಪ ಎನ್.ಬಿ ಇವರು ಆಯ್ಕೆಯಾದರು.
# 2. ಸಂಘದ ಕಾರ್ಯವ್ಯಾಪ್ತಿ:-
ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆ.ಪೆರಾಜೆ ಮತ್ತು ಪಿ.ಪೆರಾಜೆ ಗ್ರಾಮಗಳು
# 3. ಸಂಘದ ಕಾರ್ಯಚಟುವಟಿಕೆಗಳು:-
ಸಂಸ್ಥೆಯು ಸಂಪೂರ್ಣ ಗಣಕೀಕೃತ ವ್ಯವಹಾರವನನ್ನು ನಡೆಸುತ್ತಿದ್ದು ಸದಸ್ಯರಿಗೆ ಕೆ.ಸಿ.ಸಿ, ಮದ್ಯಮಾವದಿ ಕೃಷಿ ಸಾಲ, ಪಶು ಸಂಗೋಪನೆ ಸಾಲ, ಹೊಸ ಮತ್ತು ಹಳೆಯ ವಾಹನ ಸಾಲ, ಕೃಷಿಯೇತರ ಸಾಲ, ಜಾಮೀನು ಸಾಲ, ಗೃಹೋಪಯೋಗಿ ವಸ್ತು ಖರೀದಿ ಸಾಲ, ಯಂತ್ರೋಪಕರಣಗಳ ಖರೀದಿ ಸಾಲ, ಚಿನ್ನಾಭರಣ ಈಡಿನ ಸಾಲ, ಠೇವಣಿ ಆದಾರ ಸಾಲ, ಸ್ವ-ಸಹಾಯ ಸಂಘಗಳ ಸಾಲ, ಉತ್ಪತ್ತಿ ಈಡಿನ ಸಾಲ ಮುಂತಾದ ವಿವದ ರೀತಿಯ ಸಾಲ ನೀಡುತ್ತಿದ್ದೇವೆ. ಸಂಸ್ಥೆಯಲ್ಲಿ ಸೇಫ್ ಲಾಕರ್, ಮರಣ ನಿಧಿ ಯೋಜನೆ, ಕೆ.ಸಿ.ಸಿ ಅಪಘಾತ ವಿಮಾ ಯೋಜನೆ, ನೆಪ್ಟ್ ಸೌಲಭ್ಯ ವಿರುತ್ತದೆ. ಮಾರಾಟ ವಿಭಾಗದಲ್ಲಿ ಕೃಷಿ ಉಪಕರಣಗಳು, ರಾಸಾಯನಿಕ ಗೊಬ್ಬರ, ರಬ್ಬರ್ ಕೃಷಿಯಂತ್ರಗಳು, ಗೃಹ ಬಳಕೆ ವಸ್ತುಗಳು, ಹಾರ್ಡ್ವೇರ್ ಮಾರಾಟ ವ್ಯವಸ್ಥೆ ಇರುತ್ತದೆ. ಕೃಷಿ ಉತ್ಪನ್ನ ಗಳಾದ ರಬ್ಬರ್, ಅಡಿಕೆ ಮತ್ತು ಕೊಕ್ಕೊ ಖರೀದಿ ವ್ಯವಸ್ಥೆ ಇರುತ್ತದೆ. ರೈತ ಸದಸ್ಯರಿಗೆ ಉಪಯೋಗುವಂತಹ ಅನೇಕ ತರಭೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಪಡಿತರ ವಿತರಣಾ ವ್ಯವಸ್ಥೆ ಹಾಗೂ ಆಕರ್ಷಕ ಬಡ್ಡಿದರದಲ್ಲಿ ಠೆವಣಿ ಸಂಗ್ರಹಣೆ.
# 4. ಅಭಿವೃದ್ಧಿಯ ಮುನ್ನೋಟ:-
ಹೂಡಿಕೆಗಳು (ಲಕ್ಷಗಳಲ್ಲಿ)
2018-19 ರಲ್ಲಿ 25.47, 2019-20 ರಲ್ಲಿ 96.13, 2020-21ರಲ್ಲಿ 214.36
ಪಾಲು ಬಂಡವಾಳ (ಲಕ್ಷಗಳಲ್ಲಿ)
2018-19 ರಲ್ಲಿ 136.83, 2019-20 ರಲ್ಲಿ145.98, 2020-21ರಲ್ಲಿ 153.23
ತಲಾಷೇರಿನ ಗಳಿಕೆ
2018-19 ರಲ್ಲಿ 35.06, 2019-20 ರಲ್ಲಿ 51.83, 2020-21ರಲ್ಲಿ 76.03
ನಿಧಿಗಳು (ಲಕ್ಷಗಳಲ್ಲಿ)
2018-19 ರಲ್ಲಿ 40.76, 2019-20 ರಲ್ಲಿ 48.12, 2020-21ರಲ್ಲಿ 58.4
ನಿವ್ಹಳ ಲಾಭ (ಲಕ್ಷಗಳಲ್ಲಿ)
2018-19 ರಲ್ಲಿ 9.59, 2019-20 ರಲ್ಲಿ 15.13, 2020-21ರಲ್ಲಿ 23.30
ವ್ಯಾಪಾರ ಲಾಭ (ಲಕ್ಷಗಳಲ್ಲಿ)
2018-19 ರಲ್ಲಿ 0.90, 2019-20 ರಲ್ಲಿ 7.92, 2020-21ರಲ್ಲಿ 17.03
ಸುಸ್ತಿ ಸಾಲ (ಲಕ್ಷಗಳಲ್ಲಿ)
2018-19 ರಲ್ಲಿ 13.71, 2019-20 ರಲ್ಲಿ 34.61, 2020-21ರಲ್ಲಿ 10.83
ಖರೀದಿ (ಲಕ್ಷಗಳಲ್ಲಿ)
2018-19 ರಲ್ಲಿ 33.7, 2019-20 ರಲ್ಲಿ 326.06, 2020-21ರಲ್ಲಿ 546.22
ಮಾರಾಟ (ಲಕ್ಷಗಳಲ್ಲಿ)
2018-19 ರಲ್ಲಿ 25.49, 2019-20 ರಲ್ಲಿ 328.98, 2020-21ರಲ್ಲಿ 553.92
ಠೇವಣಿ (ಲಕ್ಷಗಳಲ್ಲಿ)
2018-19 ರಲ್ಲಿ 644.3, 2019-20 ರಲ್ಲಿ 746.31, 2020-21ರಲ್ಲಿ 967.4
ಸಾಲಗಳು (ಲಕ್ಷಗಳಲ್ಲಿ)
2018-19 ರಲ್ಲಿ 1439.11, 2019-20 ರಲ್ಲಿ 1542.68, 2020-21ರಲ್ಲಿ 1590.47
ಸದಸ್ಯತ್ವ
2018-19 ರಲ್ಲಿ 1421, 2019-20 ರಲ್ಲಿ 1561, 2020-21ರಲ್ಲಿ 1622
ಕ್ರಿಯಾಶೀಲ ಸದಸ್ಯರು
2018-19 ರಲ್ಲಿ 1183, 2019-20 ರಲ್ಲಿ 1202, 2020-21ರಲ್ಲಿ 1260
ದುಡಿಯುವ ಬಂಡವಾಳ (ಲಕ್ಷಗಳಲ್ಲಿ)
2018-19 ರಲ್ಲಿ 821.98, 2019-20 ರಲ್ಲಿ 1800.86, 2020-21ರಲ್ಲಿ 2007.32
ಒಟ್ಟು ವಹಿವಾಟು (ಲಕ್ಷಗಳಲ್ಲಿ)
2018-19 ರಲ್ಲಿ 2083.42, 2019-20 ರಲ್ಲಿ 2780.09, 2020-21ರಲ್ಲಿ 3421.12
# 5 ಸಂಘದ ಸದಸ್ಯತ್ವ:-
31-03-2022 ರ ಅಂತ್ಯಕ್ಕೆ 1704 ಜನ ಸದಸ್ಯರು
# 6. ಪಾಲು ಬಂಡವಾಳ:-
31-03-2022 ರ ಅಂತ್ಯಕ್ಕೆ ರೂ. 161.16 ಲಕ್ಷ ಪಾಲು ಬಂಡವಾಳ
# 7. ಠೇವಣಿಗಳು:-
31-03-2022 ರ ಅಂತ್ಯಕ್ಕೆ (ಲಕ್ಷಗಳಲ್ಲಿ)
ನಿರಖು ಠೇವಣಿ: 603.73
ಮಿತವ್ಯಯ ಠೇವಣಿ: 70.52
ಸಿಬ್ಬಂದಿ ಭದ್ರತಾ ಠೇವಣಿ: 3.90
ಮಾಸಿಕ ಠೇವಣಿ: 5.74
ಮರಣ ನಿಧಿ: 13.43
ಅಕ್ಷಯ ಠೇವಣಿ: 21.21
ಉಳಿತಾಯ ಖಾತೆ: 378.03
Search Coorg Media
Coorg's Largest Online Media Network