ಎಸ್.ಜೆ. ಪ್ರಸನ್ನ ಕುಮಾರ್‌, ಸಹಕಾರಿಗಳು: ಆಲೂರು ಸಿದ್ದಾಪುರ. Alur Siddapura

ಎಸ್.ಜೆ. ಪ್ರಸನ್ನ ಕುಮಾರ್‌, ಸಹಕಾರಿಗಳು: ಆಲೂರು ಸಿದ್ದಾಪುರ. Alur Siddapura


ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಜೆ. ಪ್ರಸನ್ನ ಕುಮಾರ್‌ರವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಮ್ಮ ತಂದೆಯವರಾದ ಎಸ್.ಪಿ. ಜೋಯಪ್ಪನವರು ಹಿರಿಯ ಸಹಕಾರಿಗಳಾಗಿದ್ದು, ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ತಂದೆಯವರ ಸಹಕಾರ ಕ್ಷೇತ್ರದಲ್ಲಿನ ಸೇವೆಯಿಂದ ಪ್ರೇರಣೆಗೊಂಡು ಎಸ್.ಜೆ. ಪ್ರಸನ್ನ ಕುಮಾರ್‌ರವರು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆಗೊಂಡರು.

2013ರಲ್ಲಿ ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡ ಎಸ್.ಜೆ. ಪ್ರಸನ್ನ ಕುಮಾರ್‌ರವರು 2013-2018ರವರೆಗಿನ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದರು. ನಂತರ 2018-2023ರ ಅಧಿಯ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 2003ರಲ್ಲಿ ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯತ್ವನ್ನು ಪಡೆದ ಎಸ್.ಜೆ. ಪ್ರಸನ್ನ ಕುಮಾರ್‌ ಸರಿ ಸುಮಾರು 18 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2019-20ರ ಸಾಲಿನಲ್ಲಿ 17ಲಕ್ಷ ಲಾಭವನ್ನು ಪಡೆದಿದ್ದು, 2020-21ರ ಸಾಲಿನಲ್ಲಿ 22ಲಕ್ಷ ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗುತ್ತಿದೆ ಎಂದ ಎಸ್.ಜೆ. ಪ್ರಸನ್ನ ಕುಮಾರ್‌ರವರು, ಸಂಘದಿಂದ ಸದಸ್ಯರು ಹಾಗು ಇತರೆ ಗ್ರಾಹಕರು ಪಡೆದಿದ್ದ ಸಾಲಗಳ ಶೇಕಡ 99%ರಷ್ಟು ಸಕಾಲ ಮರು ಪಾವತಿ ಪ್ರಮುಖ ಕಾರಣ ಎಂದರು. ಹಾಗೆ ಸಂಘದಿಂದ ನೀಡಲ್ಲಪಡುತ್ತಿರುವ ಜಾಮೀನು ಸಾಲ, ಗೊಬ್ಬರ ಸಾಲ, ಪಿಗ್ಮಿ O.D. ಸಾಲ, ಆಭರಣ ಸಾಲ, ವಾಹನ ಖರೀದಿ ಸಾಲ, ವಾಣಿಜ್ಯ ಮಳಗೆಗಳಿಂದ ಬರುವ ಬಾಡಿಗೆ ರೂಪದ ಆದಾಯ ಹಾಗೂ ನ್ಯಾಯ ಬೆಲೆ ಅಂಗಡಿಗಳಿಂದ ದೊರೆಯುವ ಆದಾಯ ಮುಂತಾದವುಗಳಿಂದ ಸಂಘವು ಲಾಭವನ್ನು ಹೊಂದಿದ್ದೆ ಎಂದು ತಿಳಿಸಿದರು.

ಎಸ್.ಜೆ. ಪ್ರಸನ್ನ ಕುಮಾರ್‌ರವರು ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಸಂಘಕ್ಕೆ ಹೆಚ್ಚೆಚ್ಚು ಹೊಸ ಸದಸ್ಯರನ್ನು ಸೆರ್ಪೆಡೆಗೊಳಿಸುವಲ್ಲಿ ಶ್ರಮವಹಿಸಿದ್ದಾರೆ. ಹಾಗೆ ಆಡಳಿತ ಮಂಡಳಿಯ ಕಾರ್ಯನಿರ್ಣಯಕ್ಕೆ ತಮ್ಮ ಪೂರ್ಣ ಸಹಕಾರವನ್ನು ನೀಡಿದ್ದಾರೆ. 2018ಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಪಿಗ್ಮಿ ಸಾಲ, ಜಾಮೀನು ಸಾಲ, ಗೊಬ್ಬರ ಸಾಲ ನೀಡಲು ಹೆಜ್ಜೆಯಿಟ್ಟರು. ಹಾಗೆ ಆಭರಣ ಸಾಲದ ಮೌಲ್ಯವನ್ನು ವೃದ್ಧಿಗೊಳಿಸಿ ಬಡ್ಡಿದರವನ್ನು ಕಡಿತಗೊಳಿಸುವಲ್ಲಿ ಶ್ರಮವಹಿಸಿದ್ದಾರೆ. ಸಂಘದ ಸದಸ್ಯರಲ್ಲದ  ಸಂಘದ ಕಾರ್ಯ ವ್ಯಾಪ್ತಿಯಲ್ಲಿರುವ ಗ್ರಾಮಗಳ ಆಟೋ ಚಾಲಕರು ಹಾಗೂ ಮಾಲೀಕರಿಗೆ ಅಲ್ಪಾವಧಿ ಸಾಲವನ್ನು ನೀಡಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಎಸ್.ಜೆ. ಪ್ರಸನ್ನ ಕುಮಾರ್‌ರವರು  ತಿಳಿಸಿದರು. ತಮ್ಮ ಅಧಿಕಾರವಧಿಯಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಉತ್ತಮ ಆಡಳಿತದ ಕಾರ್ಯನಿರ್ವಹಣೆಗೆ   ಪ್ರಶಸ್ತಿಯನ್ನು ಗಳಿಸಿಕೊಟ್ಟಿದ್ದಾರೆ. 2021ನೇ ಸಾಲಿನಲ್ಲಿ ದಾಖಲೆಯ ಅಂದಾಜು 18,600 ಚೀಲ ಗೊಬ್ಬರ ಮಾರಾಟವಾಗಿದ್ದು ಇವರ ಹೆಗ್ಗಳಿಕೆಯಾಗಿದೆ. 

ತಮ್ಮ ಮುಂದಿನ ಕ್ರೀಯಾ ಯೋಜನೆಗಳ ಬಗ್ಗೆ ವಿವರಿಸಿದ ಎಸ್.ಜೆ. ಪ್ರಸನ್ನ ಕುಮಾರ್‌ರವರು, ನೂತನ ಆಡಳಿತ ಕಛೇರಿ ನಿರ್ಮಾಣ ಹಾಗೂ ಸಭಾಂಗಣ ನಿರ್ಮಾಣ  ಕಾಮಗಾರಿ ಪ್ರಗತಿಯಲ್ಲಿದ್ದು, ಸಂಘವನ್ನು ಇನ್ನಷ್ಟು ಪ್ರಗತಿಯತ್ತ ಕೊಂಡೊಯ್ಯೊಲು ಶ್ರಮವಹಿಸುವುದಾಗಿ ತಿಳಿಸಿದರು.  ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ಎಸ್.ಜೆ. ಪ್ರಸನ್ನ ಕುಮಾರ್‌ರವರು  ತಿಳಿಸಿದರು.

ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದ ಎಸ್.ಜೆ. ಪ್ರಸನ್ನ ಕುಮಾರ್‌ರವರು, ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಇರಬಾರದು ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.  

ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ  ಭಾವಿ ಯುವಶಕ್ತಿಗೆ ಎಸ್.ಜೆ. ಪ್ರಸನ್ನ ಕುಮಾರ್‌ರವರು, ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.

ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಎಸ್.‌ ಜೆ. ಪ್ರಸನ್ನ ಕುಮಾರ್‌ರವರು ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೆ ಜೆಡಿಎಸ್‌ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಮಲೆ ಮಲ್ಲೇಶ್ವರ ಯುವಕ ಸಂಘದ ಆಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಸಂದರ್ಭ ಹಲವಾರು ಕ್ರೀಡಾಕೂಟಗಳನ್ನು ಆಯೋಜಿಸಿದ್ದಾರೆ. ಹಾಗೆ ಜಿಲ್ಲಾ ಯುವಜನ ಮೇಳವನ್ನು ಆಯೋಜಿಸಿದ್ದಾರೆ.

ಮೂಲತ: ಕೃಷಿಕರಾಗಿರುವ ಹಾಗೂ ಉದ್ಯಮಿಯಾಗಿರುವ ಎಸ್‌.ಜೆ. ಪ್ರಸನ್ನ ಕುಮಾರ್‌ರವರು, ಜೋಯಪ್ಪ ಹಾಗೂ ಲಲಿತಮ್ಮ ದಂಪತಿಯ ಹಿರಿಯ ಪುತ್ರರಾಗಿದ್ದಾರೆ. ಇವರ ಪತ್ನಿ ಸುನಂದ ಗೃಹಿಣಿಯಾಗಿದ್ದಾರೆ. ಮಗ ಅಭಿಷೇಕ್‌ MSc Agriculture ಪದವಿಧರರಾಗಿದ್ದು, HDFC ಬ್ಯಾಂಕಿನ ಉದ್ಯೋಗಿಯಾಗಿದ್ದಾರೆ. ಮಗಳು ಆತ್ಮೀಯ B.com. ಪದವೀಧರಾಗಿದ್ದಾರೆ. ಪ್ರಸನ್ನ ಕುಮಾರ್‌ರವರ ಕಿರಿಯ ಸಹೋದರ ಯೋಗೇಂದ್ರ ಕೃಷಿಕರಾಗಿದ್ದು, ಇವರ ಪತ್ನಿ ರಕ್ಷಿತಾ ಗೃಹಿಣಿಯಾಗಿದ್ದಾರೆ. ಹಿರಿ ಮಗ ಅನುಷ್‌ ಗೌಡ B.com. ವ್ಯಾಸಾಂಗ ನಿರತರಾಗಿದ್ದಾರೆ. ಕಿರಿ ಮಗ ಆಯುಷ್‌ ಗೌಡ PUC  ವ್ಯಾಸಾಂಗ ನಿರತರಾಗಿದ್ದಾರೆ. 

ಎಸ್‌.ಜೆ. ಪ್ರಸನ್ನ ಕುಮಾರ್‌ರವರು, ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಾಲಂಬಿ ಗ್ರಾಮದಲ್ಲಿ ಕೂಡು ಕುಟುಂಬದಲ್ಲಿ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.


ಸಂದರ್ಶನದ ದಿನಾಂಕ: 04-10-2021


Search Coorg Media

Coorg's Largest Online Media Network 


Previous Post Next Post