ನಂ. 2790ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಬೈರಂಬಾಡ
# 1. ಪ್ರಾಸ್ತವಿಕ:-
ಸಂಘದ ಸ್ಥಾಪನೆ: 18-09-1976# 2. ಸಂಘದ ಕಾರ್ಯವ್ಯಾಪ್ತಿ:-
ಕಣ್ಣಂಗಾಲ, ಬೈರಂಬಾಡ, ಹಾಲುಗುಂದ, ಹಚ್ಚಿನಾಡು ಹಾಗೂ ಯಡೂರು ಗ್ರಾಮಗಳ ಕಾರ್ಯ ವ್ಯಾಪ್ತಿಯನ್ನು ಒಳಗೊಂಡಿದೆ.# 3. ಸಂಘದ ಕಾರ್ಯಚಟುವಟಿಕೆಗಳು:-
ರೈತರಿಗೆ ವಿವಿಧ ರೀತಿಯ ಸಾಲ ಸೌಲಭ್ಯಗಳು, ರೈತರಿಗೆ ಕೃಷಿ ಉತ್ಪನ್ನಗಳ ಮಾರಾಟ, ರಸಗೊಬ್ಬರ ಮಾರಾಟ, ಕೀಟನಾಶಕ, ಕೊಳೆನಾಶಕಗಳ ಮಾರಾಟ, ಸರ್ಕಾರದ ಅನ್ನ ಭಾಗ್ಯಾ ಯೋಜನೆಯಡಿ ಸಂಘದಲ್ಲಿ ಎಪಿಎಲ್, ಬೀಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಆಹಾರ ದಾನ್ಯ ವಿತರಣೆ ಇತ್ಯಾದಿ* ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ಪೂರೈಸಲು ಬೇಕಾಗುವ ಹಣವನ್ನು ಸಂಘವು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಥವಾ ಯಾವುದೇ ಬ್ಯಾಂಕ್ ಗಳಿಂದ ಪಡೆಯಬಹುದು.
* ಸದಸ್ಯರಿಗೆ ಅಗತ್ಯವಾದ ವ್ಯವಸಾಯ ಸಾಮಗ್ರಿಗಳು ಅಂದರೆ ಬಿತ್ತನೆ ಬೀಜ ಗೊಬ್ಬರ ರಾಸಾಯನಿಕ ಗೊಬ್ಬರ ವ್ಯವಸಾಯ ಉಪಕರಣಗಳು ಕ್ರಿಮಿ ನಾಶಕ ಔಷಧಿಗಳು ಇತ್ಯಾದಿಗಳನ್ನು ಪೂರೈಸುವುದು.
* ಆಹಾರ ಧಾನ್ಯಗಳನ್ನು ಹಾಗೂ ನಿತ್ಯಜೀವನದ ಬಳಕೆಗೆ ಬೇಕಾಗುವ ವಸ್ತುಗಳನ್ನು ಔಷಧಗಳನ್ನು ಹಾಗೂ ಪಶು ಆಹಾರಗಳನ್ನು ಸರಬರಾಜು ಮಾಡುವುದು.
* ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆಗೆ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರದ ತಂದ ರೈತ ಪರವಾದ ಯೋಜನೆಗೆ ಪ್ರೋತ್ಸಾಹ ನೀಡುವುದು.
* ಸಣ್ಣ ಉಳಿತಾಯ ಯೋಜನೆಯಲ್ಲಿ ಸದಸ್ಯರು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು.
* ಸಂಘವು ಸದಸ್ಯರ ಅವಲಂಬಿತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಸಾಮಾನ್ಯ ವಿಮಾ ನಿಗಮ ಜೀವ ವಿಮಾ ನಿಗಮದ ಸಂಸ್ಥೆಗಳು ಒದಗಿಸುವ ಸಾಮೂಹಿಕ ವಿಮಾ ಭದ್ರತೆಯನ್ನು ಒದಗಿಸುವುದು.
* ಗ್ರಾಮೀಣ ಪ್ರದೇಶದಲ್ಲಿ ಕೃಷಿ ಸಾಮಗ್ರಿಗಳನ್ನು ಖರೀದಿಸಿ ಮಾರಾಟ ಮಾಡುವ ಸಹಕಾರ ಸಂಘಗಳಿಗೆ ಹಾಗೂ ಖಾಸಗಿ ವ್ಯಾಪಾರಸ್ಥರಿಗೆ ಗೊಬ್ಬರ, ಬೀಜ, ಕ್ರಿಮಿನಾಶಕ, ಔಷಧ ಹಾಗೂ ರೈತರಿಗೆ ಬೇಕಾಗುವ ಆಧುನಿಕ ಕೃಷಿ ಸಾಮಗ್ರಿಗಳ ಸಗಟು ಹಾಗೂ ಚಿಲ್ಲರೆ ವ್ಯವಹಾರ ಮಾಡುವುದು.
* ಸ್ವಸಹಾಯ ಗುಂಪು ಅಥವಾ ಸಂಘಗಳಿಗೆ ಮತ್ತು ಸ್ತ್ರೀಶಕ್ತಿ ಸಂಘಗಳಿಗೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ನಬಾರ್ಡ್ ಮತ್ತು ಸರ್ಕಾರದ ಮಾರ್ಗಸೂಚಿ ಪ್ರಕಾರ ಸಾಲ ಸೌಲಭ್ಯ ಒದಗಿಸುವುದು.
* ಸದಸ್ಯರ ಸರ್ವತೋಮುಖ ಅಭಿವೃದ್ಧಿಗಾಗಿ ಪೂರಕವಾದ ಮತ್ತು ಮೇಲ್ಕಾಣಿಸಿದ ಉದ್ದೇಶಕ್ಕೆ ಒಳಪಟ್ಟು ಮತ್ತಿತರ ಕಾರ್ಯಗಳನ್ನು ಕೈಗೊಳ್ಳುವುದು.
* ಹಾಗೂ ಉಪನಿಯಮ ಸಂಖ್ಯೆ 4ರಂತೆ ಇನ್ನಿತರ ಚಟುವಟಿಕೆಗಳು.
# 4. ಅಭಿವೃದ್ಧಿಯ ಮುನ್ನೋಟ:-
ಸಂಘವು ತನ್ನ ಕಾರ್ಯ ವ್ಯಾಪ್ತಿಯ ರೈತ ಸದಸ್ಯರ ಏಳಿಗೆಗಾಗಿ ವಿವಿಧ ರೀತಿಯ ಹೊಸ ಸಾಲ ನೀಡುವಿಕೆ, ರೈತ ಪರಿಕರಗಳ ಮಾರಾಟ, ರೈತರಿಗೆ ವ್ಯಾಪಾರ ವ್ಯವಹಾರಗಳಿಗೆ ಉತ್ತೇಜನ ನೀಡುವುದು, ರೈತರಿಗೆ ಭೂಮಿಯಲ್ಲಿನ ತೇವಾಂಶ ಹಾಗೂ ಮಣ್ಣಿನ ಗುಣಮಟ್ಟಗಳ ಪರೀಕ್ಷೆಗಳನ್ನು ಸಂಘದ ಮುಖೇನ ನಡೆಸಿ ಸದಸ್ಯರುಗಳಿಗೆ ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡುವುದು ಹೀಗೇ ಸದಸ್ಯರುಗಳ ಏಳಿಗೆಯೊಂದಿಗೆ ಸಂಘದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು.# 5 ಸಂಘದ ಸದಸ್ಯತ್ವ:-
# 6. ಪಾಲು ಬಂಡವಾಳ:-
ಸಂಘವು 2019-20ರ ಮಾರ್ಚ್ 31ರ ಅಂತ್ಯಕ್ಕೆ ರೂ.8159694.00 ಗಳ ಪಾಲು ಬಂಡವಾಳವನ್ನು ಹೊಂದಿರುತ್ತದೆ.# 7. ಠೇವಣಿಗಳು:-
ಸಂಘವು 2019-20ರ ಮಾರ್ಚ್ 31ರ ಅಂತ್ಯಕ್ಕೆ 37840790.82 ಗಳ ಠೇವಣಾತಿಗಳನ್ನು ಹೊಂದಿರುತ್ತದೆ.# 8. ನಿಧಿಗಳು:-
ಸಂಘವು 2019-20ರ ಮಾರ್ಚ್ 31ರ ಅಂತ್ಯಕ್ಕೆ 3891036.23ಗಳ ವಿವಿಧ ರೀತಿಯ ನಿಧಿಗಳನ್ನು ಹೊಂದಿರುತ್ತದೆ.# 9. ಧನವಿನಿಯೋಗಗಳು:-
ಸಂಘವು 2019-20ರ ಮಾರ್ಚ್ 31ರ ಅಂತ್ಯಕ್ಕೆ ರೂ.25333947.00ಗಳ ಹೂಡಿಕೆಗಳನ್ನು ಮಾಡಲಾಗಿರುತ್ತದೆ.# 10. ಸದಸ್ಯರಿಗೆ ವಿತರಿಸಿದ ಸಾಲ:-
ಸಂಘವು 2019-20ರ ಮಾರ್ಚ್ 31ರ ಅಂತ್ಯಕ್ಕೆ ರೂ. 80428099.00ಗಳ ಸಾಲ ವಿತರಿಸಲಾಗಿದೆ.# 11. ಬ್ಯಾಂಕಿನ ವಹಿವಾಟು:-
ಸಂಘವು 2019-20ರ ಮಾರ್ಚ್ 31ರ ಅಂತ್ಯಕ್ಕೆ ರೂ. 489063971.96 ಗಳಾಗಿರುತ್ತದೆ.# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:-
ಸಂಘವು 2019-20ರ ಮಾರ್ಚ್ 31ರ ಅಂತ್ಯಕ್ಕೆ ರೂ. 2428138.09 ಗಳ ಲಾಭ ಗಳಿಸಿದ್ದು ಶೇ. 10ರ ದಿವಿಡೆಂಡ್ ಪಾವತಿಸಲಾಗಿದೆ.# 13. ಗೌರವ ಮತ್ತು ಪ್ರಶಸ್ತಿ:-
# 14. ಸ್ವ-ಸಹಾಯ ಗುಂಪುಗಳ ರಚನೆ:-
ಸಂಘವು 2019-20ರ ಮಾರ್ಚ್ 31ರ ಅಂತ್ಯಕ್ಕೆ 16 ಸ್ವ-ಸಹಾಯ ಗುಂಪುಗರು ವ್ಯವಹರಿಸುತ್ತಿದೆ.# 15. ಸಾಲ ಮರುಪಾವತಿ:-
ಸಂಘವು 2019-20ರ ಮಾರ್ಚ್ 31ರ ಅಂತ್ಯಕ್ಕೆ ಶೇ. 97.07 ಮರುಪಾವತಿ ಯಾಗಿರುತ್ತದೆ.# 16. ಆಡಿಟ್ ವರ್ಗ:-
ಸಂಘವು 2019-20ರ ಮಾರ್ಚ್ 31ರ ಅಂತ್ಯಕ್ಕೆ “ಬಿ”ವರ್ಗೀಕರಣ ದೊರೆತಿರುತ್ತದೆ.# 17. ಸಂಘದ ಸ್ಥಿರಾಸ್ತಿಗಳು:-
ಸಂಘವು 2019-20ರ ಮಾರ್ಚ್ 31ರ ಅಂತ್ಯಕ್ಕೆ ರೂ. 4878421.66ಗಳ ಸ್ಥಿರ ಹಾಗೂ ಚರಾಸ್ಥಿ ಹೊಂದಿರುತ್ತದೆ.# 18. ಸಂಘದ ಆಡಳಿತ ಮಂಡಳಿ:-
# 19. ಸಂಘದ ಸಿಬ್ಬಂದಿ ವರ್ಗ:-
1. ಟಿ.ಡಿ. ಭೀಮಯ್ಯ: ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ
2. ವಿ. ಆರ್. ವರುಣ್: ಗುಮಾಸ್ತ
3. ಎ.ಬಿ. ಚೇತನ್: ಗುಮಾಸ್ತ
4. ವಿ.ಎ. ಮಂಜಯ್ಯ: ಕಛೇರಿ ಸಹಾಯಕರು
5. ಹೆಚ್.ಕೆ. ಯೋಗೇಶ್: ಮಾರಾಟ ಸಹಾಯಕರು
# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-
ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ - ಬೈರಂಬಾಡ.Search Coorg Media
Coorg's Largest Online Media Network