ಬಲ್ಲಾರಂಡ ಮಣಿಉತ್ತಪ್ಪ, ಸಹಕಾರಿಗಳು: ಚೆಟ್ಟಳ್ಳಿ. Chettalli
ಬಲ್ಲಾರಂಡ ಮಣಿಉತ್ತಪ್ಪರವರು ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂದಿನ ಸಹಕಾರ ಸಂಘದ ಕಾರ್ಯದರ್ಶಿಗಳಾದ ಪೊನ್ನಂಪೇಟೆಯ ಚೆಂಗುವಳಂಡ ಚಿನ್ನಪ್ಪನವರ ಒತ್ತಾಸೆಯ ಮೇರೆಗೆ ಬಲ್ಲಾರಂಡ ಮಣಿಉತ್ತಪ್ಪರವರು ಸಹಕಾರ ಕ್ಷೇತ್ರದಲ್ಲಿ ತಮ್ಮದೆ ಆದ ರೀತಿಯಲ್ಲಿ ಸೇವೆ ಸಲ್ಲಿಸುವ ಮನೋಭಾವದಿಂದ 1997ರ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಆಯ್ಕೆಗೊಂಡು ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.
ನಂತರ 2000 ಇಸವಿಯಲ್ಲಿ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಲ್ಲಾರಂಡ ಮಣಿಉತ್ತಪ್ಪರವರು ಸ್ಪರ್ಧಿಸಿ ಆಯ್ಕೆಗೊಂಡು ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಅಲ್ಲಿಂದ 2003ರ ಚುನಾವಣೆಯಲ್ಲಿ ಆಯ್ಕೆಗೊಂಡು ಅಧ್ಯಕ್ಷರಾದರು. 2005ರ ಚುನಾವಣೆಯಲ್ಲಿ ಆಯ್ಕೆಗೊಂಡು ನಿರ್ದೇಶಕರಾದರು. ತದ ನಂತರ 2008ರ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಅಲ್ಲಿಂದ ಪ್ರಸ್ತುತ ಇಲ್ಲಿಯವರಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1991ರಲ್ಲಿ ಅಂದಿನ ಚೆಟ್ಟಳ್ಳಿ ವ್ಯವಸಾಯೋತ್ಪನ ಸಹಕಾರ ಸಂಘ ನಿಯಮಿತ (ವಿ.ಎಸ್.ಎಸ್.ಎನ್-VSSN) ಸದಸ್ಯತ್ವನ್ನು ಪಡೆದ ಬಲ್ಲಾರಂಡ ಮಣಿಉತ್ತಪ್ಪರವರು ಸರಿ ಸುಮಾರು 30 ವರ್ಷಗಳಿಂದ ಸಕಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
2008ರಲ್ಲಿ ನಾನು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಸಂದರ್ಭ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸುಮಾರು 4ಲಕ್ಷದ 70ಸಾವಿರ ರೂಪಾಯಿ ನಷ್ಟದಲ್ಲಿತ್ತು ಎಂದ ಬಲ್ಲಾರಂಡ ಮಣಿ ಉತ್ತಪ್ಪನವರು, ಅಲ್ಲಿಂದ ನಿರಂತರ 10ಲಕ್ಷ, 15ಲಕ್ಷ ಹೀಗೆ 2019-20ರ ಸಾಲಿನಲ್ಲಿ 35ಲಕ್ಷ ಲಾಭವನ್ನು ಪಡೆದು ಪ್ರಗತಿಯತ್ತ ಸಾಗುತ್ತಿದೆ ಎಂದರು. 2008ರಲ್ಲಿ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿತು ಎಂದು ಬಲ್ಲಾರಂಡ ಮಣಿಉತ್ತಪ್ಪನವರು ಈ ಸಂದರ್ಭದಲ್ಲಿ ತಿಳಿಸಿದರು.
2019-20ರ ಸಾಲಿನಲ್ಲಿ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 35 ಲಕ್ಷ ಲಾಭವನ್ನು ಪಡೆದಿದ್ದು, ಸಂಘವು ಲಾಭಗಳಿಸಲು ರೈತರು ಹಾಗೂ ಸದಸ್ಯರಿಗೆ ನೀಡಲ್ಪಟ್ಟ ಸಾಲಗಳ ಸಕಾಲದ ಮರು ಪಾವತಿ ಪ್ರಮುಖ ಕಾರಣ ಎಂದು ಬಲ್ಲಾರಂಡ ಮಣಿಉತ್ತಪ್ಪನವರು ತಿಳಿಸಿದರು. ಜಾಮೀನು ಸಾಲ, ಆಭರಣ ಸಾಲ, ಶಿಕ್ಷಣ ಸಾಲ, ವಾಹನ ಸಾಲ, ಆಸಾಮಿ ಸಾಲ, ಗೊಬ್ಬರ ಸಾಲ, ಪಿಗ್ಮಿ ಆಧಾರಿತ ಸಾಲ, ಸ್ವಸಹಾಯ ಸಂಘಗಳಿಗೆ ನೀಡುವ ಸಾಲ, ಗೊಬ್ಬರ ಮಾರಾಟ, ಕ್ರಿಮಿನಾಶಕ ಮಾರಾಟ, ಕೃಷಿ ಪರಿಕರಗಳ ಮಾರಾಟ, ಸಂಘದಿಂದ ನಡೆಸಲ್ಪಡುತ್ತಿರುವ ಮೋದಿ ಸಮುದಾಯ ಭವನದಲ್ಲಿ ಕಾರ್ಯಕ್ರಮಗಳಿಂದ ಬಾಡಿಗೆ ರೂಪದಲ್ಲಿ ದೊರೆಯುವ ಆಧಾಯ, ವಾಣಿಜ್ಯ ಮಳಿಗೆಗಳ ಬಾಡಿಗೆ, ಪೋಸ್ಟ್ ಆಫಿಸ್ ಬಾಡಿಗೆ, ನ್ಯಾಯ ಬೆಲೆ ಅಂಗಡಿಯಿಂದ ಬರುವ ಆಧಾಯ ಹಾಗೂ ಮುಂತಾದ ಮೂಲಗಳಿಂದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಆಧಾಯವನ್ನು ಗಳಿಸುತ್ತಾ ಲಾಭದ ಹಾದಿಯಲ್ಲಿ ಸಾಗುತ್ತಲಿದೆ ಎಂದು ಬಲ್ಲಾರಂಡ ಮಣಿಉತ್ತಪ್ಪ ತಿಳಿಸಿದರು.
ನನ್ನ ಅಧಿಕಾರವಧಿಯಲ್ಲಿ ಸುಮಾರು 1 ಕೋಟಿ 70ಲಕ್ಷವೆಚ್ಚದಲ್ಲಿ ನರೇಂದ್ರ ಮೋದಿ ಭವನವನ್ನು ನಿರ್ಮಿಸಿ, ಅದರಲ್ಲಿ ಗೊಬ್ಬರ ಗೋದಾಮು, ಸಭಾಂಗಣ, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ ಎಂದ ಬಲ್ಲಾರಂಡ ಮಣಿಉತ್ತಪ್ಪನವರು, ಈ ನರೇಂದ್ರ ಮೋದಿ ಭವನದಲ್ಲಿ, ವೀರಾಂಜನೇಯ, ಮಹಾಗಣಪತಿ, ಮಹಾವಿಷ್ಣು ದೇವರುಗಳ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದು, ಯಾವುದೇ ಅರ್ಚಕರ ಸಹಾಯವಿಲ್ಲದೆ ಅವರವರ ಭಾವಕ್ಕೆ ಅನುಗುಣವಾಗಿ ಸ್ವತಃ ಭಕ್ತಾದಿಗಳೆ ಪೂಜೆ ಸಲ್ಲಿಸುವ ವ್ಯವಸ್ಥೆಯಿದೆ. ಇಲ್ಲಿ ಪ್ರತಿ ನಿತ್ಯ ಭಕ್ತಾದಿಗಳು ಬಂದು ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದರು.
ತಾನು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ನೂತನ ಆಡಳಿತ ಮಂಡಳಿ ಕಚೇರಿ ನಿರ್ಮಾಣಕ್ಕೆ ಪೂರ್ಣ ಮಟ್ಟದಲ್ಲಿ ಸಹಕಾರ ನೀಡಿದೆ ಎಂದ ಬಲ್ಲಾರಂಡ ಮಣಿಉತ್ತಪ್ಪನವರು, ಪ್ರಸ್ತುತ ಈ ಆಡಳಿತ ಕಛೇರಿಯಲ್ಲಿ ಪುಣ್ಯಕೋಟಿ ಭವನ, ವಾಣಿಜ್ಯ ಸಂಕೀರ್ಣ, ಮೂರು ಸುಸಜ್ಜಿತ ಅಥಿತಿ ಗೃಹಗಳು, ಚೆಟ್ಟಳ್ಳಿ ಪೋಸ್ಟ್ ಆಫೀಸ್ ಕಾರ್ಯಾಚರಿಸಲು ಬಾಡಿಗೆ ರೂಪದಲ್ಲಿ ಕೊಠಡಿ ಅನುಕೂಲತೆ, ರೈತರ ಕಾಫಿ ಕರಿಮೆಣಸು ಅಡಮಾನಕ್ಕೆ ಸುಸಜ್ಜಿತ ಗೋದಾಮು, ಕಾಫಿ ಗುಣಮಟ್ಟ ಪರೀಕ್ಷಾ ಕೇಂದ್ರ(Coffee Outturn Testing Centre), ನ್ಯಾಯಬೆಲೆ ಅಂಗಡಿ, 5ರೂಪಾಯಿಗೆ 20ಲೀಟರ್ ಕುಡಿಯುವ ನೀರನ್ನು ಒದಗಿಸುವ ಕಾಯಿನ್ ಬೂತ್, ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ ಹಾಗೂ ಸಹಕಾರ ಸಪ್ತಾಹದಂದು ಧ್ವಜ ಹಾರಿಸುವ ನಿಟ್ಟಿನಲ್ಲಿ ಭವ್ಯವಾದ ಧ್ವಜ ಸ್ಥಂಬ, ಕನ್ನಡ ನಾಡಿನ ಜೀವ ನದಿ ಕೊಡಗಿನ ಕುಲ ದೇವತೆ ತಾಯಿ ಕಾವೇರಮ್ಮನ್ನ ವಿಗ್ರಹ, ಪಶುಪತಿನಾಥ ವಿಗ್ರಹ, ನಂದಿ ವಿಗ್ರಹ, ಶ್ರೀಕೃಷ್ಣ ವಿಗ್ರಹ ಹಾಗೂ ನಂದಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಬಲ್ಲಾರಂಡ ಮಣಿಉತ್ತಪ್ಪನವರು ತಿಳಿಸಿದರು. ಹಾಗೂ ಸಂಘದ ವತಿಯಿಂದ ಕಾವೇರಿ ತಿರ್ಥ ವಿತರಣೆ ಹಾಗೂ ಶಿವರಾತ್ರಿ ಉತ್ಸವಗಳನ್ನು ಆಚರಿಸಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಬಲ್ಲಾರಂಡ ಮಣಿಉತ್ತಪ್ಪ ತೀಳಿಸಿದರು.
ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸತತವಾಗಿ ಕೊಡಗು ಡಿ.ಸಿ.ಸಿ. ಬ್ಯಾಂಕ್‌ನಿಂದ ಉತ್ತಮ ಕಾರ್ಯನಿರ್ವಹಣೆಗಾಗಿ ಪ್ರಶಸ್ತಿಗಳನ್ನು ಪಡೆದು ಕೊಂಡಿದೆ ಎಂದ ಬಲ್ಲಾರಂಡ ಮಣಿಉತ್ತಪ್ಪನವರು, ಪಾರದರ್ಶಕ ಆಡಳಿತಕ್ಕಾಗಿ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನಿಂದಲೂ ಪ್ರಶಸ್ತಿಗಳನ್ನು ಪಡೆದು ಕೊಂಡಿದೆ ಎಂದರು.
ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ರಾಜಕೀಯ ರಹಿತವಾದ ಸಮಾನ ಮನಸ್ಕರ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ಬಲ್ಲಾರಂಡ ಮಣಿಉತ್ತಪ್ಪನವರು ತಿಳಿಸಿದರು.
ಒಂದು ಉತ್ತಮವಾದ ಜಾಗ ದೊರೆತರೆ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಚೆಟ್ಟಳ್ಳಿಯಲ್ಲಿ ಪೆಟ್ರೋಲ್ ಬಂಕ್ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗುತಿದೆ ಎಂದ ಬಲ್ಲಾರಂಡ ಮಣಿಉತ್ತಪ್ಪನವರು, ರೈತರ ಅನುಕೂಲಕ್ಕಾಗಿ ಸಂಘದ ವತಿಯಿಂದ ಮಣ್ಣು ಪರೀಕ್ಷಾ ಕೇಂದ್ರ ಪ್ರಾರಂಭಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು. ಮೋದಿ ಭವನದ ಇನ್ನಷ್ಟು ವಿಸ್ತಾರ ಕಾರ್ಯವು ತಮ್ಮ ಕ್ರಿಯಾ ಯೋಜನೆಯಲ್ಲಿದೆ ಎಂದು ಈ ಸಂದರ್ಭದಲ್ಲಿ ಬಲ್ಲಾರಂಡ ಮಣಿಉತ್ತಪನವರು ತಿಳಿಸಿದರು.
ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದ ಬಲ್ಲಾರಂಡ ಮಣಿಉತ್ತಪ್ಪನವರು, ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಇರಬಾರದು ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಎಂದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಮುಂದಿನ ಯುವಶಕ್ತಿಗೆ ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.
ಸಹಕಾರ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಲ್ಲಾರಂಡ ಮಣಿಉತ್ತಪ್ಪನವರು ಕೊಡಗು ಡಿ.ಸಿ.ಸಿ. ಬ್ಯಾಂಕ್‌ನಲ್ಲಿ 10 ವರ್ಷಗಳು ನಿರ್ದೇಶಕರಾಗಿ ಸೇವೆ. ಕೊಡಗು ಸಹಕಾರಿ ಯೂನಿಯನ್‌ನಲ್ಲಿ 5 ವರ್ಷಗಳ ಸೇವೆ. ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದಲ್ಲಿ 5 ವರ್ಷಗಳ ಸೇವೆ ಹಾಗೂ ಎ.ಪಿ.ಸಿ.ಎಂ.ಎಸ್. ಕುಶಾಲನಗರ 5ವರ್ಷ ಸೇವೆ. ಹೀಗೆ ಸಹಕಾರ ಕ್ಷೇತ್ರದ ಹಲವು ಮಜಲುಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.
ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಬಲ್ಲಾರಂಡ ಮಣಿ ಉತ್ತಪ್ಪನವರು, ಮೂರು ಅವಧಿಯಲ್ಲಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಹಾಗೂ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ. ಸೋಮವಾರ ಪೇಟೆ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ ಹಾಗೂ ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಕೊಡಗು ಜಿಲ್ಲಾ ಪಂಚಾಯಿತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬಿ.ಜೆ.ಪಿ.ಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲೂ ತಮ್ಮನ್ನು ಗುರುತಿಸಿಕೊಂಡಿರುವ ಬಲ್ಲಾರಂಡ ಮಣಿಉತ್ತಪ್ಪನವರು, ಕೊಡಗು ಜಿಲ್ಲಾ ಜನಪರ ಹೋರಾಟ ಸಮಿತಿಯ ಸ್ಥಾಪಕರು ಹಾಗು ಪ್ರಸ್ತುತ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿದ್ದಾರೆ.
ಈರಳೆವಳಮುಡಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ, ಚೆಟ್ಟಳ್ಳಿ ಪ್ರಾಥಮಿಕ ಶಾಲೆಯ ನಿರ್ದೇಶಕರಾಗಿ ಹಾಗೂ ಚೆಟ್ಟಳ್ಳಿ ಫ್ರೌಡಶಾಲೆಯ ನಿರ್ದೇಶಕರಾಗಿ ಶೈಕ್ಷಣಿಕ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವಾರು ಶಾಲೆಗಳಿಗೆ, ದೇವಾಲಯಗಳಿಗೆ, ಕಾರ್ಯಕ್ರಮಗಳಿಗೆ ಹಾಗೂ ದೀನ ದಲಿತರಿಗೆ ದಾನವನ್ನು ನೀಡಿ ಕೊಡುಗೈ ದಾನಿಗಳಾಗಿದ್ದಾರೆ.
ಮೂಲತಃ ಕೃಷಿಕರಾಗಿರುವ ಬಲ್ಲಾರಂಡ ಮಣಿ ಉತ್ತಪ್ಪನವರು ತಂದೆ ದಿವಂಗತ ಬಲ್ಲಾರಂಡ ಮಂದಣ್ಣ ಹಾಗೂ ದಿವಂಗತ ಮಾಚ್ಚಮ್ಮ ದಂಪತಿಗಳ ಹಿರಿಯ ಮಗನಾಗಿದ್ದಾರೆ. ಪತ್ನಿ ಗಂಗಮ್ಮ ಗೃಹಿಣಿಯಾಗಿದ್ದಾರೆ. ಹಿರಿಮಗಳು ಅಂಬಿಕಾರವರು ಕಂಬೀರಂಡ ರತನ್ ತಮ್ಮಯ್ಯನವರನ್ನು ವಿವಾಹವಾಗಿ ವೀರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ಬಿ.ಬಿ.ಎಂ. ಉಪನ್ಯಾಸಕರಾಗಿದ್ದಾರೆ. ಮಗ ಬಲ್ಲಾರಂಡ ಕಂಠಿ ಕಾರ್ಯಪ್ಪನವರು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ಬಿ.ಜೆ.ಪಿ.ಯ ಸಕ್ರೀಯ ಕಾರ್ಯಕರ್ತರು, ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು, ಭಜರಂಗದಳ ಕಾರ್ಯಕರ್ತರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕಾರಾಗಿದ್ದಾರೆ. ಬಲ್ಲಾರಂಡ ಕಂಠಿ ಕಾರ್ಯಪ್ಪನವರ ಪತ್ನಿ ಶೋಭಿತಾ ಗೃಹಿಣಿಯಾಗಿದ್ದಾರೆ. ಇಬ್ಬರು ಮಕ್ಕಳಾದ ಮಗ ಬುವೆನ್ ಬೋಪ್ಪಯ್ಯ ಹಾಗೂ ಮಗಳು ಭಕ್ತಿ ಬೋಜಮ್ಮ ಕಿರಿಯ ಮಕ್ಕಳಾಗಿದ್ದಾರೆ.
ಬಲ್ಲಾರಂಡ ಮಣಿಉತ್ತಪ್ಪನವರು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈರಳೆವಳಮುಡಿ ಗ್ರಾಮದಲ್ಲಿ ಪ್ರಸ್ತುತ ಕುಟುಂಬ ಸಮೇತ ನೆಲೆಸಿದ್ದಾರೆ. ಬಲ್ಲಾರಂಡ ಮಣಿಉತ್ತಪ್ಪನವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 26-07-2021
Search Coorg Media
Coorg's Largest Online Media Network
Tags
ಸಹಕಾರಿಗಳು