Header Ads Widget

Responsive Advertisement

ಮುದ್ದಂಡ ಬಿ. ಪೊನ್ನಪ್ಪ, ಸಹಕಾರಿಗಳು: ಕೆ.ನಿಡುಗಣೆ - K.Nidugane, Madikeri

ಮುದ್ದಂಡ ಬಿ. ಪೊನ್ನಪ್ಪ, ಸಹಕಾರಿಗಳು: ಕೆ.ನಿಡುಗಣೆ - K.Nidugane, Madikeriಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮುದ್ದಂಡ ಬಿ. ಪೊನ್ನಪ್ಪನವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.


ಕರವಲೆ ಭಗವತಿ ಧವಸ ಭಂಡಾರದಲ್ಲಿ ಸದಸ್ಯತ್ವವನ್ನು ಪಡೆದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುವ ಮುದ್ದಂಡ ಬಿ. ಪೊನ್ನಪ್ಪನವರು ಧವಸ ಬಂಡಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.


ಜನಸೇವೆ ಮಾಡುವ ನಿಟ್ಟಿನಲ್ಲಿ ಸಹಕಾರ ಕ್ಷೇತ್ರಕ್ಕೆ ಪೂರ್ಣಕಾಲಿಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಮುದ್ದಂಡ ಬಿ. ಪೊನ್ನಪ್ಪನವರು ಕಳೆದ 50 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


2007/2012, 2013,2018 ರವರೆಗೆ 2018 ರಿಂದ ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮುದ್ದಂಡ ಬಿ. ಪೊನ್ನಪ್ಪನವರು ಸೇವೆ ಸಲ್ಲಿಸುತ್ತಿದ್ದಾರೆ.


2019-20 ರ ಸಾಲಿನಲ್ಲಿ ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 5 ಲಕ್ಷದ 22 ಸಾವಿರ ಲಾಭ ಗಳಿಸಿದೆ. ಸಂಘದಿಂದ ಸದಸ್ಯರಿಗೆ ನೀಡಲ್ಪಟ್ಟ ಸಾಲಗಳ ಸಕಾಲದ  ಮರುಪಾವತಿ ಯಿಂದ ಸಂಘ ಲಾಭವನ್ನು ಪಡೆದಿದೆ ಎಂದ ಮುದ್ದಂಡ ಬಿ. ಪೊನ್ನಪ್ಪನವರು ಕೃಷಿ ಸಾಲ ಸ್ವಸಹಾಯ ಸಂಘಗಳಿಗೆ ಸಾಲ ಇವುಗಳಿಂದ ಸಂಘ ಲಾಭದ ಹಾದಿಯಲ್ಲಿದೆ ಎಂದು ತಿಳಿಸಿದರು.


ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ ಸದಸ್ಯರು ಸಿಬ್ಬಂದಿ ವರ್ಗ ಹಾಗೂ ಗ್ರಾಹಕರ ಸಹಕಾರ ಉತ್ತಮವಾಗಿರುತ್ತದೆ ಎಂದ ಮುದ್ದಂಡ ಬಿ. ಪೊನ್ನಪ್ಪನವರು ಸಂಘಕ್ಕೆ ಸ್ವಂತ ಜಾಗ ವಿಲ್ಲದ ಕಾರಣ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ ಎಂದರು.


ಮಡಿಕೇರಿ ಪಟ್ಟಣದ ಬಳಿ ಇರುವ ಕರವಲೆ ಬಾಡಗ ಗ್ರಾಮದಲ್ಲಿ ಸಂಘಕ್ಕಾಗಿ ಜಾಗವನ್ನು ಗುರುತಿಸಲಾಗಿದೆ ಎಂದ ಮುದ್ದಂಡ ಬಿ. ಪೊನ್ನಪ್ಪನವರು, ಸಂಘದ ಆಡಳಿತ ಕಚೇರಿ ಸಭಾಂಗಣದಲ್ಲಿ ಹಾಗೂ ಗೋದಾಮು ನಿರ್ಮಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ತಿಳಿಸಿದರು.


ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು ಎಂದು ಅಭಿಪ್ರಾಯಪಟ್ಟ ಮುದ್ದಂಡ ಬಿ. ಪೊನ್ನಪ್ಪನವರು, ಪಾರದರ್ಶಕ ಆಡಳಿತ, ಸಹಕಾರ ಸಂಘದ ಸದಸ್ಯರ ಕಷ್ಟಕಾರ್ಪಣ್ಯಗಳಿಗೆ ಸಹಕಾರ ಸಂಘಗಳು ಸ್ಪಂದಿಸಬೇಕು ಎಂದು ಸಲಹೆ ನೀಡಿದರು.


ಹೆಚ್ಚು ಹೆಚ್ಚು ಯುವಶಕ್ತಿಗಳು ಸೇವಾಮನೋಭಾವದಿಂದ ಸ್ವಾರ್ಥರಹಿತರಾಗಿ ಸಹಕಾರ ಕ್ಷೇತ್ರದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಿರುವ ಯುವ ಜನತೆಗೆ ತಮ್ಮ ಸಂದೇಶವನ್ನು ನೀಡಿದರು.


ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಮುದ್ದಂಡ ಬಿ. ಪೊನ್ನಪ್ಪನವರು ಗ್ರಾಮ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಜನಸಂಘದಿಂದ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿ ಪ್ರಸ್ತುತ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.


ಕರವಲೆ ಭಗವತಿ ಮಹಿಷಮರ್ದಿನಿ ದೇವಾಲಯದ ಅಧ್ಯಕ್ಷರಾಗಿ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

ಸರ್ಕಾರಿ ಪ್ರಾಥಮಿಕ ಶಾಲೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

ಮೂಲತಃ ಕೃಷಿಕರಾಗಿರುವ ಮುದ್ದಂಡ ಬಿ. ಪೊನ್ನಪ್ಪನವರು ದಿವಂಗತ ಮುದ್ದಂಡ ಬೋಪಯ್ಯ ಹಾಗೂ ತಂಗವ್ವ ದಂಪತಿಯ ಹಿರಿಯ ಮಗನಾಗಿದ್ದಾರೆ. ಇವರ ಸಹೋದರರಾದ ದೇವಯ್ಯನವರು ಹಿರಿಯ ಸಹಕಾರಿಗಳು ಹಾಗೂ ರಾಜಕಾರಣಿಯಾಗಿದ್ದಾರೆ. ಹಿರಿಯ ಮಗ ರಾಯ್ ತಮ್ಮಯ್ಯ ಮಡಿಕೇರಿ ತಾಲೂಕು ಪಂಚಾಯತಿ ಸದಸ್ಯರಾಗಿದ್ದಾರೆ. ಮಗಳು ರಾಕಿ ಉಪನ್ಯಾಸಕಿಯಾಗಿದ್ದಾರೆ. ಹಿರಿಯ ಮಗ ರಂಜಿತ್ ಉದ್ಯೋಗದಲ್ಲಿದ್ದಾರೆ. ಪ್ರಸ್ತುತ ಮುದ್ದಂಡ ಬಿ. ಪೊನ್ನಪ್ಪನವರು ಕುಟುಂಬ ಸಮೇತ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ನಿಡುಗಣೆ ಗ್ರಾಮದಲ್ಲಿ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ”  ಹಾರೈಸುತ್ತದೆ.ಸಂದರ್ಶನ ದಿನಾಂಕ: 09-04-2021Search Coorg Media

Coorg's Largest Online Media Network